Advertisement
ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಗರಿಗೆದರಿದ ಚುನಾವಣೆಯಲ್ಲಿ ಅನೇಕ ನಾಟಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ರಾಜಕಾರಣಿಗಳ ನಡೆಗಳು ಕನಕಪುರದಲ್ಲಿ ಚರ್ಚೆಗೆ ಮುನ್ನುಡಿ ಬರೆದಿದೆ. ಮತ್ತೂಂದೆಡೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯನ್ನು ಸಹಿಸಿಕೊಳ್ಳದ ತಳಮಟ್ಟದ ಕಾರ್ಯಕರ್ತರಲ್ಲಿ ಅಸಮಧಾನ ಹುಟ್ಟು ಹಾಕಿರುವುದು ಎರಡು ಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ ಪರಿಣಮಿಸಿದೆ.
Related Articles
Advertisement
ಕಾನೂನು ಕುಣಿಕೆಗೂ ಎಚ್‌ಡಿಕೆ ಮುಂದಾಗಿದ್ದರು: ಎಚ್.ಡಿ.ಕುಮಾರಸ್ವಾಮಿ ಹಿಂದೊಮ್ಮೆ ಡಿಕೆಶಿಯವರನ್ನು ಕಾನೂನು ಕುಣಿಕೆಗೆ ಸಿಲುಕಿಸಿ ಕನಕಪುರದ ಆಪ್ತರಿಂದ ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟ್‌ನಲ್ಲಿ ಪ್ರಕರಣ ಹಾಕಿಸಿದ್ದರು. ರಾಜ್ಯದ ಪ್ರತಿಷ್ಠಿತ ಮಠಾಧೀಶರೊಬ್ಬರ ಮಧ್ಯಸ್ಥಿತಿಕೆಯಿಂದ ರಾಜಿ ಸಂಧಾನದ ಮೂಲಕ ಈ ಪ್ರಕರಣಕ್ಕೆ ಅಂತ್ಯ ಕಂಡಿತ್ತು. ಇಷ್ಟು ವಿರೋಧ ಇದ್ದ ಇಬ್ಬರು ಇಂದು ಒಟ್ಟಾಗಿರುವುದು ಕಾರ್ಯಕರ್ತರನ್ನು ದಂಗಾಗಿಸಿದೆ.
ಕಾರ್ಯಕರ್ತರಿಗೆ ಮುಜುಗರ: ರಾಜ್ಯ ರಾಜಕಾರಣದಲ್ಲಿ ನುರಿತ ರಾಜಕಾರಣಿ ಮತ್ತು ರಾಜಕೀಯ ಪಟ್ಟುಗಳ ಚಾಣಾಕ್ಷರು ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ತನ್ನ ಚಾಣಾಕ್ಷ ನಡೆಗಳಿಂದಲೇ ತಮ್ಮ ರಾಜಕೀಯ ನೆಲೆಗಟ್ಟನ್ನು ಬದ್ರಮಾಡಿಕೊಂಡರೆ ಇತ್ತ ಸಹೋದರ ಡಿ.ಕೆ. ಸುರೇಶ್ ಅವರ ನಡೆಯಿಂದಲೇ ಕಾರ್ಯಕರ್ತರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವಂತೆ ಮಾಡುತ್ತಿದ್ದರು.
ಇಂದು ಎಚ್‌ಡಿಡಿ ಕಾಲಿಗೆ ಬಿದ್ದದ್ದು ಮತ್ತು ತಲೆ ತಗ್ಗಿಸಿ ನಿಂತದ್ದನ್ನು ಕಂಡ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರನ್ನು ಲೇವಡಿ ಮಾಡುತ್ತಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ಮುಜುಗರ ತರಿಸಿದ್ದು, ಅನ್ನುವ ಹಾಗಿಲ್ಲ ಅನುಭವಿಸುವ ಹಾಗಿಲ್ಲ ಎನ್ನುವಂತಾಗಿದೆ. ಕಾರ್ಯಕರ್ತರ ಸ್ಥಿತಿ.
ಡಿ.ಕೆ.ಶಿ ಹುಟ್ಟನ್ನೇ ಪ್ರಶ್ನಿಸಿದ್ದರು?: ಕಳೆದ ಕೆಲ ವರ್ಷಗಳಿಂದ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಇಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅಂದು ಸಹ ಮುಖ್ಯಮಂತ್ರಿಯಾಗಿದ್ದರೂ ಅಂದು ಡಿಕೆಶಿ ವಿರುದ್ಧ ಯಾವ ಮಟ್ಟದ ವೈರತ್ವ ಇತ್ತು ಎಂದರೆ ಬಹಿರಂಗವಾಗಿ ಡಿಕೆಶಿ ಹುಟ್ಟನ್ನೇ ಪ್ರಶ್ನಿಸಿ, ರಾಜ್ಯವ್ಯಾಪಿ ಚರ್ಚೆ ಹುಟ್ಟುಹಾಕಿ ಸಾತನೂರಿನಲ್ಲಿ ನಾಟಕೀಯ ಬೆಳವಣಿಗೆಗಳು ನಡೆದು ಹೊಗಿದ್ದವು. ಇಂದು ಅವೆಲ್ಲವನ್ನು ಮರೆತು ಕೈಕೈ ಜೋಡಿಸಿರುವುದು ಕಾರ್ಯಕರ್ತರಿಗೆ ಅರಗಿಸಿಕೊಳ್ಳಲಾಗದ ಸತ್ಯವಾಗಿದೆ.
* ಉಮೇಶ್ ಬಾಣಗಹಳ್ಳಿ