ವಾಷಿಂಗ್ಟನ್: ಇನ್ನೇನು 2022ನೇ ಇಸವಿ ಕೊನೆಗೊಳ್ಳಲು ಕೆಲವೇ ದಿನಗಳು ಬಾಕಿ ಉಳಿದಿದೆ. ಏತನ್ಮಧ್ಯೆ ಹೊಸ ವರ್ಷದಲ್ಲಿನ ಕೆಲವು ಭವಿಷ್ಯ ವಾಣಿ ಹೊರಬೀಳುತ್ತಿರುತ್ತದೆ. ಇದೀಗ ಆ ಸಾಲಿಗೆ ರಷ್ಯಾದ ಮಾಜಿ ಅಧ್ಯಕ್ಷ, ವ್ಲಾದಿಮಿರ್ ಪುಟಿನ್ ಅವರ ಆಪ್ತ ಡಿಮಿಟ್ರಿ ಮೆ ಮೆಡ್ವೆಡೇವ್ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ:ಕೃಷ್ಣಾಪುರ ಜಲೀಲ್ ಪ್ರಕರಣ: ಮತ್ತೋರ್ವ ಆರೋಪಿಯನ್ನು ಬಂಧಿಸಿದ ಪೊಲೀಸರು
ಮೆಡ್ವೆಡೇವ್ ಅವರು 2023ರ ಭವಿಷ್ಯವಾಣಿ ನುಡಿದಿದ್ದು, 2023ರಲ್ಲಿ ಅಮೆರಿಕದಲ್ಲಿ ಸಿವಿಲ್ ವಾರ್ (ಅಂತರ್ಯುದ್ಧ) ನಡೆಯಲಿದ್ದು, ಇದರ ಪರಿಣಾಮ ಟೆಕ್ಸಾಸ್ ಪ್ರತ್ಯೇಕಗೊಳ್ಳಲಿದೆ. ಅಷ್ಟೇ ಅಲ್ಲ ಟೆಸ್ಲಾ ಕಂಪನಿಯ ಎಲಾನ್ ಮಸ್ಕ್ ಅಮೆರಿಕದ ಅಧ್ಯಕ್ಷರಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ರಷ್ಯಾದ ಭದ್ರತಾ ಮಂಡಳಿಯ ಉಪಾಧ್ಯಕ್ಷರಾಗಿರುವ ಮೆಡ್ವೆಡೇವ್ ತನ್ನ ಟ್ವೀಟ್ ನಲ್ಲಿ, 2023ರಲ್ಲಿ ಅಮೆರಿಕದಲ್ಲಿ ಅಂತರ್ಯುದ್ಧ ಭುಗಿಲೇಳಲಿದೆ. ಇದರ ಪರಿಣಾಮ ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸ್ ಪ್ರತ್ಯೇಕಗೊಳ್ಳಲಿದೆ. ಅಷ್ಟೇ ಅಲ್ಲ ಟೆಕ್ಸಾಸ್ ಮತ್ತು ಮೆಕ್ಸಿಕೋ ಒಕ್ಕೂಟ ರಾಜ್ಯಗಳ ರಚನೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಹೀಗೆ ಅಂತರ್ಯುದ್ಧದ ನಂತರ ರಿಪಬ್ಲಿಕನ್ ಪಕ್ಷಕ್ಕೆ ನೀಡಲಾಗುವ ಕೆಲವು ರಾಜ್ಯಗಳಲ್ಲಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ವೀಟರ್ ನೂತನ ಬಾಸ್ ಮಸ್ಕ್ ಗೆಲುವು ಸಾಧಿಸಲಿದ್ದಾರೆ ಎಂದು ಮೆಡ್ವೆಡೇವ್ ತಿಳಿಸಿದ್ದಾರೆ.