ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವರ್ಷದ ಮೊದಲ ಚಿತ್ರವಾಗಿ “ಡಿಎನ್‌ಎ’ ತೆರೆಕಾಣಬೇಕಿತ್ತು. ಜ.07 ರಂದು ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿತ್ತು. ಆದರೆ, ಕೋವಿಡ್ ಕಾರಣದಿಂದ ಚಿತ್ರ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದ ಚಿತ್ರತಂಡ ಈಗ ಬಿಡುಗಡೆ ಮಾಡಲು ಮುಂದಾಗಿದೆ.
ಸರ್ಕಾರ ವೀಕೆಂಡ್ ಲಾಕ್‌ಡೌನ್ ತೆರವುಗೊಳಿಸುತ್ತಿದ್ದಂತೆಚಿತ್ರತಂಡ ತನ್ನ ಬಿಡುಗಡೆಯನ್ನು ಘೋಷಿಸಿಕೊಂಡಿದೆ. ಚಿತ್ರ ಜ.28ರಂದು ತೆರೆಗೆ ಬರಲಿದೆ. ಈ ಚಿತ್ರವನ್ನು ಪ್ರಕಾಶ್ ರಾಜ್‌ಮೆಹು ನಿರ್ದೇಶಿಸಿದ್ದಾರೆ. ಮಾತೃಶ್ರೀ ಎಂಟರ್‌ಪ್ರೈಸಸ್ ನ್ಯಾನರ್‌ನಡಿ ಮೈಲಾರಿ ಎಂ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಈ ಚಿತ್ರದಲ್ಲಿ ನಿರ್ದೇಶಕರು, ಈ ಕಾಲಘಟ್ಟದಲ್ಲಿ ಸಂಬಂಧಗಳ ಮೌಲ್ಯ ಕಡಿಮೆಯಾಗುತ್ತಿದೆ. ಜಾತಿ ಧರ್ಮದ ಹೆಸರಿನಲ್ಲಿ ಮನುಷ್ಯ ಮನುಷ್ಯರ ನಡುವಿನ ಗೋಡೆಗಳು ಭದ್ರಗೊಳ್ಳುತ್ತಿರುವ ಈ ಸಮಯದಲ್ಲಿ ನಿಜವಾದ ಸಂಬಂಧ ಯಾವುದು? ರಕ್ತ ಸಂಬಂಧವೇ ಅಥವಾ ಭಾವನಾತ್ಮಕ ಸಂಬಂಧವೇ ಅನ್ನೋದನ್ನು ಈಸಿನಿಮಾದಲ್ಲಿ ಹೇಳಲು ಹೊರಟಿದ್ದಾರಂತೆ. ಯಾವುದೇಮುಜುಗರವಿಲ್ಲದೇ ಇಡೀ ಕುಟುಂಬ ಕುಳಿತು ನೋಡುವ ಸಿನಿಮಾ ಎಂಬುದು ಚಿತ್ರತಂಡದ ಮಾತು.
ಈಗಾಗಲೇ ಬಿಡುಗಡೆಯಾಗಿರುವ ಹಾಡು, ಅದರಲ್ಲೂ ಪ್ರಮೋಶನಲ್ ಸಾಂಗ್‌ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರವನ್ನು ಜನಇಷ್ಟಪಡುತ್ತಾರೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ. ಎಸ್ತರ್ ನರೋನ್ಹಾ, ರೋಜರ್ ನಾರಾಯಣ್, ಮಾಸ್ಟರ್ ಆನಂದ್ ಪುತ್ರ ಮಾಸ್ಟರ್ ಕೃಷ್ಣ ಚೈತನ್ಯ, ಮಾಸ್ಟರ್ ಧೃವ ಮೇಹು, ನೀನಾಸಂಶ್ವೇತಾ ಸೇರಿದಂತೆ ಅನೇಕ ನಟಿಸಿದ್ದಾರೆ.
ಚಿತ್ರಕ್ಕೆ ಚೇತನ್ ಅವರ ಸಂಗೀತವಿದೆ. ಎ ಚಿತ್ರಕ್ಕೆ ಶಿವರಾಜ್ ಮೇಹು ಸಂಕಲನ, ರವಿಕುಮಾರ್ ಸಾನಾ ಛಾಯಾಗ್ರಹಣ, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಪ್ರಕಾಶ್ ರಾಜ್ ಮೇಹು ಸಾಹಿತ್ಯವಿದೆ.