Advertisement

ಡಿ.ಕೆ.ಸುರೇಶ್‌ ಏಕೈಕ ಕಾಂಗ್ರೆಸ್‌ ಅಧಿಪತಿ

01:21 AM May 24, 2019 | Lakshmi GovindaRaj |

ರಾಮನಗರ: ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್‌ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೂಲಕ ಸಂಸದರಾಗಿ ಪುನರಾಯ್ಕೆಯಾಗಿದ್ದಾರೆ. ಮೋದಿ ಅಲೆಯಲ್ಲೂ ಲೋಕಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಏಕೈಕ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌.

Advertisement

ಡಿ.ಕೆ.ಸುರೇಶ್‌ ಅವರಿಗೆ ಇದು ಅವರ ಮೂರನೇ ಗೆಲುವಾಗಿದ್ದು, ಹ್ಯಾಟ್ರಿಕ್‌ ಸಾಧಿಸಿದ್ದಾರೆ. ಡಿ.ಕೆ.ಸುರೇಶ್‌ 8,78,258 ಮತಗಳನ್ನು ಪಡೆ ದರೆ, ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣಗೌಡ ಅವರು 6,71,388 ಮತ ಗಳನ್ನು ಪಡೆ ದು ಕೊಂಡಿದ್ದಾರೆ. ಬೆಂಗ ಳೂರು ಗ್ರಾಮಾಂತರ ಲೋಕ ಸಭಾ 2,06,870 ಮತಗಳ ಭಾರೀ ಅಂತರದಿಂದ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ಅವರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಅತಿ ಹೆಚ್ಚು ಮತಗಳನ್ನು ಪಡೆದ ತೃತೀಯ ಅಭ್ಯರ್ಥಿ ಬಿಎಸ್‌ಪಿಯ ಡಾ.ಚಿನ್ನಪ್ಪ ವೈ ಚಿಕ್ಕಹಗಾಡೆ (19,972 ಮತಗಳು), 12461 ನೋಟಾ ಮತಗಳು ಚಲಾವಣೆ ಯಾಗಿದ್ದು, ನಾಲ್ಕನೇ ಸ್ಥಾನದಲ್ಲಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳು ಹೊರತುಪಡಿಸಿದರೆ ಉಳಿದ 13 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ಹ್ಯಾಟ್ರಿಕ್‌ ಹೀರೋ: 2013ರ ಉಪಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ವಿರುದ್ಧ, 2014 ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಮುನಿರಾಜು ಗೌಡ ವಿರುದ್ಧ ಮತ್ತು ಇದೀಗ ಬಿಜೆಪಿಯ ಅಶ್ವತ್ಥ ನಾರಾಯಣ ವಿರುದ್ಧ ಡಿ.ಕೆ.ಸುರೇಶ್‌ ಜಯಭೇರಿ ಭಾರಿಸಿದ್ದಾರೆ. ಸತತ 3ನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಡಿ.ಕೆ.ಸುರೇಶ್‌ 6,52,723 ಮತಗಳನ್ನು ಪಡೆದುಕೊಂಡಿ ದ್ದರು. 2014ಕ್ಕೆ ಹೋಲಿಸಿದರೆ ಅವರು ಈ ಬಾರಿ 2 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದುಕೊಂಡಿದ್ದಾರೆ. ಡಿ.ಕೆ.ಸುರೇಶ್‌ ಹೆಚ್ಚುವರಿಯಾಗಿ ಪಡೆದುಕೊಂಡಿರುವ ಮತಗಳು ಜೆಡಿಎಸ್‌ ಪರಿಶ್ರಮ ಎಂದು ಸ್ಥಳಿಯ ಜೆಡಿಎಸ್‌ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.

Advertisement

ಆರಂಭದಿಂದಲೂ ಡಿಕೆಸುಗೆ ಮುನ್ನಡೆ: ಡಿ.ಕೆ.ಸುರೇಶ್‌ಗೆ ಎಲ್ಲಾ ಸುತ್ತಿನಲ್ಲೂ ತಮ್ಮ ಸಮೀಪ ಪ್ರತಿಸ್ಪರ್ಧಿ ಬಿಜೆಪಿಯ ಅಶ್ವತ್ಥನಾರಾಯಣ ಅವರಿಗಿಂತ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವಿನತ್ತ ಹೆಜ್ಜೆ ಹಾಕಿದರು. ಮೂರನೇ ಸುತ್ತಿನಲ್ಲಿ 12,430 ಮತಗಳ ಅಂತರ ಕಾಯ್ದುಕೊಂಡಿದ್ದರು. ಆದರೆ, ನಾಲ್ಕನೇ ಸುತ್ತಿನಲ್ಲಿ 3941 ಮತಗಳ ಅಂತರ ವ್ಯಕ್ತವಾಯಿತು. ಐದನೇ ಸುತ್ತಿಗೆ ಅವರ ಮತ ಗಳಿಕೆಯ ಅಂತರ 2173ಕ್ಕೆ ಕುಸಿಯಿತು. ಆದರೆ, ಅಷ್ಟರಲ್ಲಾಗಲೇ ಅವರು ಒಟ್ಟಾರೆ ಮತ ಗಳಿಕೆಯಲ್ಲಿ ಬಿಜೆಪಿ ಅಭ್ಯರ್ಥಿಗಿಂತ ಮುಂದಿದ್ದರಿಂದ ಕಾಂಗ್ರೆಸ್‌ ಕಾರ್ಯಕರ್ತರ ಮೊಗದಲ್ಲಿ ನಗು ಮಾಸಲಿಲ್ಲ.

2 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿಗೆ ಲೀಡ್‌: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ 6,71,388 ಮತಗಳನ್ನು ಪಡೆದುಕೊಂಡಿದ್ದಾರೆ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಮುನಿರಾಜು ಗೌಡ ಡಿ.ಕೆ.ಸುರೇಶ್‌ ವಿರುದ್ಧ ಸೋಲುಂಡಿದ್ದರು.

ಆಗ ಬಿಜೆಪಿ ಅಭ್ಯರ್ಥಿ 4,21,243 ಮತಗಳನ್ನು ಪಡೆದುಕೊಂಡಿದ್ದರು. 2014ರ ಚುನಾವಣೆಗೆ ಹೋಲಿಸಿದರೆ ಬಿಜೆಪಿಯ ಮತ ಗಳಿಕೆಯ ಪ್ರಮಾಣವೂ ಹೆಚ್ಚಾಗಿದೆ. ಬೆಂಗಳೂರು ದಕ್ಷಿಣ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಮುನ್ನಡೆ ಸಾಧಿಸಿದೆ. ರಾಮನಗರ, ಚನ್ನಪಟ್ಟಣ, ಮಾಗಡಿ, ಕುಣಿಗಲ್‌ ಮತ್ತು ಆನೇಕಲ್‌ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಎರಡನೇ ಸ್ಥಾನದಲ್ಲಿದೆ.

ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌ ಪಡೆದ ಮತ: ಕುಣಿಗಲ್‌- 91170, ಆರ್‌.ಆರ್‌.ನಗರ- 1,02,632, ಬೆಂಗಳೂರು ದಕ್ಷಿಣ- 1,34,318, ಆನೇಕಲ್‌ – 1,03,106, ಮಾಗಡಿ- 1,01,157, ರಾಮನಗರ-1,06,489, ಕನಕಪುರ-1,40,490, ಚನ್ನಪಟ್ಟಣ -98,350

ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ಪಡೆದ ಮತ: ಕುಣಿಗಲ್‌- 49,886, ರಾಜರಾಜೇಶ್ವರಿ ನಗರ- 1,30,352, ಬೆಂಗಳೂರು ದಕ್ಷಿಣ- 1,83,388, ಆನೇಕಲ್‌- 1,01,288, ಮಾಗಡಿ-65,161, ರಾಮನಗರ-46,328, ಕನಕಪುರ-32,924, ಚನ್ನಪಟ್ಟಣ- 61156

ಯಾವ ಅಭ್ಯರ್ಥಿಗೆ ಎಷ್ಟು ಮತ: ಡಿ.ಕೆ.ಸುರೇಶ್‌ (ಕಾಂಗ್ರೆಸ್‌) – 8,78,258, ಅಶ್ವತ್ಥನಾರಾಯಣಗೌಡ (ಬಿಜೆಪಿ) – 6,71,388, ಡಾ.ಚೆನ್ನಪ್ಪ ವೈ.ಚಿಕ್ಕಹಾಗಡೆ (ಬಿಎಸ್‌ಪಿ)- 19,972, ಎನ್‌.ಕೃಷ್ಣಪ್ಪ (ಪಿರಮಿಡ್‌ ಪಾರ್ಟಿ ಆಫ್‌ ಇಂಡಿಯಾ)-8123, ಡಿ.ಎಂ.ಮಾದೇಗೌಡ (ರಿಪಬ್ಲಿಕ್‌ ಸೇನೆ) – 2801 , ಎಂ.ಮಂಜುನಾಥ್‌ (ಉತ್ತಮ ಪ್ರಜಾಕೀಯ ಪಾರ್ಟಿ)- 9889, ಟಿ.ಸಿ.ರಮಾ (ಎಸ್‌ಯುಸಿಐ (ಕಮ್ಯೂನಿಸ್ಟ್‌) – 2094, ಡಾ.ಎಂ.ವೆಂಕಟಸ್ವಾಮಿ (ರಿಪಬ್ಲಿಕ್‌ ಪಾರ್ಟಿ ಆಫ್‌ ಇಂಡಿಯಾ (ಎ) – 1462, ವೆಂಕ ಟೇಶಪ್ಪ (ಸರ್ವ ಜನತಾ ಪಾರ್ಟಿಯ)- 2025, ಪಕ್ಷೇತರರಾದ ಈಶ್ವರ – 923, ಬಿ.ಗೋಪಾಲ್‌ – 1859, ಎಚ್‌.ಟಿ. ಚಿಕ್ಕರಾಜು – 1363, ಎಂ.ಸಿ.ದೇವರಾಜು – 2015, ಜೆ.ಟಿ. ಪ್ರಕಾಶ್‌ – 4790, ರಘು ಜಾಣಗೆರೆ – 2483 ಮತಗಳನ್ನು ಪಡೆದುಕೊಂಡಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಈ ಬಾರಿ 1508 ಅಂಚೆ ಮತಗಳು ಚಲಾವಣೆಗೊಂಡಿದ್ದು, ಇದರಲ್ಲಿ ಕಾಂಗ್ರೆಸ್‌ಗೆ 546, ಬಿಜೆಪಿಗೆ 905 ಹಾಗೂ ಬಿಎಸ್‌ಪಿ ಪಕ್ಷಕ್ಕೆ 29, ನೋಟಾಗೆ 12 ಮತಗಳು ಚಲಾವಣೆಯಾಗಿವೆ.

ಪೊಲೀಸರು-ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ: ರಾಮನಗರದ ಹೊರ ವಲಯದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಇನ್ನು ನಾಲ್ಕಾರು ಸುತ್ತಿನ ಮತ ಎಣಿಕೆ ಬಾಕಿ ಇದ್ದ ಸಂದರ್ಭದಲ್ಲಿ ಡಿ.ಕೆ.ಸುರೇಶ್‌ ಮತ ಎಣಿಕೆ ಕೇಂದ್ರಕ್ಕೆ ಬಂದರು. ಅವರೊಟ್ಟಿಗೆ ನೂರಕ್ಕೂ ಹೆಚ್ಚು ಕಾರ್ಯಕರ್ತರು ಬಂದರು. ಡಿ.ಕೆ.ಸುರೇಶ್‌ ಪರ ಘೋಷಿಸಿದರು.

ಅಲ್ಲೇ ಇದ್ದ ಬಿಜೆಪಿಯ ಬೆರಳೆಣಿಕೆಯಷ್ಟು ಕಾರ್ಯಕರ್ತರು ಸಹ ಮೋದಿ ಪರ ಘೋಷಣೆ ಕೂಗಿದರು. ಇದೇ ವೇಳೆ ಕೆಲವು ಕಾಂಗ್ರೆಸ್‌ ಕಾರ್ಯಕರ್ತರು ಮೋದಿ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಎಂಟ್ರಿ ಪಾಸು ಇಲ್ಲದ ಕಾಂಗ್ರೆಸ್‌ ಕಾರ್ಯಕರ್ತರು ಮತ ಎಣಿಕೆ ಕೇಂದ್ರದೊಳಗೆ ನುಸುಳುತ್ತಿದ್ದರು, ಅವರನ್ನು ತಡೆಯಲಿಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪೊಲೀಸರಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ಭಾರೀ ನಿರೀಕ್ಷೆಗಳನ್ನು ಇರಿಸಿಕೊಂಡು ಮತದಾರರು ಮತ್ತೂಮ್ಮೆ ಆಶೀರ್ವದಿಸಿದ್ದು, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಮತದಾರರ ವಿಶ್ವಾಸ ಉಳಿಸಿಕೊಳ್ಳುತ್ತೇನೆ. ಫ‌ಲಿತಾಂಶ ರಾಜ್ಯ ಸರ್ಕಾರದ ಮೇಲೆ ಪರಿಣಾಮ ಬೀರೋದಿಲ್ಲ.
-ಡಿ.ಕೆ.ಸುರೇಶ್‌, ಸಂಸದ

ಮೋದಿ ಅಲೆಯಲ್ಲಿ ಕರ್ನಾಟಕದಲ್ಲಿ ಮೈತ್ರಿ ಪಕ್ಷಗಳು ಕೊಚ್ಚಿ ಹೋಗಿವೆ. ಈ ಬಾರಿ ನಿರೀಕ್ಷೆಗೂ ಮೀರಿ 25 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇವೆ. ರಾಜ್ಯದಲ್ಲಿ ಮುಂದೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದರಲ್ಲಿ ಸಂಶಯವೇ ಬೇಡ.
-ಎಂ.ಜಿ.ರಂಗಧಾಮಯ್ಯ, ಮಾಗಡಿ ಬಿಜೆಪಿ ತಾ.ಅಧ್ಯಕ್ಷ

ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್‌ 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಬೇಕಿತ್ತು. ಮೋದಿ ಅಲೆಯಿಂದ ಬಿಜೆಪಿಗೆ ಜನ ಮತಹಾಕಿದ್ದಾರೆ. ಮೈತ್ರಿಯಿಂದ ಮತದಾರರ ಮುಂದೆ ಹೋಗಿದ್ದು, ಡಿ.ಕೆ.ಸುರೇಶ್‌ ಗೆಲುವಿನ ಅಂತರ ಕಡಿಮೆಯಾಗಿದೆ.
-ಎ.ಮಂಜು, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next