Advertisement

ಬೆಳೆ ನಷ್ಟದ ಸಮೀಕ್ಷೆ ಮಾಡಿ: ರೇವಣ್ಣ

02:45 PM Apr 19, 2020 | Suhan S |

ಹಾಸನ: ಕೋವಿಡ್ 19 ನಿಯಂತ್ರಣಕ್ಕೆ ಲಾಕ್‌ ಡೌನ್‌ ಜಾರಿಯಾದ ಪರಿಣಾಮ ರೈತರು ಬೆಳೆದ ಹಣ್ಣು ತರಕಾರಿ ಬೆಳೆ ನಷ್ಟದ ಬಗ್ಗೆ ಜಿಲ್ಲಾಡಳಿತ ಸಮೀಕ್ಷೆ ನಡೆಸಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಜೆಡಿಎಸ್‌ ಮುಖಂಡ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಆಗ್ರಹಪಡಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 24 ದಿನಗಳ ಲಾಕ್‌ಡೌನ್‌ ಅವಧಿಯಲ್ಲಿ ರೈತರ ತೋಟಗಾರಿಕೆ ಬೆಳೆಗಳ ಮಾರಾಟಕ್ಕೆ ಸಾಧ್ಯವಾಗದೆ ಜಮೀನಿನಲ್ಲಿಯೇ ಹಾಳಾಗಿ ಭಾರೀ ನಷ್ಟ ಅನುಭವಿಸಿದ್ದಾರೆ. ಬೆಳೆಗಳಿಗೆ ಮಾಡಿದ್ದ ಖರ್ಚನ್ನಾದರೂ ರೈತರಿಗೆ ಸರ್ಕಾರ ಪರಿಹಾರವಾಗಿ ತುಂಬಿಕೊಡಬೇಕು. ಜಿಲ್ಲಾಧಿಕಾರಿ ಸರ್ಕಾರದ ನಿರ್ದೇಶನಕ್ಕೆ ಕಾಯುವುದನ್ನು ನೋಡುತ್ತಾ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಲೂ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಬ್ಬು ಗದ್ದೆಯಲ್ಲಿಯೇ ಒಣಗುತ್ತಿದೆ. ಹೊಳೆನರಸೀಪುರ ತಾಲೂಕಿನಲ್ಲಿ ಜ್ಯೂಸ್‌ ತಳಿಯ ಕಬ್ಬು ಬೆಳೆದಿದ್ದು ಸುಮಾರು 3600 ಎಕರೆಯಲ್ಲಿ 14 ಗ್ರಾಮಗಳಲ್ಲಿ ಈ ತಳಿಯ ಕಬ್ಬು ಬೆಳೆದಿದ್ದಾರೆ. ಅದರ ಮಾರಾಟಕ್ಕೂ ಸಾಧ್ಯವಾಗಿಲ್ಲ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಕೊಡಿಸಬೇಕು ಎಂದರು.

ಮುಂಗಾರು ಹಂಗಾಮು ಪ್ರಾರಂಭವಾಗುತ್ತಿದ್ದು, ಬಿತ್ತನೆ ಬೀಜ, ರಸಗೊಬ್ಬರ , ಕೃಷಿ ಸಾಮಗ್ರಿಗಳ ದಾಸ್ತಾನಿನ ಬಗ್ಗೆ ಕೃಷಿ ಇಲಾಖೆ ಕಾರ್ಯೋನ್ಮುಖವಾಗಬೇಕು. ಆಲೂಗಡ್ಡೆ ಬೆಳೆಗೆ ಶೇ.50 ಸಹಾಯಧನ ನೀಡುವ ಸಂಬಂಧ ಒತ್ತಡ ತರಲಾಗಿದೆ. ಹೀಗಾಗಿ ಜಿಲ್ಲಾಡಳಿತ, ಈಗಿನಿಂದಲೇ ಆಲೂಗಡ್ಡೆಬೆಳೆಗಾರರ ಸಮೀಕ್ಷೆ ನಡೆಸಿ ಅಗತ್ಯದಷ್ಟು ಬಿತ್ತನೆ ಬೀಜ, ಔಷಧಗಳ ಖರೀದಿಗೆ ಸಿದ್ಧತೆ ಆರಂಭಿಸಬೇಕು ಎಂದು ಸಲಹೆ ನೀಡಿದರು.

ತಂಬಾಕು ಬೆಳೆಗಾರರಿಗೆ ನೆರವು ನೀಡಲೂ ಮುಂದಾಗಬೇಕು. ಮಾವು ಮಾರಾಟಕ್ಕೆ ಈಗಿ ನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಹೇಮಾವತಿ ಜಲಾಶಯದಿಂದ ನಾಲೆಗಳ ಮೂಲಕ ನೀರು ಹರಿಸಿ ಕೆರೆಕಟ್ಟೆ ತುಂಬಿಸಿ ನೀರಿನ ಅಭಾವ ನೀಗಿಸಬೇಕು. ಈ ಎಲ್ಲಾ ಬೇಡಿಕೆ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಜೆಡಿಎಸ್‌ ವತಿ ಯಿಂದ ಮನವಿ ಸಲ್ಲಿಸಿದ್ದು, ಜಿಲ್ಲಾಡಳಿತವೂವರದಿ ನೀಡಬೇಕೆಂದರು. ಈ ವೇಳೆ ಜಿಪಂ ಉಪಾಧ್ಯಕ್ಷ ಎಚ್‌.ಪಿ.ಸ್ವರೂಪ್‌, ಪ್ಷದ ಮುಖಂಡ ಅಗಿಲೆ ಯೋಗೀಶ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next