Advertisement

ಕೃಷಿ ಪರಂಪರೆ ಮರೆಯಬೇಡಿ: ಸದಾನಂದ ರೈ

08:48 PM Apr 11, 2019 | sudhir |

ಬದಿಯಡ್ಕ: ಬದಿಯಡ್ಕ ಪಂಚಾಯತ್‌ ಬಂಟರ ಸಂಘ ಮತ್ತು ಮಾತೃ ಸಂಘದ ಆಶ್ರಯದಲ್ಲಿ ಪೆರಡಾಲ ನವಜೀವನ ಶಾಲಾ ಸಭಾಂಗಣದಲ್ಲಿ ಬಂಟರ ಸಮ್ಮಿಲನ ಕಾರ್ಯಕ್ರಮ ಜರಗಿತು.

Advertisement

ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಸದಾನಂದ ರೈ ಅವರು ಬಂಟರ ಮೂಲ ಕಸುಬು ಕೃಷಿ. ಆದರೆ ಇಂದು ಕೃಷಿಯನ್ನು ಮರೆಯುತ್ತಿರುವ ಕೃಷಿ ಸಂಬಂಧಿಸಿದ ಆಚಾರ, ವಿಚಾರ, ಹಬ್ಬಗಳನ್ನು ಮುಂದಿನ ತಲೆಮಾರಿನವರಿಗೆ ತಿಳಿಸಬೇಕಾಗಿದೆ. ಆದ್ದರಿಂದ ಕೃಷಿ ಪರಂಪರೆಯನ್ನು ಉಳಿಸಬೇಕಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘದ ಅಧ್ಯಕ್ಷ ರವೀಂದ್ರನಾಥ್‌ ಶೆಟ್ಟಿ ವಳಮನೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಜಿಲ್ಲಾ ಬಂಟರ ಸಂಘದ ಕೋಶಾಧಿಕಾರಿ ಚಂದ್ರಹಾಸ ರೈ ಪೆರಡಾಲಗುತು,¤ ಕುಂಬಳೆ ಫಿರ್ಕಾ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮನೆ, ಜಿಲ್ಲಾ ಬಂಟರ ಸಂಘದ ಜತೆ ಕಾರ್ಯದರ್ಶಿ ಶ್ಯಾಮಲಾ ರೈ, ಕಾಸರಗೋಡು ವಲಯ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಕುಚ್ಚಿಕ್ಕಾಡು ಭಾಗವಹಿಸಿ ಮಾತನಾಡಿದರು.

ಬಾಲಕೃಷ್ಣ ರೈ ನಾರಂಪಾಡಿಗುತ್ತು, ಅಶೋಕ್‌ ರೈ ಕೊರೆಕ್ಕಾನ, ಬಿ.ಎಸ್‌.ಗಾಂಭೀರ್‌, ಅವಿನಾಶ್‌ ರೈ ವಳಮಲೆ, ಹರಿಪ್ರಸಾದ್‌ ರೈ ಪುತ್ರಕಳ, ಲತಾ ಬಾಲಕೃಷ್ಣ ರೈ, ವಿನಯ ಜೆ. ರೈ ಮೊದಲಾದವರು ಶುಭಹಾರೈಸಿದರು.
ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Advertisement

ಮಧ್ಯಾಹ್ನ ಬಂಟರ ಶೈಲಿಯ ಭೋಜನ ಏರ್ಪಡಿಸಲಾಗಿತ್ತು. ನವೀನ್‌ ರೈ ಪುತ್ರಕಳ, ಮಂಜುನಾಥ ಆಳ್ವ ಕಡಾರ್‌, ಪ್ರದೀಪ್‌ ಶೆಟ್ಟಿ ಬೇಳ ಸ್ಪರ್ಧೆಯ ತೀರ್ಪುಗಾರರಾಗಿ ಸಹಕಸಿದರು.

ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಜತೆ ಕಾರ್ಯದರ್ಶಿ ದಯಾನಂದ ರೈ ಮೇಗಿನ ಕಡಾರು ವಂದಿಸಿದರು. ಶ್ರದ್ಧಾ ರೈ ಪ್ರಾರ್ಥನೆ ಹಾಡಿದರು.

ಅರ್ಚನಾ ರೈ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next