ಸಕಲೇಶಪುರ: ಕಳೆದ 5 ದಶಕ ಗಳಿಗೂ ಹೆಚ್ಚು ಕಾಲ ಒಂದೆ ಕಡೆ ವಾಸ ವಿದ್ದರೂ ಸಹ ಬಡ ದಲಿತ ಕುಟುಂಬಗಳಿಗೆ ಹಕ್ಕು ಪತ್ರನೀಡದ್ದ ರಿಂದ ತಾಲೂ ಕಿನ ಹೆತ್ತೂರಿನ ಅಂಬೇಡ್ಕರ್ ಬಡಾವಣೆಯಲ್ಲಿ ನೆಲೆಸಿರುವ ನಿವಾಸಿ ಗಳು ಕಂಗಾಲಾಗಿದ್ದಾರೆ.
ಹೆತ್ತೂರಲ್ಲಿರುವ ಸುಮಾರು 53 ದಲಿತ ಕುಟುಂ ಬಗಳ 400ಕ್ಕೂ ಹೆಚ್ಚು ಜನರಿಗೆ ಹಕ್ಕು ಪತ್ರ ನೀಡಬೇಕೆಂದು 50 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸು ತ್ತಿರುವ ಕುಟುಂಬ ಗಳು ಸರ್ಕಾರವನ್ನು ಆಗ್ರಹಿ ಸುತ್ತ ಬಂದಿದ್ದರೂ ಇದುವರೆಗೆ ಪ್ರಯೋಜನವಾಗಿಲ್ಲ.
ಏನಿದು ಪ್ರಕರಣ?: 1964ನೇ ಇಸವಿ ಯಿಂದ ಹೆತ್ತೂರು ಗ್ರಾಮದ ಐಗೂರು ರಸ್ತೆಯಲ್ಲಿರುವ ಸರ್ವೆನಂ ಬರ್ 302 ರಲ್ಲಿ ಒಟ್ಟು 6 ಎಕರೆ 20 ಗುಂಟೆ ಜಮಿ àನು ಇದ್ದು, ಅದರಲ್ಲಿ ಎರಡು ಎಕರೆ 20 ಗುಂಟೆ ಗ್ರಾಮದ ಪ್ರಾಥಮಿಕ ಶಾಲೆಯ ಹೆಸರಿಗೆ ಹಾಗೂ 2 ಎಕರೆ ಸರ್ಕಾರಿ ಆಸ್ಪತ್ರೆಗೆ ಮೀಸ ಲಿಟ್ಟಿದ್ದು, ಉಳಿದ ಎರಡು ಎಕರೆಯಲ್ಲಿ ಸುಮಾರು 53 ದಲಿತ ಕುಟುಂಬಗಳು ವಾಸವಿರುತ್ತದೆ.
ಅಧಿಕೃತ ಸಾಗುವಳಿ ಚೀಟಿ ನೀಡಿಲ್ಲ: ದಲಿತ ಕುಟುಂಬಗಳಿಗೆ ಸರ್ಕಾರದ ಪರಿಶಿಷ್ಟ ಜಾತಿಗೆ ಸಿಗುವ ಸಿಮೆಂಟ್ ರಸ್ತೆ ಇತರೆ ಸರ್ಕಾರಿ ಸೌಲಭ್ಯಗಳು ಸಿಕ್ಕಿದ್ದು, 1979ರಲ್ಲಿ ಆಗಿನ ತಾಲೂಕು ಕಂದಾಯ ಇಲಾಖೆ ತಾತ್ಕಾಲಿಕ ಸಾಗುವಳಿ ಚೀಟಿ ನೀಡಿದ್ದು, ನಂತರ ಇಲ್ಲಿಯವರೆಗೆ ಬಡ ಕುಟುಂಬಗಳಿಗೆ ಯಾವುದೇ ಅಧಿಕೃತ ಸಾಗುವಳಿ ಚೀಟಿ ನೀಡಿಲ್ಲ.ಬಹುತೇಕ 53 ಕುಟುಂಬಗಳಲ್ಲಿ 400ಕ್ಕೂ ಹೆಚ್ಚು ಜನರು ವಾಸವಿದ್ದು, ಬಹುತೇಕ ಎಲ್ಲಾ ಕುಟುಂಬಗಳು ಕೂಲಿ ಕೆಲಸವನ್ನು ಅವ ಲಂಬಿಸಿದ್ದು, ಇದೀಗ ವಾಸವಿರುವ ಮನೆಯನ್ನು ಉಳಿಸಿಕೊಳ್ಳುವ ಆತಂಕ ಎದು ರಾಗಿದೆ. ಆದರೆ, ಇತ್ತೀಚಿನ ದಾಖ ಲಾತಿ ಪಹಣಿಯಲ್ಲಿ ದಲಿತ ಕುಟುಂ ಬಗಳ ಹೆಸರು ಮಾಯವಾಗಿದ್ದು, ಈ ಹಿನ್ನೆಲೆಯಲ್ಲಿ ತಾಲೂಕು ಕಂದಾಯ ಇಲಾಖೆ ಐವತ್ತು ವರ್ಷಕ್ಕಿಂತಲೂ ಹೆಚ್ಚು ಇಲ್ಲಿ ವಾಸವಾಗಿರುವ ದಲಿತ ಕುಟುಂಬಗಳಿಗೆ ಕೂಡಲೇ ವಾಸದ ಮನೆಯ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿವೆ.
50 ವರ್ಷಗಳಿಂದ ಹೆಚ್ಚು ದಲಿತ ಕುಟುಂಬಗಳು ವಾಸ ಇರುವುದು ನಿಜವಾದರೂ ಸಹ ಕಂದಾಯ ಇಲಾಖೆಯಿಂದ ಸರ್ವೆ ನಡೆಸಲಾಗುವುದು. ಸರ್ವೆ ನಂತರ ಜಮೀನಿನ ಮಾಹಿತಿ ಸರ್ಕಾರಕ್ಕೆ ಸಿಗಲಿದ್ದು, ಆ ನಂತರವೇ ಮುಂದಿನ ಕ್ರಮ.
-ಮೇಘನಾ, ತಹಶೀಲ್ದಾರ್
ಹೆತ್ತೂರು ಗ್ರಾಮದಲ್ಲಿರುವ 53 ಕುಟುಂಬಗಳು 1964 ರಿಂದಲೂ ವಾಸವಿದ್ದು, ಎಲ್ಲಾ ಕುಟುಂಬಗಳಿಗೂ ಸರ್ಕಾರ ಸಾಗುವಳಿ ಚೀಟಿ ನೀಡಲು ಕ್ರಮ ಕೈಗೊಳ್ಳಬೇಕಿದೆ.
-ಕುಮಾರ್ ಹೆತ್ತೂರು, ದಲಿತ ಮುಖಂಡರು