ಮಂಗಳೂರು: ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆ ಪ್ರದೇಶಗಳಿಗೆ ಭೇಟಿ ನೀಡದೆ ಕಾಲಕಳೆಯುತ್ತಿದ್ದಾರೆ. ಹೀಗಾಗಿ ಅವರು ತತ್‌ಕ್ಷಣ ರಾಜೀನಾಮೆ ನೀಡಬೇಕು. ಸಚಿವ ಡಿ.ಕೆ. ಶಿವಕುಮಾರ್ ಪ್ರಸ್ತುತ ಪ್ರಬಲರಾಗುತ್ತಿದ್ದು, ಮುಖ್ಯಮಂತ್ರಿಯಾಗಲು ಅವರೇ ಸಮರ್ಥರು ಎಂದು ಹಿರಿಯ ಕಾಂಗ್ರೆಸ್ ಮುಂದಾಳು ಬಿ. ಜನಾರ್ದನ ಪೂಜಾರಿ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಆಡಳಿತದಲ್ಲಿ ಸಂಪೂರ್ಣ ವಿಫಲರಾ ಗಿದ್ದಾರೆ. ರಾಜ್ಯದ ಜನತೆ ಅವರ ರಾಜೀನಾಮೆಯನ್ನು ಕಾಯುತ್ತಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಭೇಟಿ ನೀಡಿದ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಅಲ್ಲಿನ ಮುಖ್ಯಮಂತ್ರಿಗಳು ಅಧಿಕಾರದಿಂದ ಕೆಳಗಿಳಿದಿದ್ದಾರೆ. ಅಮಿತ್ ಶಾ ಕರ್ನಾಟಕಕ್ಕೂ ಆಗಮಿಸಲಿದ್ದು, ಸಿದ್ದರಾಮಯ್ಯ ಅವರನ್ನೂ ಅಧಿಕಾರದಿಂದ ಕೆಳಗಿಳಿಸುವ ಸಾಧ್ಯತೆ ಇದೆ. ಹೀಗಾಗಿ ಈ ಕುರಿತು ತತ್‌ಕ್ಷಣ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ವಿದ್ಯಾರ್ಥಿಗಳ ಊಟಕ್ಕೆ ಅಡ್ಡಿ ರಾಕ್ಷಸಿ ಪ್ರವೃತ್ತಿ ಕಲ್ಲಡ್ಕ ಡಾ| ಪ್ರಭಾಕರ ಭಟ್ ಅವರ ನೇತೃತ್ವದ ಶಾಲೆಗಳಿಗೆ ಕೊಲ್ಲೂರು ದೇಗುಲದಿಂದ ಅನ್ನದಾನಕ್ಕಾಗಿ ನೀಡುತ್ತಿದ್ದ ಅನುದಾನವನ್ನು ಕಡಿತ ಮಾಡಿರುವುದು ತಪ್ಪು. ಮಕ್ಕಳ ಊಟವನ್ನು ತಡೆದು ಹಾಕುವುದು ರಾಕ್ಷಸಿ ಪ್ರವೃತ್ತಿ. ಇದರ ವಿರುದ್ಧ ಮಕ್ಕಳು ತಟ್ಟೆ ಹಿಡಿದು ಪ್ರತಿಭಟನೆ ನಡೆಸುವುದನ್ನು ಕಾಣುವಾಗ ಬೇಸರವಾಗುತ್ತದೆ. ಡಾ| ಪ್ರಭಾಕರ ಭಟ್ ಅವರು ಕಳ್ಳತನ ಮಾಡುತ್ತಿದ್ದಾರೆ ಎಂದು ಅನುದಾನ ಕಡಿತ ಮಾಡಲಾಗಿದೆಯೇ? ಆರ್‌ಎಸ್‌ಎಸ್‌ನವರು ದೇಶದ ಪ್ರಜೆಗಳಲ್ಲವೇ? ಎಂದು ಪೂಜಾರಿ ಪ್ರಶ್ನಿಸಿದರು.
ಅನ್ನದಾನದಂತಹ ಕಾರ್ಯಗಳನ್ನು ನಾವು ಶ್ಲಾಘಿಸಲೇಬೇಕು. ಹೀಗಾಗಿ ಪ್ರಭಾಕರ ಭಟ್ ಅವರ ಕಾರ್ಯವನ್ನು ನಾನು ಶ್ಲಾಘಿಸುತ್ತೇನೆ. ಕುದ್ರೋಳಿ ಕ್ಷೇತ್ರದಲ್ಲಿ ಮಕ್ಕಳಿಗೆ ಅನ್ನದಾನ ಮಾಡುವ ಕಾರ್ಯ ವನ್ನು ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸೋನಿಯಾ ಗಾಂಧಿ ಅವರು ಕೂಡ ಶ್ಲಾ ಸಿದ್ದರು. ರೈ ಅವರು
ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿ ಅನುದಾನ ಕಡಿತ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಉಪೇಂದ್ರ ಉತ್ತಮ ತೀರ್ಮಾನ
ಚಿತ್ರನಟ ಉಪೇಂದ್ರ ಅವರು ವಿಭಿನ್ನ ಆಲೋಚನೆಗಳಿರುವ ವ್ಯಕ್ತಿ ಯಾಗಿದ್ದು, ಅವರು ಹೊಸ ಪಕ್ಷ ಕಟ್ಟುವ ಮೂಲಕ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಅವರು ಬೇರೆ ಪಕ್ಷ ಸೇರುವುದಕ್ಕಿಂತ ಹೊಸ ಪಕ್ಷ ಹುಟ್ಟು ಹಾಕಿದಾಗ, ಪ್ರಸ್ತುತ ಇರುವ ರಾಜಕಾರಣಿಗಳಲ್ಲಿ ಭಯ ಹುಟ್ಟುತ್ತದೆ ಎಂದು ಉಪೇಂದ್ರ ಅವರ ತೀರ್ಮಾನಕ್ಕೆ ಪೂಜಾರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.