Advertisement

ಸೇವೆ ಮಾಡದಿದ್ದರೆ ರಾಜಕೀಯಕ್ಕೆ ಬರಬಾರದು

03:17 PM May 23, 2022 | Team Udayavani |

ಕಂಪ್ಲಿ: ಬಡಜನರ, ಸಾರ್ವಜನಿಕರ ಹಾಗೂ ಮತದಾರರ ಸೇವೆ ಮಾಡದಿದ್ದರೆ ರಾಜಕೀಯಕ್ಕೆ ಬರಬಾರದು ಎಂದು ಮಾಜಿ ಶಾಸಕ, ಕೆಪಿಸಿಸಿ ಮಾಜಿ ಉಪಾಧ್ಯಕ್ಷ ನಾರಾ ಸೂರ್ಯನಾರಾಯಣರೆಡ್ಡಿ ಅಭಿಪ್ರಾಯ ಪಟ್ಟರು.

Advertisement

ಅವರು ಕೋಟೆ ನದಿ ತೀರದಲ್ಲಿ ತಮ್ಮ ಸ್ವಂತ ಹಣದಿಂದ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ 3.50. ಲಕ್ಷರೂ ವೆಚ್ಚದ ಸ್ನಾನಘಟ್ಟ, ಮೆಟ್ಟಿಲು ಮತ್ತು 18ನೇ ವಾರ್ಡಿನಲ್ಲಿ ಮುಸ್ಲಿಂರಿಗಾಗಿ ನಿರ್ಮಿಸಿರುವ 3ಲಕ್ಷರೂ ವೆಚ್ಚದ ಮದರಸಾ ಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಜನರು ಸಾರ್ವಜನಿಕರ ಸೇವೆಗಾಗಿ ಆಯ್ಕೆ ಮಾಡಿರುತ್ತಾರೆ. ಆದರೆ ಅವರ ಸೇವೆ, ಸಹಾಯ ಮಾಡದಿದ್ದರೆ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿ ಮಾಡುವುದಾದರೂ ಏಕೆ? ಜನರ ಸೇವೆ ಮಾಡದಿದ್ದರೆ ರಾಜಕಾರಣಕ್ಕೆ ಬರಬಾರದು ಎಂದರು.

ಶ್ರೀ ರಾಘವೇಂದ್ರಸ್ವಾಮಿಗಳ ಅನುಗ್ರಹದಿಂದ ಆರ್ಥಿಕವಾಗಿ ಚೆನ್ನಾಗಿದ್ದೇನೆ. ಸ್ವಾಮೀಜಿಗಳು ತಮಗೆ ನ್ಯಾಯವಾದ ಮಾರ್ಗದಲ್ಲಿ ದುಡಿ, ಜೀವನಕ್ಕೆ ಬೇಕಾಗುವಷ್ಟು ಇಟ್ಟುಕೊಂದು ಉಳಿದದ್ದನ್ನು ಅಗತ್ಯವಿರುವವರಿಗೆ ದಾನ ಮಾಡು ಎಂದು ಆರ್ಶೀವದಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತಮ್ಮಿಂದಾದ ಸಹಾಯವನ್ನು ಸಾರ್ವಜನಿಕರಿಗೆ ಮಾಡುತ್ತಿದ್ದೇನೆ. ಇದರಲ್ಲಿ ರಾಜಕೀಯವಾಗಲಿ, ಸ್ವಾರ್ಥವಾಗಲಿ ಇಲ್ಲ. ಕಳೆದ ಕೆಲ ತಿಂಗಳುಗಳ ಹಿಂದೆ ಕಂಪ್ಲಿಗೆ ಬಂದಾಗ ನದಿ ತೀರಕ್ಕೆ ಆಗಮಿಸಿದ್ದೆ, ಆಗ ನದಿತೀರದಲ್ಲಿ ಮಹಿಳೆಯರಿಗೆ, ವೃದ್ಧರಿಗೆ ತೊಂದರೆಯಾಗುವುದನ್ನು ಗಮನಿಸಿದ್ದೆ, ಜೊತೆಗೆ 18ನೇ ವಾರ್ಡಿನಲ್ಲಿ ಮುಸ್ಲಿಂರ ಮದರಸಾ ಭವನ ಶಿಥಿಲಗೊಂಡಿದ್ದನ್ನು ವೀಕ್ಷಿಸಿದ್ದೆ ಅವರ ಅನುಕೂಲಕ್ಕಾಗಿ ಇವುಗಳನ್ನು ನಿರ್ಮಿಸಿಕೊಟ್ಟಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಕೆ. ಶ್ರೀನಿವಾಸರಾವು, ಪುರಸಭೆ ಮಾಜಿ ಅಧ್ಯಕ್ಷ ಎಂ. ಸುಧೀರ್‌, ಸದಸ್ಯರಾದ ಬಟ್ಟಾ ಪ್ರಸಾದ್‌, ಕೆ.ಎಸ್. ಚಾಂದ್‌ ಬಾಷಾ, ಲಡ್ಡು ಹೊನ್ನೂರವಲಿ, ಎಂ. ಉಸ್ಮಾನ್‌, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಇಟಗಿ ಬಸವರಾಜಗೌಡ, ಮುಖಂಡರಾದ ಬಿ.ನಾರಾಯಣಪ್ಪ, ವೆಂಕನಗೌಡ, ಹೊಸಕೋಟೆ ಜಗದೀಶಗೌಡ, ಕರಿಬಸವನಗೌಡ, ಎಲ್‌. ರಾಮಾನಾಯ್ಡು, ಕೇಶವರೆಡ್ಡಿ, ಸುರೇಶರೆಡ್ಡಿ, ಅಕ್ಕಿ ಜಿಲಾನ್‌, ರಾಮಕೃಷ್ಣ ಕಂಬಳಿ, ಸತ್ಯಪ್ಪ, ಶ್ರೀನಿವಾಸ್‌, ದಮ್ಮೂರು ವೀರೇಶ್‌, ಆರ್‌.ಪಿ. ಶಶಿಕುಮಾರ್‌, ಮುಸ್ಲಿಂ ಮುಖಂಡರಾದ ಹಾಜಿ ಜಿಯಾಉದ್ದೀನ್‌, ನವಾಬ್‌, ಮಹ್ಮದ್‌ ಗೌಸ್‌, ಇಸೂಫ್‌, ಇಸ್ಮಾಯಿಲ್‌, ನಿಸಾರ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next