Advertisement

ಹಕ್ಕುಪತ್ರ ಕೊಟ್ಟವರಿಗೆ ತೊಂದರೆ ಕೊಡ್ಬೇಡಿ

05:32 PM Oct 15, 2017 | Team Udayavani |

ಪಿರಿಯಾಪಟ್ಟಣ: ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ತಮ್ಮ ಕಾನೂನು ತೊಡಕುಗಳನ್ನು ಸರಿಪಡಿಸಿಕೊಂಡು ಹಕ್ಕು ಪತ್ರ ನೀಡಿರುವ ಪ್ರದೇಶಕ್ಕೆ ಸರಿಯಾದ ರೀತಿ ದಾಖಲಾತಿ ಸರಿಪಡಿಸಿ ಹಕ್ಕುಪತ್ರ ನೀಡಲು ಕ್ರಮವಹಿಸಬೇಕೆಂದು ಶಾಸಕ ಕೆ.ವೆಂಕಟೇಶ್‌ ತಿಳಿಸಿದರು.

Advertisement

ಪಟ್ಟಣದ ತಾಪಂ ಸುವರ್ಣ ಸೌಧದಲ್ಲಿ ನಡೆದ ಗಿರಿಜನರಿಗೆ ಸಮುದಾಯ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಿರಿಜನರಿಗೆ ಸಮುದಾಯ ಹಕ್ಕುಪತ್ರ ನೀಡಿದರೆ ಅರಣ್ಯ ಇಲಾಖೆ ಅಧಿಕಾರಿಗಳು ಮನೆ, ವಿದ್ಯುತ್‌, ಕುಡಿಯುವ ನೀರು ಶೌಚಾಲಯ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯ ಪಡೆಯಲು ಅಡ್ಡಿಯಾಗುತ್ತಿರುವುದು ಸರಿಯಲ್ಲ. ಹೀಗಾಗಿ ಜನರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕೆಂದು ತಿಳಿಸಿದರು. 

ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌. ರಾಮು ಮಾತನಾಡಿ, ಗಿರಿಜನರನ್ನು ಇತರ ರಂತೆಯೇ ಮಾನವರು ಎಂದು
ಪರಿಗಣಿಸಿ ಅರಣ್ಯ ಇಲಾಖೆ ಅಧಿಕಾರಿಗಳು ವರ್ತಿಸ ಬೇಕಾಗಿದೆ. ಸಂಬಂಧಪಟ್ಟ ಗ್ರಾಮ ಪಂಚಾಯ್ತಿಯಿಂದ ಅಗತ್ಯ ಸೌಲಭ್ಯವನ್ನು ಗಿರಿಜನರಿಗೆ ಒದಗಿಸಲು ಅಡ್ಡಿಪಡಿಸ ಲಾಗುತ್ತಿದೆ. ಇದನ್ನು ನಿಲ್ಲಿಸಬೇಕು ಎಂದು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ತಾಪಂ ಸದಸ್ಯ ಮುತ್ತು, ಹುಣಸೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಬ್‌ಕತ್‌ಹುಸೈನ್‌, ಗಿರಿಜನ ಮುಖಂಡರಾದ ಜಯಪ್ಪ, ಜಾನಕಮ್ಮ, ಶಾಂತಕುಮಾರ್‌, ಬಸಪ್ಪ ಮತ್ತಿತರರು ಮಾತನಾಡಿದರು. 

21 ಗಿರಿಜನ ಹಾಡಿಗಳ ಪೈಕಿ 6 ಹಾಡಿಗಳಿಗೆ ಈಗಾಗಲೇ ಸಮುದಾಯ ಹಕ್ಕು ಪತ್ರಗಳನ್ನು ನೀಡಲಾಗಿದೆ. ಬಾಕಿ ಉಳಿದಿದ್ದ 16 ಗಿರಿಜನ ಹಾಡಿಗಳ ಮುಖಂಡರಿಗೆ ಸಮುದಾಯ ಹಕ್ಕು ಪತ್ರ ವಿತರಿಸಲಾಯಿತು.

ಹುಣಸೂರು ಉಪವಿಭಾಗಾಧಿಕಾರಿ ಕೆ.ನಿತಿನ್‌, ತಾಪಂ ಅಧ್ಯಕ್ಷೆ ನಿರೂಪ, ತಾಪಂ ಸದಸ್ಯರಾದ ಮಲ್ಲಿಕಾರ್ಜುನ ಎಚ್‌.
ಎಸ್‌.ಶ್ರೀನಿವಾಸ್‌, ಗ್ರಾಪಂ ಅಧ್ಯಕ್ಷರಾದ ಮಂಗಳಗೌರಿ, ವರನಂಜಮ್ಮ, ಜಿಲ್ಲಾ ಗಿರಿಜನ ಅಭಿವೃದ್ಧಿ ಸಮನ್ವಯಾಧಿಕಾರಿ ಶಿವಕುಮಾರ್‌, ಎಸಿಎಫ್ ಸೋಮಪ್ಪ, ತಹಶೀಲ್ದಾರ್‌ ಜೆ.ಮಹೇಶ್‌, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಪ್ಪ, ಪಿಡಿಒ ದೇವರಾಜ್‌ ಮತ್ತಿತರರಿದ್ದರು. 

Advertisement

ವೈಯಕ್ತಿಕ ಹಕ್ಕುಪತ್ರ ಪಡೆಯಲು ಹಲವಾರು ಅನಧಿಕೃತ ಅರ್ಜಿಗಳು ಬಂದಿದೆ ಎಂದು ಅಧಿಕಾರಿಗಳು ತಮ್ಮ ಗಮನಕ್ಕೆ
ತಂದಿದ್ದಾರೆ. ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲಿಸಿ ಸೂಕ್ತ ವರದಿ ನೀಡುವುದಲ್ಲದೆ ಅವರಿಗೆ ದಾಖಲಾತಿಗಳನ್ನು ಹೊಂದಲು ಅವಕಾಶ ಮಾಡಿಕೊಡಬೇಕು.

ಕೆ.ವೆಂಕಟೇಶ್‌, ಶಾಸಕ 

Advertisement

Udayavani is now on Telegram. Click here to join our channel and stay updated with the latest news.

Next