Advertisement

ಹಿಂದಿ ಹೇರಿಕೆಗೆ ಅವಕಾಶ ನೀಡದಿರಿ

06:33 AM Feb 10, 2019 | |

ಬೆಂಗಳೂರು: ಕೇಂದ್ರ ಸರ್ಕಾರ ಸ್ಥಳೀಯ ಭಾಷೆಗಳನ್ನು ಕಡೆಗಣಿಸಿ ಹಿಂದಿ ಹೇರಿಕೆಗೆ ಹವಣಿಸುತ್ತಿದು,ª ಇದಕ್ಕೆ ಅವಕಾಶ ನೀಡಬಾರದು ಎಂದು ಕನ್ನಡಪರ ಹೋರಾಟಗಾರ ರಾಮಣ್ಣ ಕೋಡಿಹೊಸಹಳ್ಳಿ ಹೇಳಿದರು. 

Advertisement

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶನಿವಾರ ಸ್ವಾಭಿಮಾನ ಕರ್ನಾಟಕ ವೇದಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕ ಗೌಡಗೆರೆ ಮಾಯುಶ್ರೀ ಅವರ “ಮೊಳಕೆ ಕಾಳು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಪರೀಕ್ಷೆಗಳು ಸ್ಥಳೀಯ ಭಾಷೆಯಲ್ಲಿ ನಡೆಯಬೇಕು ಎಂದು ಆಗ್ರಹಿಸಿದರು.

ಕನ್ನಡ ಭಾಷೆಯ ಉಳಿವಿಗೆ ಒತ್ತು ನೀಡಬೇಕಾಗಿದ್ದ ರಾಜ್ಯ ಸರ್ಕಾರ ಪ್ರಾಥಮಿಕ ಹಂತದಲ್ಲೆ ಇಂಗ್ಲಿಷ್‌ ಮಾಧ್ಯಮ ತೆರೆಯಲು ಹೊರಟಿರು ಕ್ರಮ ಸರಿಯಿಲ್ಲ. ಉದ್ಯೋಗದ ನೆಪವೊಡ್ಡಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಭಾಷೆ ಕಲಿಕೆಗೆ ಮುಂದಾಗಿರುವುದು ಆರೋಗ್ಯಕರ ಬೆಳವಣಿಗೆಯಲ್ಲ. ಸರ್ಕಾರ ಈ ಬಗ್ಗೆ ಆಲೋಚನೆ ಮಾಡಬೇಕಾಗಿತ್ತು ಎಂದು ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ದ್ವಾರನಕುಂಟೆ ಪಾತಣ್ಣ ಮಾತನಾಡಿ, ಪ್ರತಿಭೆ ಎಂಬುವುದು ಯಾರ ಸ್ವತ್ತೂ ಅಲ್ಲ. ಆದರೆ ಪ್ರತಿಭೆ ಹೊರಹೊಮ್ಮಲು ಸೂಕ್ತವಾದ ವೇದಿಕೆಗೆ ಕಲ್ಪಿಸಬೇಕಾಗುತ್ತದೆ. ಅದನ್ನು ಕಲ್ಪಿಸುವ ನಿಟ್ಟಿನಲ್ಲಿ ಸಮಾಜದಲ್ಲಿ ಮತ್ತಷ್ಟು ಕೆಲಸಗಳು ನಡೆಯಬೇಕು ಎಂದರು.

ಇದೇ ವೇಳೆ ಲೇಖಕ ಗೌಡಗೆರೆ ಮಾಯುಶ್ರೀ ಅವರ ಬರಹಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಹಲವು ದಿನಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಜತಗೆ ಹಲವು ಸಂಘ -ಸಂಸ್ಥೆಗಳು ಇವರ ಬರಹಗಳನ್ನು ಮೆಚ್ಚಿ ಗೌರವಿಸಿವೆ. ಆದರೂ, ಇಲ್ಲಿಯವರೆಗೆ ಇವರ ಒಂದೂ ಕೃತಿ  ಪುಸ್ತಕ ರೂಪದಲ್ಲಿ ಬಾರದೇ ಇರುವುದಕ್ಕೆ ಕಳವಳ ವ್ಯಕ್ತಪಡಿಸಿದರು.

Advertisement

ಕೃತಿ ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ,”ಮೊಳಕೆ ಕಾಳು’ ಕೃತಿ  ಕನ್ನಡಪರ ಚಳುವಳಿ ಹಾಗೂ ದಲಿತ ಚಳುವಳಿಗಳ ಬಗ್ಗೆ ಕಟ್ಟಿಕೊಡುತ್ತದೆ. ಜತಗೆ ಚಳವಳಿಗಳು ಯಾವತ್ತೂ ಚಲನೆಯಿಂದ ದೂರವಾಗಬಾರದು ಎಂದು ತಿಳಿ ಹೇಳುತ್ತದೆ ಎಂದರು. ಲೇಖಕ ಗೌಡಗೆರೆ ಮಾಯುಶ್ರೀ, ಮಾವಳ್ಳಿ ಶಂಕರ್‌, ಕೆ.ಸಿ.ಶಿವರಾಂ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next