ದೊಡ್ಡಬಳ್ಳಾಪುರ: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭ ಜೂನ್ 7ರಂದು ನಡೆಯಲಿದ್ದು, ಇದು ಕಾಂಗ್ರೆಸ್ ಸಂಘಟನೆ ಶಕ್ತಿಯಾಗಿ ರೂಪುಗೊಳ್ಳಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬೋಸ್‌ರಾಜ್ ತಿಳಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪದಗ್ರಹಣದ ಅಂಗವಾಗಿ ದೊಡ್ಡಬಳ್ಳಾಪುರದ ಬಮೂಲ್ ಸಭಾಂಗಣ ದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ರಾಜ್ಯದ ಬಿಜೆಪಿ ಸರ್ಕಾರ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗುತ್ತಿದ್ದು, ಗ್ರಾಪಂ ಚುನಾವಣೆ ಅವಧಿ ಮುಗಿದಿದ್ದರೂ, ತಮ್ಮ ಪಕ್ಷದ ಕಾರ್ಯಕರ್ತರನ್ನು ಸಮಿತಿ ಸದಸ್ಯರನ್ನಾಗಿ ಮಾಡಲು ಹುನ್ನಾರ ನಡೆಸಿದೆ. ಪಕ್ಷ ಸಂಘಟನೆಗೆ ಕಾರ್ಯಕರ್ತರ ಸಹಭಾಗಿತ್ವ ವನ್ನು ವಿನೂತನ ರೀತಿಯಲ್ಲಿ ನಡೆಸಲಾಗುತ್ತಿದ್ದು, ಕಾರ್ಯ ಕರ್ತರಲ್ಲಿ ಉತ್ಸಾಹ ತುಂಬಲಿದೆ ಎಂದು ತಿಳಿಸಿದರು.
ಎಂಎಲ್‌ಸಿ ಎಸ್.ರವಿ ಮಾತನಾಡಿ, ಜೂನ್ 7ರಂದು ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ ಪದಗ್ರಹಣ ಮಾಡುತ್ತಿರುವುದರಿಂದ ಪ್ರತಿ ಗ್ರಾಪಂ ಹಾಗೂ ನಗರದ ವಿವಿಧ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಎಲ್‌ಇಡಿ ಟೀವಿ, ವ್ಯವಸ್ಥೆ ಮಾಡಿ, ಕಾರ್ಯಕ್ರಮ ವೀಕ್ಷಣೆಯಲ್ಲಿ ಎಲ್ಲ ಕಾರ್ಯ ಕರ್ತರು ಭಾಗವಹಿಸಬೇಕಿದೆ ಎಂದರು.
ಶಾಸಕ ಟಿ.ವೆಂಕಟರಮಣಯ್ಯ, ಕೆಪಿಸಿಸಿ ಕಾರ್ಯದರ್ಶಿ ಗೋವಿಂದಪ್ಪ, ಎ.ಸಿ.ಶ್ರೀನಿವಾಸ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಮುನಿಶಾಮಪ್ಪ, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ವೀಕ್ಷಕ ಮಂಜುನಾಥ ಅದ್ದೆ, ಜಿಲ್ಲಾ ಉಸ್ತುವಾರಿ ರತ್ನ ಪ್ರಭಾ, ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್, ತಾಪಂ ಅಧ್ಯಕ್ಷ ಡಿ.ಸಿ.ಶಶಿಧರ್, ಉಪಾಧ್ಯಕ್ಷೆ ಪದ್ಮಾವತಿ, ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್, ಕಾಂಗ್ರೆಸ್ ತಾಲೂಕು ಬ್ಲಾಕ್ ಅಧ್ಯಕ್ಷ ಎಂ.ಬೈರೇಗೌಡ,
ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್(ಅಪ್ಪಿ), ಜಿಪಂ ಸದಸ್ಯ ಚುಂಚೇಗೌಡ, ತಾಪಂ ಸದಸ್ಯ ನಾರಾ ಯಣ ಗೌಡ, ಎಸ್ .ಸಿ.ಘಟಕದ ನಗರ ಅಧ್ಯಕ್ಷ ಬಿ.ಮುನಿ ರಾಜು, ನಗರ ಪ್ರಧಾನ ಕಾರ್ಯದರ್ಶಿ ಆಂಜಿನ ಮೂರ್ತಿ, ತಾಲೂಕು ಅಧ್ಯಕ್ಷೆ ಪುಷ್ಪಲತಾ, ನಗರ ಘಟಕದ ಅಧ್ಯಕ್ಷೆ ಪ್ರಭಾವತಿ, ಎಪಿಎಂಸಿ ನಿರ್ದೇಶಕ ನಾರನಹಳ್ಳಿ ಎಂ .ಗೋವಿಂದರಾಜು ಮುಖಂಡ ತಿ.ರಂಗರಾಜು, ಬಿ. ಎಚ್.ಕೆಂಪಣ್ಣ ಭಾಗವಹಿಸಿದ್ದರು.