Advertisement

ಬಹಿರಂಗ ಚರ್ಚೆಗೆ ಡಿಕೆಶಿ ಸವಾಲು

08:59 AM Nov 24, 2017 | |

ವಿಧಾನಸಭೆ: ವಿದ್ಯುತ್‌ ಖರೀದಿ ಅಕ್ರಮಗಳ ಕುರಿತ ಸದನ ಸಮಿತಿ ವರದಿ ಸೇರಿ ಇಂಧನ ಇಲಾಖೆಗೆ ಸಂಬಂಧಿಸಿ ಏನೇನೋ ಮಾಡಿಬಿಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. 

Advertisement

ಈ ಬಗ್ಗೆ ಚರ್ಚೆಗೆ ಬನ್ನಿ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಸವಾಲು ಹಾಕಿದ್ದಾರೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ನೀಡುತ್ತಿದ್ದಾಗ ಮಧ್ಯಪ್ರವೇಶಿಸಿದ ಬಿಜೆಪಿಯ ಕೆ.ಜಿ.ಬೋಪಯ್ಯ,  ಸೋಲಾರ್‌ ಯೋಜನೆಗೆ ಕೇಂದ್ರದಿಂದ ಎಷ್ಟು ನೆರವು ಬಂದಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಡಿ.ಕೆ.
ಶಿವಕುಮಾರ್‌, ಏನೂ ಬಂದಿಲ್ಲ. ಬಿಚ್ಚಿಡಬಾರದು ಎಂದು ಸುಮ್ಮನಿದ್ದೇನೆ ಎಂದರು. ಅದಕ್ಕೆ, ಬೋಪಯ್ಯ ಹಾಗೂ ಬಿಜೆಪಿ ಸದಸ್ಯರು, ಏನೇನಿದೆಯೋ ಬಿಚ್ಚಿಡಿ ಎಂದು ಸವಾಲು ಹಾಕಿದಾಗ, ಆಯ್ತು ಬಹಿರಂಗ ಚರ್ಚೆಗೆ ಬನ್ನಿ. ಯಡಿಯೂರಪ್ಪ ಏನೇನೋ ಹೇಳಿದ್ದಾರಲ್ಲಾ? ಎಲ್ಲದರ ಬಗ್ಗೆ ದಾಖಲೆ ಸಮೇತ ಮಾತನಾಡೋಣ ಬನ್ನಿ ಎಂದು ಪ್ರತಿಸವಾಲು ಹಾಕಿದರು.

ಅಷ್ಟರಲ್ಲಿ ಜೆಡಿಎಸ್‌ನ ಎಚ್‌.ಡಿ.ರೇವಣ್ಣ ಎದ್ದು ನಿಂತು, “ಆಯ್ತು ನಾನು ಬಹಿರಂಗ ಚರ್ಚೆಗೆ ಸಿದ್ಧ. ನೀವು ಮಂಡಿಸಿರೋ ವರದಿಯಲ್ಲಿ ನನ್ನ ಕಾಲದಲ್ಲಿ ದುಡ್ಡು ತಿಂದಿದ್ದೇನೆ ಎಂದು ಹೇಳಿದ್ದೀರಿ.ಸಾಬೀತು ಮಾಡಿದರೆ ಸದನದಲ್ಲೇ ನೇಣು ಹಾಕಿಕೊಳ್ಳುತ್ತೇನೆ’ ಎಂದರು. ಅದಕ್ಕೆ ಶಿವಕುಮಾರ್‌, “ಯೇ ರೇವಣ್ಣ, ನೀವು ನಮ್ಮ ಜತೆ ಇರ್ಬೇಕು ಸುಮ್ನಿರಪ್ಪ. ಯಾಕೆ ನೇಣು ಹಾಕಿಕೊಳ್ಳೋ ಮಾತಾಡ್ತಿಯ’ ಎಂದು ಹೇಳಿದರು. ಮಧ್ಯಪ್ರವೇಶಿಸಿದ ಸ್ಪೀಕರ್‌ ಸ್ಥಾನದಲ್ಲಿದ್ದ ಎನ್‌.ಎಚ್‌. ಶಿವಶಂಕರ ರೆಡ್ಡಿ, ಈ ಚರ್ಚೆಗೆ ತೆರೆ ಎಳೆದು 
ಮುಖ್ಯಮಂತ್ರಿಗಳಿಗೆ ಮಾತು ಮುಂದುವರಿಸಲು ಅವಕಾಶ ಮಾಡಿಕೊಟ್ಟರು. ಪವರ್‌ ಮಿನಿಸ್ಟರ್‌ ಅಲ್ಲವಾ, ಅದಕ್ಕೆ ಅವರು ಪವರ್‌ಫ‌ುಲ್‌. ಏನೋ ಸಮಜಾಯಿಷಿ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು ಮುಂದುವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next