ಚೆನ್ನೈ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಡಿಎಂಕೆ(ದ್ರಾವಿಡ ಮುನ್ನೇತ್ರ ಕಳಗಂ) ಪಕ್ಷದ ಅಧ್ಯಕ್ಷ ಎಂಕೆ ಸ್ಟಾಲಿನ್ ಮಂಗಳವಾರ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಎಲ್ಲಾ ಸಾಲ ಹಾಗೂ ವಿದ್ಯಾಭ್ಯಾಸ ಸಾಲವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದೆ.
ಡಿಎಂಕೆ ಪ್ರಣಾಳಿಕೆಯಲ್ಲಿ ಏನಿದೆ?
*1964ರ ಇಂಡೋ-ಶ್ರೀಲಂಕಾ ಒಪ್ಪಂದದ ಪ್ರಕಾರ ಶ್ರೀಲಂಕಾದ ಶಿಬಿರದಲ್ಲಿ ನಿರಾಶ್ರಿತರಾಗಿ ಬದುಕುತ್ತಿದ್ದವರಿಗೆ ಭಾರತೀಯ ಪೌರತ್ವ ಕೊಡುತ್ತೇವೆ.
*ಅರ್ಧಕ್ಕೆ ನಿಂತು ಹೋಗಿರುವ ಸೇತುಸಮುದ್ರಂ ಯೋಜನೆಯನ್ನು ಪುನರಾರಂಭಗೊಳಿಸುತ್ತೇವೆ.
*ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆಗೊಳಿಸುತ್ತೇವೆ
*ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ರೈಲು ಪ್ರಯಾಣ ಉಚಿತ
*ಮಧುರೈ, ತಿರುಚ್ಚಿ, ಕೊಯಮತ್ತೂರು ಹಾಗೂ ಸೇಲಂನಂತಹ ನಗರಗಳಿಗೆ ಮೆಟ್ರೋ ರೈಲು ವ್ಯವಸ್ಥೆ
*ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು 5ಲಕ್ಷದಿಂದ 8 ಲಕ್ಷಕ್ಕೆ ಏರಿಸುತ್ತೇವೆ.
*ವಿಕಲಚೇತನ ಮಹಿಳೆಯರಿಗೆ ವಾರ್ಷಿಕವಾಗಿ ಆದಾಯ ತೆರಿಗೆ ವಿನಾಯ್ತಿಯ ಮಿತಿಯನ್ನು 10ಲಕ್ಷಕ್ಕೆ ಏರಿಕೆ.