ಉದ್ದೇಶದಿಂದ ಅನೇಕ ಉಚಿತ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ಶಾಸಕ ಶಿವರಾಮ ಹೆಬ್ಟಾರ್ ಹೇಳಿದರು.
Advertisement
ಅವರು ತಾಲೂಕಿನ ಕಂಚಿಕೊಪ್ಪ ಸ.ಹಿ.ಪ್ರಾ ಶಾಲೆಯ ಸುವರ್ಣ ಸಂಭ್ರಮ, ಶೈಕ್ಷಣಿಕ ಉತ್ಸವ, ಇ-ಕಲಿಕಾ ಕೊಠಡಿ, ವಾರ್ಷಿಕೋತ್ಸವ ಉದ್ಘಾಟಿಸಿ ಶಾಲಾಭಿವೃದ್ಧಿ ಸಮಿತಿ ಮಾಜಿ ಮತ್ತು ಹಾಲಿ ಅಧ್ಯಕ್ಷರನ್ನು, ಶಾಲೆಯಲ್ಲಿ ಕಾರ್ಯನಿರ್ವಹಿಸಿದ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು. ಮಾಜಿ ಶಾಸಕ ವಿ.ಎಸ್. ಪಾಟೀಲ್ ಮಾತನಾಡಿ, ಶಿಕ್ಷಣಕ್ಕಾಗಿ ಹಿರಿಯರು ನಿರ್ಮಿಸಿದ ಭದ್ರಬುನಾದಿಯ ಪರಿಣಾಮ ನಮ್ಮೆಲ್ಲರ ಬಾಳಿಗೆ ಬೆಳಕು ನೀಡಿದೆ ಎಂದರು. ಶಾಲಾ ಸಂಸ್ಥಾಪಕ ಆರ್. ಶ್ರೀನಿವಾಸರಾವ್ ಅಧ್ಯಕ್ಷತೆ ವಹಿಸಿದ್ದರು.
(ಸತೀಶ ಪಟಗಾರ್), ಕೆ.ವೈ. ಪಡ್ತಿ, ವಿ.ಜಿ.ಹೆಗಡೆ, ಸುನೀಲ್.ಕೆ.ಬಿ, ಎ.ಜಿ.ಸಿನ್ನೂರ್, ರಾಘವೇಂದ್ರ ಕುಲಕರ್ಣಿ, ಜಿ.ಆರ್.ಫಾಯ್ದೆ, ಪ್ರವೀಣ ಶಿಡ್ಲಾಪುರ, ಗೀತಾ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ರಮೇಶರಾವ್ ಸ್ವಾಗತಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಮಂಜಯ್ಯ ಜೈನ್ ವಂದಿಸಿದರು. ನಂತರ ಶಾಲೆಯ ಹಳೆಯ ಮತ್ತು ಹಾಲಿ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.