Advertisement

ಧರ್ಮ ಒಡೆಯುವ ಕೆಲಸ ನಡೆಯದು: ಡಾ|ಅನ್ನದಾನ ಶ್ರೀ

01:37 PM May 08, 2019 | Suhan S |

ಕನಕಗಿರಿ: ವೀರಶೈವ ಮತ್ತು ಲಿಂಗಾಯತ ಧರ್ಮ ಎರಡು ಒಂದೇಯಾಗಿದ್ದು, ಬೇರೆ ಬೇರೆ ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅನ್ನದಾನೀಶ್ವರ ಸಂಸ್ಥಾನಮಠ ಮುಂಡರಗಿಯ ನಾಡೋಜ ಡಾ| ಅನ್ನದಾನ ಸ್ವಾಮೀಜಿ ಹೇಳಿದರು.

Advertisement

ಪಟ್ಟಣ ಸುರ್ವಣಗಿರಿ ವಿರಕ್ತಮಠದ ಆವರಣದಲ್ಲಿ ಬಸವ ಜಯಂತಿ ಪ್ರಯುಕ್ತ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆಲವರು ವೀರಶೈವ, ಲಿಂಗಾಯತ ಧರ್ಮದ ಆಚಾರ ವಿಚಾರ ಗೊತ್ತಿರದೇ ಧರ್ಮವನ್ನು ಒಡೆಯುವ ಕೆಲಸದಲ್ಲಿ ತೋಡಗಿದ್ದಾರೆ. ಧರ್ಮ ಒಡೆಯುವ ಕೆಲಸ ಎಂದು ನಡೆಯದು, ಅಂತಹವರಿಗೆ ಜನರು ಈಗಾಗಲೇ ತಕ್ಕ ಪಾಠ ಕಲಿಸಿದ್ದಾರೆ. ಬಸವಣ್ಣನವರು ಹಾಕಿಕೊಟ್ಟ ಮಾರ್ಗದಡಿ ಕಾಯಕವೇ ಕೈಲಾಸವೆಂದು ಜೀವನ ಮಾಡಿದಾಗ ಜೀವನ ಸಾರ್ಥಕವಾಗುತ್ತದೆ. ಶಿಕ್ಷಣ, ಅನ್ನ ದಾಸೋಹ ಮಾಡುವ ಮೂಲಕ ಕನಕಗಿರಿ ಸುವರ್ಣಗಿರಿ ವಿರಕ್ತಮಠ ಸಮಾಜಕ್ಕೆ ತನ್ನದೇ ಆದ ಕೂಡುಗೆಯನ್ನು ನೀಡಿದೆ ಎಂದರು.

ಅನ್ನದಾನೀಶ್ವರ ಸಂಸ್ಥಾನಮಠ ಮುಂಡರಗಿಯ ನಾಡೋಜ ಡಾ| ಅನ್ನದಾನ ಸ್ವಾಮೀಜಿ ಪಟ್ಟಾಧಿಕಾರದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಪಟ್ಟಣದ ಸುವರ್ಣಗಿರಿ ವಿರಕ್ತಮಠದ ವತಿಯಿಂದ ಗುರುವಂದನೆ ಸಲ್ಲಿಸಲಾಯಿತು. ದೂರದರ್ಶನ ಮತ್ತು ಆಕಾಶವಾಣಿ ಕಲಾವಿದ ಅಂಬಯ್ಯ ನೂಲಿ ವಿಶೇಷ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಂತರ ಮಠದವತಿಯಿಂದ ಸುವರ್ಣಗಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸುವರ್ಣಗಿರಿ ವಿರಕ್ತಮಠದ ಡಾ| ಚನ್ನಮಲ್ಲಸ್ವಾಮೀಜಿ, ಪ್ರಭುಶಂಕರೇಶ್ವರ ಸಂಸ್ಥಾನಮಠ ಅಮೀನಗಡದ ಶಂಕರರಾಜೇಂದ್ರ ಸ್ವಾಮೀಜಿ, ಅನ್ನದಾನೀಶ್ವರ ಸಂಸ್ಥಾನಮಠದ ಉತ್ತರಾಧಿಕಾರ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀನಗರ ಗಡ್ಡಿಮಠದ ಶಾಂತಲಿಂಗ ಸ್ವಾಮೀಜಿ, ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಅನ್ನದಾನೀಶ್ವರ ದೇವಮಂದಿರದ ಅಭಿನವ ಮೃತ್ಯುಂಜಯ ಸ್ವಾಮೀಜಿ, ಶ್ರೀವಿರಕ್ತಮಠ ನರಗುಂದದ ಶಿವಕುಮಾರ ಸ್ವಾಮೀಜಿ, ಪಶ್ಚೀಮಾದ್ರಿ ವಿರಕ್ತಮಠ ನೀರಗಡಗೊಂಬದ ಪಂಚಮ ಸಿದ್ದಲಿಂಗ ಸ್ವಾಮೀಜಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next