Advertisement
ಡಿಎಂಕೆ ಪಕ್ಷದ ಮುಖವಾಣಿ “ಮುರಸೊಳಿ’ಯ 75ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಈ ಇಬ್ಬರು ನಟರೂ ಪಾಲ್ಗೊಳ್ಳುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ. ವಿಶೇಷವೆಂದರೆ, ಇತ್ತೀಚೆಗೆ ಆಡಳಿತಾರೂಢ ಎಐಎಡಿಎಂಕೆ ಭ್ರಷ್ಟಾಚಾರ ಕುರಿತು ಟೀಕಿಸಿದ್ದ ಕಮಲ್ ಹಾಸನ್ ಅವರು ಈ ಕಾರ್ಯಕ್ರಮದಲ್ಲಿ ವೇದಿಕೆಯಲ್ಲೇ ಕುಳಿತಿದ್ದರೆ, ರಜನಿ ಅವರು ಪ್ರೇಕ್ಷಕರ ಸ್ಥಳದಲ್ಲಿ ಮೊದಲ ಸಾಲಲ್ಲಿ ಕುಳಿತಿದ್ದರು. ಕಮಲ್ ಅವರು ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರ ಪಕ್ಕದಲ್ಲೇ ಆಸೀನರಾಗಿದ್ದು, ಅವರು ಡಿಎಂಕೆಯತ್ತ ಹೊರಳುತ್ತಾರಾ ಎಂಬ ಪ್ರಶ್ನೆ ಹುಟ್ಟುಹಾಕಿತು. Advertisement
ವೇದಿಕೆಯಲ್ಲಿ ಕಮಲ್ ಹಾಸನ್; ಮೊದಲ ಸಾಲಲ್ಲಿ ರಜನೀಕಾಂತ್
07:10 AM Aug 11, 2017 | |
Advertisement
Udayavani is now on Telegram. Click here to join our channel and stay updated with the latest news.