Advertisement

ಡಿಕೆಶಿಗೆ ಗುರುವಾರವೂ  ಅಕ್ಷರಶಃ ಗೃಹಬಂಧನ

08:25 AM Aug 04, 2017 | Harsha Rao |

ಬೆಂಗಳೂರು: ಐಟಿ ದಾಳಿಗೆ ಒಳಗಾಗಿರುವ ಡಿಕೆಶಿ ಸತತ ಎರಡನೇ ದಿನವೂ ಸದಾಶಿವ ನಗರದ “ಕೆಂಕೇರಿ’ ನಿವಾಸದಲ್ಲಿ ಗೃಹಬಂಧನದಲ್ಲಿದ್ದರು. ಬುಧ ವಾರ ಬೆಳಗ್ಗೆ ಈಗಲ್‌ಟನ್‌ ರೆಸಾರ್ಟ್‌ನಿಂದ ಕರೆದುಕೊಂಡು ಬಂದಾಗಿನಿಂದ ರಾತ್ರಿ 11 ಗಂಟೆ ವರೆಗೆ ತಪಾಸಣೆ ನಡೆಸಿದ ಐಟಿ ಅಧಿಕಾರಿಗಳು, ಗುರುವಾರ ಬೆಳಗ್ಗೆಯಿಂದ ರಾತ್ರಿ ವರೆಗೂ ಶೋಧ ಮುಂದುವರಿಸಿದರು. ಅತ್ತ ರೆಸಾರ್ಟ್‌ನಲ್ಲಿದ್ದ ಶಾಸಕರನ್ನು ಸಂಪರ್ಕಿಸಲು ಶಿವ ಕುಮಾರ್‌ಗೆ ಸಾಧ್ಯವಾಗಲಿಲ್ಲ.

Advertisement

ಈ ಮಧ್ಯೆ, ಗುರುವಾರವೂ ಸಿಆರ್‌ಪಿಎಫ್ ಪಡೆ ಸದಾಶಿವ ನಗರದ ಮನೆಯನ್ನು ಸುತ್ತುವರಿದಿತ್ತು. ಜತೆಗೆ ಭದ್ರತೆಗಾಗಿ ನಗರದ ಪೊಲೀಸರನ್ನು ನಿಯೋಜಿಸಲಾಗಿತ್ತು. ಬುಧವಾರ ಕಾಂಗ್ರೆಸ್‌ ಕಾರ್ಯ ಕರ್ತರು, ಡಿ.ಕೆ. ಶಿವಕುಮಾರ್‌ ಅಭಿಮಾನಿಗಳು ಸದಾಶಿವನಗರ ನಿವಾಸದ ಮುಂದೆ ಜಮಾಯಿಸಿದ್ದರು.

ನಿಷೇಧಿತ ನೋಟು ಪತ್ತೆ?
ರಾಜರಾಜೇಶ್ವರಿ ನಗರದಲ್ಲಿರುವ ಡಿ.ಕೆ.ಶಿವಕುಮಾರ್‌ ಸಹಭಾಗಿತ್ವದ ಖಾಸಗಿ ಶಾಲೆಯ ಮೇಲಿನ ದಾಳಿ ಸಂದರ್ಭದಲ್ಲಿ ನಿಷೇಧಿತ 500 ಹಾಗೂ 1,000 ರೂ.ಮುಖ ಬೆಲೆಯ ನೋಟುಗಳು ಪತ್ತೆಯಾಗಿವೆ ಎಂದು ಹೇಳ ಲಾಗಿದೆ. ನಿಷೇಧಿತ ನೋಟುಗಳ ಪತ್ತೆ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ, ಐಟಿ ಅಧಿಕಾರಿಗಳು ನಿಷೇಧಿತ ನೋಟುಗಳ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next