ನಂಜನಗೂಡು: ಟಿ.ನರಸೀಪುರ, ವರುಣಾ ಸೇರಿದಂತೆ ರಾಜ್ಯದ ಯಾವುದೇ ಕ್ಷೇತ್ರದಲ್ಲೂ ಆಂತರಿಕ ಅಥವಾ ಬಹಿರಂಗ ಹೊಂದಾಣಿಕೆ ಇಲ್ಲ.ವರುಣಾ ಕ್ಷೇತ್ರದ ಜನತೆ ಯಾವುದೇ ಭಯ ಅಂಜಿಕೆಯಿಲ್ಲದೇ ಸಿದ್ದರಾಮಯ್ಯ ವಿರುದ್ಧ ಮತ ಚಲಾಯಿಸಿ ಕಾಂಗ್ರೆಸ್ ದರ್ಪದ ಆಡಳಿತಕ್ಕೆ ಕೊನೆ ಹಾಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಶುಕ್ರವಾರ ಕ್ಷೇತ್ರದ ಎಸ್. ಹೊಸಕೋಟೆ ಗ್ರಾಮದಲ್ಲಿ ಪಕ್ಷದ ಕುಮಾರ ಪರ್ವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾರ್ಯಕರ್ತರ ದುಡಿಮೆಯ ಫಲವಾಗಿ ಅಧಿಕಾರ ಅನುಭವಿಸಿದ ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಈಗ ತಮ್ಮ ಮಕ್ಕಳಿಗಾಗಿ ಕ್ಷೇತ್ರ ತ್ಯಾಗ ಮಾಡುತ್ತಾ ಕಾರ್ಯಕರ್ತರಿಗೆ ದ್ರೋಹ ಬಗೆದಿದ್ದಾರೆಂದು ಛೇಡಿಸಿದರು.
ಟಿ.ನರಸೀಪುರ, ವರುಣಾ ಸೇರಿದಂತೆ ರಾಜ್ಯದ ಯಾವುದೇ ಕ್ಷೇತ್ರದಲ್ಲೂ ಆಂತರಿಕ ಅಥವಾ ಬಹಿರಂಗ ಹೊಂದಾಣಿಕೆ ಇಲ್ಲ. ವರುಣಾ ಕ್ಷೇತ್ರದ ಜನತೆ ಯಾವುದೇ ಭಯ ಅಂಜಿಕೆಯಿಲ್ಲದೇ ಸಿದ್ದರಾಮಯ್ಯ ವಿರುದ್ಧ ಮತ ಚಲಾಯಿಸಿ ಎಂದು ಮನವಿ ಮಾಡಿದರು. ಮುಖ್ಯಮಂತ್ರಿಯ ಸಲಹೆಗಾರ ಕೆಂಪಯ್ಯ ಮುಂಬರುವ ದಿನಗಳಲ್ಲಿ ಪೊಲೀಸ್ ವ್ಯಾನ್‌ನಲ್ಲೇ ಇಲ್ಲಿಗೆ ಹಣ ತಂದುಕೊಡಲಿದ್ದಾರೆ. ಆ ಹಣದಲ್ಲಿ ಇಲ್ಲಿನ ಮರಳಿನ ಹಣದ ಪಾಲೂ ಇದೆ . ಆದರೆ, ಪಾಪದ ಆ ಹಣಕ್ಕೆ ತಲೆ ಭಾಗದೆ ಕೈ ವಿರುದ್ಧ ನಿವು ಮತ ಚಲಾಯಿಸಿ ಪ್ರಜಾಪ್ರಭುತ್ವ ಉಳಿಸಿ ಎಂದರು.
ರಾಜ್ಯದ ನೆಮ್ಮದಿಗೆ ಎಚ್ಡಕೆ ಸಿಎಂ ಮಾಡಿ: ಬಿಎಸ್‌ಪಿ ರಾಜ್ಯಾಧ್ಯಕ್ಷರಾದ ಎನ್.ಮಹೇಶ್ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಜಾತಿ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇದರಿಂದ ಪ್ರಜಾ ಪ್ರಭುತ್ವ ಹಾಳಾಗುತ್ತಿದೆ. ಜಾತಿ ಧರ್ಮವನ್ನು ಹೊರಗಿಟ್ಟು ರಾಜ್ಯದ ಆರೂವರೆ ಕೋಟಿ ಜನರನ್ನು ನೆಮ್ಮದಿ ಯಾಗಿರಿಸಲು ಹೆಚ್.ಡಿ, ಕುಮಾರಸ್ವಾಮಿಯರ ವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕು. ಜನತೆ ಯಿಂದಲೇ ಬಿಂಬಿತವಾದ ಎಚ್.ವಿಶ್ವನಾಥ ಹಾಗೂ ಶ್ರೀನಿವಾಸ ಪ್ರಸಾದ ಅವರನ್ನು ಪಕ್ಷದಿಂದಲೇ ಹೊರಹೋಗುವಂತೆ ಮಾಡಿದ್ದೂ ಸಹ ನಿಮ್ಮ ಸಾಧನೆಯಲ್ಲವೆ ಎಂದು ಅವರು ಸಿದ್ದರಾಮಯ್ಯ ಅವರನ್ನ ಛೇಡಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ರೈತರು ಮೂರು ವರ್ಷಗಳ ಕಾಲ ಬರಗಾಲದಿಂದ ತತ್ತರಿಸಿದ್ದಾರೆ. ಬೆಳೆಸಾಲ ಮನ್ನಾವಾಗಿಲ್ಲಾ, ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ರೈತರ ಸಾಲವನ್ನು ಮನ್ನಾ ಮಾಡಲಿದ್ದಾರೆ. ಸಾವಿರಾರು ಕೋಟಿ ಸಾಲವನ್ನು ಬ್ಯಾಂಕ್‌ಗಳಿಗೆ ಕಟ್ಟಬೇಕಾದ ವಿಜಯ್‌ಮಲ್ಯ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲಾ ಈ ದೇಶದ ರೈತರು ಲಕ್ಷ ರೂ.ಗಳ ಸಾಲಕ್ಕಾಗಿ ಮಾನ ಮರ್ಯಾದೆಗೊಸ್ಕರ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ವಿಷಾದನೀಯ. ಕೇಂದ್ರ ಸರ್ಕಾರ ಉದ್ಯಮಿಗಳಿಗೆ . ಶ್ರೀಮಂತರಿಗೆ, ಬಂಡವಾಳ ಶಾಹಿಗಳಿಗೆ 2 ಲಕ್ಷ 60 ಸಾವಿರ ಕೋಟಿ ಸಬ್ಸಿಡಿ ಕೋಡುತಿದೆ ಎಂದು ದೂರಿದರು.
ಆಶಿರ್ವದಿಸಿ: ಪ್ರಸ್ತಾವಿಕ ನುಡಿಗಳನ್ನಾಡಿದ ವರುಣಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಭಿಷೇಕ್ ಮಾತನಾಡಿ, ಸಾರ್ವಜನಿಕ ಸೇವೆಗಾಗಿಯೇ ಲಕ್ಷಾಂತರ ರೂ.ಗಳ ಆದಾಯ ಬಿಟ್ಟು ಸ್ವಕ್ಷೇತ್ರಕ್ಕೆ ಬಂದ ನನ್ನನ್ನು ಆಶಿರ್ವದಿಸಿ ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಲು ಸಹಕರಿಸಿ ದಬ್ಟಾಳಿಕೆ ಬೆದರಿಕೆ ಮಣೆಯಾಕಬೇಡಿ ಎಂದರು.
ವೇದಿಕೆಯಲ್ಲಿ ಶಾಸಕರಾದ ಜಿ.ಟಿ,ದೇವೇಗೌಡ, ಸಾ.ರಾ.ಮಹೇಶ್, ಮಾಜಿ ಸಚಿವ ಹಾಗೂ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ಕೆ.ಟಿ,ಶ್ರೀಕಂಠೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ, ಮಾಜಿ ಮೇಯರ್ ರವಿಕುಮಾರ್, ಜಿಪಂ ಸದಸ್ಯ ಬೀರಿಹುಂಡಿ ಬಸವಣ್ಣ, ನಂಜನಗೂಡು ವಿಧಾನಸಭಾ ಜೆಡಿಎಸ್ ಅಧ್ಯಕ್ಷ ಆರ್ .ವಿ.ಮಹದೇವಸ್ವಾಮಿ, ವರುಣಾ ಕ್ಷೇತ್ರದ ಅಧ್ಯಕ್ಷ ಪ್ರಕಾಶ್, ವರುಣಾ ಮಹೇಶ್, ಟಿ.ನರಸೀಪುರ ಜೆಡಿಎಸ್ ಅಭ್ಯರ್ಥಿ ಅಶ್ವಿನ್‌ಕುಮಾರ್, ಹೀರೆಗೌಡನ ಹುಂಡಿ ಸತೀಶ್, ರಾಜ್ಯ ಜೆಡಿಎಸ್ ಮುಖಂಡ
ಸಂತೋಷ್, ಮಾಜಿ ಮೇಯರ್ ನಿಂಗಪ್ಪ, ಸಾವಿರಾರು ಕಾರ್ಯಕರ್ತರಿದ್ದರು.