ಚಾಮುಂಡಿಬೆಟ್ಟದಲ್ಲಿ ಕರ್ನಾಟಕ ವಿಕಾಸ ವಾಹಿನಿಗೆ ಚಾಲನೆ, ಉತ್ತನಹಳ್ಳಿ ಜ್ವಾಲಾಮುಖೀ ತ್ರಿಪುರ ಸುಂದರಿ ಅಮ್ಮನವರ ದರ್ಶನ ಹಾಗೂ ಹಿನಕಲ್‌ನ ನನ್ನೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ಎಲ್ಲ ಸಂದರ್ಭದಲ್ಲೂ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡ ದೇವೇಗೌಡರು, ಸಮಾವೇಶದ ವೇದಿಕೆಯಲ್ಲಿ ಸುದೀರ್ಘ ಭಾಷಣ ಮಾಡುತ್ತಾರೆಂಬ ನಿರೀಕ್ಷೆ ಇತ್ತು. ಆದರೆ, ಸಮಯದ ಅಭಾವದ ಕಾರಣ ನೀಡಿ ಅಲ್ಲಿಯೂ ಕೂಡ ಭಾಷಣ ಮಾಡದೆ ಹೊರಟರು.
Advertisement
ಈ ಮಧ್ಯೆ, ಸೋಮವಾರ ಹರದನಹಳ್ಳಿಯಲ್ಲಿ ನಡೆದ ಪೂಜೆಯಲ್ಲಿ ಪಾಲ್ಗೊಂಡಿದ್ದ ಎಚ್.ಡಿ.ರೇವಣ್ಣ ಮತ್ತು ಅವರ ಕುಟುಂಬದವರು ಸಮಾವೇಶದಿಂದ ದೂರವೇ ಉಳಿದದ್ದು ಚರ್ಚೆಗೆ ಗ್ರಾಸವಾಗಿತ್ತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಾರೆಂಬ ಕಾರಣಕ್ಕೆ ಈ ಸಮಾವೇಶ ಆಯೋಜಿಸಿಲ್ಲ ಎಂದು ಕುಮಾರಸ್ವಾಮಿ ಹೇಳಿದರಾದರೂ ಚಾಮುಂಡೇಶ್ವರಿಯಲ್ಲಿಜೆಡಿಎಸ್ ಶಕ್ತಿ ಪ್ರದರ್ಶನಕ್ಕೆ ಈ ಸಮಾವೇಶ ಸಾಕ್ಷಿಯಾಯಿತು. ನೂರಾರು ವಾಹನಗಳಲ್ಲಿ ಸಮಾವೇಶಕ್ಕೆ ಜನರನ್ನು ಕರೆ ತರಲಾಗಿತ್ತು. ಹೀಗಾಗಿ ಸಮಾವೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು.
ಸಮಾವೇಶಕ್ಕೆ ಬರುವ ಕಾರ್ಯಕರ್ತರಿಗೆ ಸಾರ್ವಜನಿಕವಾಗಿ ಹಣ ಹಂಚಿದ ಘಟನೆ ನಡೆದಿದೆ. ರಿಂಗ್ ರಸ್ತೆಯ ಎಚ್.ಡಿ.ಕೋಟೆ ಜಂಕ್ಷನ್‌ನಲ್ಲಿ ಗುಂಪು ಕಟ್ಟಿಕೊಂಡು ಸಮಾವೇಶಕ್ಕೆ ದ್ವಿಚಕ್ರ ವಾಹನಗಳಲ್ಲಿ ಹಾಗೂ ಬಸ್‌ಗಳಲ್ಲಿ ಹೊರಡುವ ಜನರಿಗೆ 500 ರೂ.ನೋಟು ನೀಡಿ ಕಳುಹಿಸಲಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.