Advertisement

ಹದಿಯಾ ಮಾತಿಗೆ ಬೆಲೆ ಕೊಡಬೇಕಾಗಿಲ್ಲ: ವಕೀಲ

06:30 AM Nov 27, 2017 | Team Udayavani |

ಹೊಸದಿಲ್ಲಿ: “ಹದಿಯಾ ಮಾನಸಿಕವಾಗಿ ಅಪಹರಣಕ್ಕೀಡಾಗಿದ್ದಾಳೆ. ಹಾಗಾಗಿ, ಅವಳ ಮಾತುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿಲ್ಲ.’

Advertisement

ಹೀಗೆಂದು ಹೇಳಿದ್ದು ಕೇರಳದ ಲವ್‌ ಜಿಹಾದ್‌ ಸಂತ್ರಸ್ತೆ ಎನ್ನಲಾದ ಅಖೀಲಾ ಅಲಿಯಾಸ್‌ ಹದಿಯಾಳ ಅಪ್ಪ ಅಶೋಕನ್‌ ಪರ ವಕೀಲ ರಘುನಾಥ್‌. ಶನಿವಾರ ವಷ್ಟೇ ಕೊಚ್ಚಿಯಿಂದ ದಿಲ್ಲಿಯತ್ತ ಪ್ರಯಾಣ ಬೆಳೆಸಿದ್ದ ಹದಿಯಾ ಸುದ್ದಿಗಾರರ ಮುಂದೆ ಮಾತನಾಡುತ್ತಾ, “ನಾನು ಈಗ ಮುಸ್ಲಿಂ. ಮತಾಂತರ ಆಗುವಂತೆ ಯಾರೂ ನನ್ನ ಮೇಲೆ ಒತ್ತಡ ಹೇರಿಲ್ಲ.

ನಾನು ನನ್ನ ಪತಿಯೊಂದಿಗೆ ಬಾಳಲು ಇಚ್ಛಿಸುತ್ತೇನೆ’ ಎಂದಿದ್ದಳು. ಅದಕ್ಕೆ ಹೊಸದಿಲ್ಲಿಯಲ್ಲಿ ರವಿವಾರ ಪ್ರತಿಕ್ರಿಯಿಸಿದ ವಕೀಲ ರಘುನಾಥ್‌, “ಆಕೆ ಒತ್ತಾಯಪೂರ್ವಕ ಮತಾಂತರದ ಬಲಿಪಶು. ಆಕೆಯನ್ನು ಕಾನೂನಿನಾಚೆ ಕರೆದೊಯ್ಯಲು ಮದುವೆ ಎಂಬ ಅಸ್ತ್ರವನ್ನು ಬಳಸಲಾಗಿದೆ. ಅವಳನ್ನು ಎಷ್ಟು ಬ್ರೈನ್‌ ವಾಷ್‌ ಮಾಡಲಾಗಿದೆ ಎಂದರೆ, ಹದಿಯಾ ಈಗ ಮಾನಸಿಕವಾಗಿ ಅಪಹರಣಕ್ಕೀಡಾ ಗಿದ್ದಾಳೆ. ಅವಳ ಮಾತಿಗೆ ಬೆಲೆ ಕೊಡಬೇಕಾಗಿಲ್ಲ’ ಎಂದಿ ದ್ದಾರೆ. ಇದೇ ವೇಳೆ, ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಹದಿಯಾಳ ಅಪ್ಪ ಏನು ಹೇಳುತ್ತಾರೆ ಎಂಬ ಪ್ರಶ್ನೆಗೆ, “ಅವರೇನು ಹೇಳುತ್ತಾರೆಂದು ಕೋರ್ಟ್‌ ನಲ್ಲೇ ಗೊತ್ತಾಗುತ್ತದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next