Advertisement

ಮರಗಳನ್ನು ಕಡಿಯಬೇಡಿ: ಹರೀಶ್‌

09:10 PM Jun 05, 2019 | Lakshmi GovindaRaj |

ದೇವನಹಳ್ಳಿ: ಮರಗಳನ್ನು ಕಡಿಯದೆ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ಜಿಲ್ಲಾ 5 ನೇ ಅಪರ ಮತ್ತು ಸತ್ರ ನ್ಯಾಯಾಧೀಶ ಎ.ಹರೀಶ್‌ ತಿಳಿಸಿದರು.

Advertisement

ನಗರದ ಬೈಪಾಸ್‌ ರಸ್ತೆಯ ಘನ ತ್ಯಾಜ್ಯ ವಿಲೇವಾರಿ ಘಟಕದ ಆವರಣದಲ್ಲಿ ತಾಲೂಕು ಆಡಳಿತ, ತಾಪಂ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸಾಮಾಜಿಕ ಅರಣ್ಯ ವಲಯ, ಪುರಸಭೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಪ್ರಾದೇಶಿಕ ಅರಣ್ಯ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ತಾಲೂಕಿನಲ್ಲಿ 25 ಸಾವಿರ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮನುಷ್ಯನ ಸ್ವಾರ್ಥಕ್ಕಾಗಿ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿದು ಪರಿಸರ ನಾಶ ಮಾಡುತ್ತಿದ್ದೇವೆ. ಮುಂದಿನ ಪೀಳಿಗೆಗೆ ಪರಿಸರ ಉಳಿಸಬೇಕಾದರೆ ಪ್ರತಿ ಶಾಲಾ ಕಾಂಪೌಂಡ್‌ ಮತ್ತು ಸರ್ಕಾರಿ ಜಾಗಗಳಲ್ಲಿ ಸಸಿ ನೆಟ್ಟು ಪೋಷಿಸಬೇಕಾಗಿದೆ ಎಂದು ತಿಳಿಸಿದರು.

ಪ್ರತಿಯೊಬ್ಬರೂ ಒಂದೊಂದು ಸಸಿಯನ್ನು ದತ್ತು ಪಡೆದು ಬೆಳೆಸುವ ನಿಟ್ಟಿನಲ್ಲಿ ಸಂಕಲ್ಪ ಮಾಡಬೇಕು. ಪರಿಸರ ಉತ್ತಮವಾಗಿದ್ದರೆ ಆರೋಗ್ಯವೂ ಉತ್ತಮವಾಗಿರುತ್ತದೆ. ಎಲ್ಲಾ ವಿಷಯಕ್ಕಿಂತ ಪರಿಸರಕ್ಕೆ ಉತ್ತಮ ಆದ್ಯತೆ ನೀಡಬೇಕು ಎಂದು ಹೇಳಿದರು.

ಶಾಸಕ ನಿಸರ್ಗ ಎಲ್‌ ಎನ್‌ ನಾರಾಯಣಸ್ವಾಮಿ ಮಾತನಾಡಿ, ಪರಿಸರವನ್ನು ಹೊರತುಪಡಿಸಿ ಮಾನವನ ಬದುಕು ಊಹಿಸುವುದಕ್ಕೂ ಅಸಾಧ್ಯ. ಸ್ಮಶಾನ, ಕೆರೆ ಅಂಗಳ, ಗುಂಡು ತೋಪು, ಇತರೆ ಸರ್ಕಾರಿ ಜಾಗ, ಶಾಲೆ ಆವರಣ ಮತ್ತು ಹೊಲದಲ್ಲಿ ಸಸಿ ನೆಡಬೇಕಿದೆ. ಸುಂದರ ಗಾಳಿ ಹಸಿರು ವಾತಾವರಣದ್ದರೆ ಮನುಷ್ಯರ ಬದುಕು ಹಸನಾಗುತ್ತದೆ ಎಂದು ಸಲಹೆ ನೀಡಿದರು.

Advertisement

ಈ ವೇಳೆ ಹಿರಿಯ ಸಿವಿಲ್‌ ನ್ಯಾಯಾಧೀಶ ದಿಲೀಪ್‌ ಕುಮಾರ್‌, ಪ್ರಧಾನ ಸಿವಿಲ್‌ ನ್ಯಾಯಾಧೀಶ ಕೆ.ಸಂದೇಶ್‌, ಅಪರ ಸಿವಿಲ್‌ ನ್ಯಾಯಾಧೀಶೆ ಯೋಗೇಶ್ವರಿ, ಪುರಸಭಾ ಮುಖ್ಯಾಧಿಕಾರಿ ಹನುಮಂತೇಗೌಡ, ತಾಪಂ ಇಒ ಮುರುಡಯ್ಯ, ಬಿಇಒ ಗಾಯಿತ್ರಿದೇವಿ, ವಕೀಲರ ಸಂಘದ ತಾಲೂಕು ಉಪಾಧ್ಯಕ್ಷ ಜಯರಾಮಪ್ಪ, ಕಾರ್ಯದರ್ಶಿ ಎಚ್‌.ಸಿ.ಆನಂದ್‌, ಖಜಾಂಚಿ ಸಿ.ವೆಂಕಟೇಶ್‌, ವಲಯ ಸಾಮಾಜಿಕ ಅರಣ್ಯ ಅಧಿಕಾರಿ ಪುಷ್ಪಾ, ವಕೀಲರ ಸಂಘದ ಸದಸ್ಯರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next