Advertisement
ಆಯಿಲ್ ಬದಲಾವಣೆಆಯಿಲ್ ಬದಲಾವಣೆ ಅತ್ಯಂತ ಸುಲಭ. ಎಂಜಿನ್ ಕೆಳಭಾಗದಲ್ಲಿ ಒಂದು ಟ್ರೇ ಇಟ್ಟು ಎಂಜಿನ್ ಆಯಿಲ್ ತೆಗೆಯುವ ಬೋಲ್ಟ್ ಅನ್ನು ತೆಗೆಯಿರಿ. ಎಂಜಿನ್‌ನಲ್ಲಿ ಆಯಿಲ್ ಫಿಲ್ಟರ್ ಇದ್ದರೆ ಅದನ್ನೂ ತೆಗೆದು ಹೊಸತನ್ನು ಹಾಕಿ. ಎಂಜಿನ್ ಆಯಿಲ್ ಸಂಪೂರ್ಣ ಹೊರಬರಲು ಸುಮಾರು 15 ನಿಮಿಷ ಕಾದು ಬಳಿಕ ಬೋಲ್ಟ್ ಹಾಕಿ. ಈಗ ಹೊಸ ಎಂಜಿನ್ ಆಯಿಲ್ ಅನ್ನು (ಎಂಜಿನ್ ಆಯಿಲ್ ಗ್ರೇಡ್ ನೋಡಿಕೊಳ್ಳಿ) ತುಂಬಿಸಿ.
ಸಾಮಾನ್ಯವಾಗಿ ಏರ್‌ಫಿಲ್ಟರ್‌ಗಳು ಸೀಟಿನ ತಳಭಾಗದಲ್ಲಿರುತ್ತವೆ. ಕೆಲವು ಬೈಕ್‌ಗಳಿಗೆ ಬೈಕ್‌ನ ಬದಿಯಲ್ಲಿರುತ್ತವೆ. ಅದನ್ನು ಗುರುತಿಸಿ, ಏರ್ ಫಿಲ್ಟರ್ ಬಾಕ್ಸ್ ತೆರೆದು ಹಳೆಯ ಏರ್‌ಫಿಲ್ಟರ್‌ನಿಂದ ಧೂಳು ತೆಗೆಯಿರಿ. ಧೂಳು ತೆಗೆಯಲು ಒಂದು ಬಾರಿ ಏರ್ ಪಂಪ್‌ಗೆ ಹಿಡಿಯಿರಿ ಅಥವಾ ನಯವಾದ ಬ್ರಷ್‌ನಿಂದ ಧೂಳು ತೆಗೆಯಿರಿ. ಒಂದು ವೇಳೆ ತುಂಬ ಹಳತಾಗಿದ್ದರೆ ಹೊಸದು ಹಾಕಿ. ಚೈನ್ ಅಡ್ಜಸ್ಟ್‌ಮೆಂಟ್
ಬೈಕಿನ ಚೈನ್ ನಿರ್ದಿಷ್ಟ ಮಟ್ಟದಲ್ಲಿರಬೇಕು. ಇದು ಹೆಚ್ಚು ಬಿಗಿಯಾಗಿದ್ದರೂ, ಕಡಿಮೆ ಬಿಗಿಯಾಗಿದ್ದರೂ ಸಂಚಾರಕ್ಕೆ ಸಮಸ್ಯೆ. 30 ಎಂ.ಎಂ.ನಷ್ಟು ಚೈನ್ (ಸ್ಲಾéಕ್‌ನೆಸ್) ನಿರ್ದಿಷ್ಟ ಮಟ್ಟದಲ್ಲಿರಬೇಕು. ಚೈನ್ ಬಿಗಿ ಮಾಡಲು ಸ್ವಿಂಗ್ ಆರ್ಮ್ನಿಂದ ವೀಲ್ ಬೋಲ್ಟ್ ಸಡಿಲಗೊಳಿಸಿ, ಚೈನ್ ಟೈಟ್ ಮಾಡಬೇಕಾದ ಸ್ವಿಂಗ್ ಆರ್ಮ್ನಲ್ಲಿರುವ ಪುಟ್ಟ ಬೋಲ್ಟ್ (ಎರಡೂ ಭಾಗದಲ್ಲಿರುವ) ಬಿಗಿ ಮಾಡಿ ಈಗ ಚೈನ್ ಟೈಟ್ ಆಗುತ್ತಿರುವುದು ಗಮನಕ್ಕೆ ಬರುತ್ತದೆ. ಒಂದು ಬಾರಿ ಚೈನ್‌ನ ಎಲ್ಲ ಬದಿ ಬಿಗಿಯಾಗಿದೆಯೇ ಪರಿಶೀಲಿಸಿ ಮುಖ್ಯ ಬೋಲ್ಟ್ ಮೊದಲಿನಂತಯೇ ಅನುಸ್ಥಾಪಿಸಿ.
Related Articles
ಕೆಲವು ಸಾವಿರ ಕಿ.ಮೀ. ಓಡಿಸಿದ ಬಳಿಕ ಕ್ಲಚ್ ಕೇಬಲ್ ಬಿಗಿ ಕಳೆದುಕೊಳ್ಳುತ್ತದೆ. ಇದನ್ನೂ ನಿರ್ವಹಣೆ ವೇಳೆ ಸರಿಪಡಿಸಿಕೊಳ್ಳಬೇಕು. ಸುಮಾರು 1 ಎಂ.ಎಂ.ನಷ್ಟು ಕ್ಲಚ್ ಬೋಲ್ಟ್ ಅನ್ನು ಬಿಗಿಗೊಳಿಸಿದರೆ ಸಾಕು. ಕ್ಲಚ್ ಲಿವರ್ ಭಾಗಕ್ಕೆ ಉತ್ತಮ ಗುಣಮಟ್ಟದ ಗ್ರೀಸ್ ಹಾಕಿ.
Advertisement
ಆರ್‌ಪಿಎಂ ಸೆಟ್ಟಿಂಗ್ಎಂಜಿನ್ ಸ್ಟಾರ್ಟ್ ಮಾಡಿ ಐಡಲ್ ಸರಿಯಾಗಿ ದೆಯೇ ನೋಡಿ. ಇಲ್ಲವಾದರೆ ಕಾಬ್ಯುìಯರೇಟರ್ ಕೆಳಭಾಗ ಇರುವ ಅಕ್ಸಲರೇಷನ್ ಬೋಲ್ಟ್ ಅನ್ನು 0.5 ಎಂ.ಎಂ.ನಷ್ಟು ಬಿಗಿ ಅಥವಾ ಸಡಿಲಗೊಳಿಸಿ. ಎಂಜಿನ್ ಐಡಲ್ ಸರಿ ಸುಮಾರು 800ರಿಂದ 1 ಸಾವಿರ ಆರ್‌ಪಿಎಂವರೆಗೆ ಇದ್ದರೆ ಸಾಕು. ಬ್ರೇಕ್ ಪ್ಯಾಡ್ ಪರೀಕ್ಷೆ
ಬ್ರೇಕ್ ಹಿಡಿಯುತ್ತಿಲ್ಲ (ಡ್ರಮ್ ಬ್ರೇಕ್) ಎಂದಾದರೆ 4 ಎಂ.ಎಂ.ನಷ್ಟು ಬೋಲ್ಟ್ ಅನ್ನು ಬಿಗಿಗೊಳಿಸಿ. ಡಿಸ್ಕ್ ಬ್ರೇಕ್ ಬಿಗಿಗೊಳಿಸುವ ಕ್ರಮವಿಲ್ಲ. ಅದರಲ್ಲಿ ಆಯಿಲ್ ಸರಿಯಾದ ಮಟ್ಟದಲ್ಲಿದೆಯೇ ಎಂದು ಪರಿಶೀಲಿಸಿದರೆ ಸಾಕಾಗುತ್ತದೆ. ಸ್ಪಾರ್ಕ್ ಪ್ಲಗ್
ಸ್ಪಾರ್ಕ್ ಪ್ಲಗ್ ವಯರ್ ತೆಗೆದು ನಿರ್ದಿಷ್ಟ ಟೂಲ್‌ನಿಂದ ಸ್ಪಾರ್ಕ್ ಪ್ಲಗ್ ಅನ್ನು ಎಂಜಿನ್‌ನಿಂದ ಹೊರತೆಗೆಯಿರಿ. ಹೊಯ್ಗೆ ಕಾಗದದ ನೆರವಿನಿಂದ ಅದರ ಬದಿಗಳಲ್ಲಿರುವ ಕಪ್ಪು ಕಾರ್ಬನ್ ಅನ್ನು ತೆಗೆದು ಶುಚಿಗೊಳಿಸಿ. ಪ್ಲಗ್ ಮೇಲ್ಭಾಗ ಅಂತರ ಹೆಚ್ಚಾಗಿದ್ದರೆ, ಸೂðéಡ್ರೈವರ್ ಹಿಂಭಾಗದಲ್ಲಿ ಒಂದೆರಡು ಪೆಟ್ಟು ನಯವಾಗಿ ಹೊಡೆಯಿರಿ. ಅನಂತರ ಮೊದಲಿದ್ದಂತೆಯೇ ಮರುಸ್ಥಾಪಿಸಿ.