Advertisement

HDK ವಿರುದ್ಧ ಡಿ.ಕೆ ಸುರೇಶ್ ಗರಂ: ವ್ಯವಹಾರ ಬೇಕು ಅಂದಾಗ ನೈಸ್ ರಸ್ತೆ ಬೇಕಿತ್ತು ಆದರೆ ಈಗ…

09:40 AM Aug 18, 2023 | Team Udayavani |

ರಾಮನಗರ: ಮಾತಾಡಿದ್ರೆ ನೈಸ್ ರಸ್ತೆ ಅಂತೀರ, ಏನ್ರೀ ನೈಸ್ ರಸ್ತೆ?, ಯಾರು ಯೋಜನೆಗೆ ಸೈನ್ ಹಾಕಿದೋರು? ಕಾಂಗ್ರೆಸ್? ಡಿ.ಕೆ. ಶಿವಕುಮಾರ ನಿಮಗೆ ವ್ಯವಹಾರ ಬೇಕು ಅಂದಾಗ ನೈಸ್ ರಸ್ತೆ ಬೇಕಾಗಿತ್ತು ಆದರೆ ಇದೀಗ ನೈಸ್ ರಸ್ತೆಯನ್ನೇ ವಿರೋಧಿಸುತ್ತಿದ್ದೀರಿ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ಡಿ ಕೆ ಸುರೇಶ್ ಕಿಡಿಕಾರಿದ್ದಾರೆ.

Advertisement

ರಾಮನಗರದಲ್ಲಿ ನೈಸ್ ರಸ್ತೆ ವಿರೋಧಿಸಿ ಹೇಳಿಕೆ ನೀಡಿದ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ನಿಮಗೆ ವ್ಯವಹಾರ ಬೇಕು ಅಂದಾಗ ನೈಸ್ ರಸ್ತೆ ಬೇಕಾಗಿತ್ತು ಆದರೆ ಈವಾಗ ವ್ಯವಹಾರ ಇಲ್ಲವಾಗಿದೆ ಹಾಗಾಗಿ ನೈಸ್ ರಸ್ತೆ ವಿರೋಧಿಸಿ ಮಾತುಗಳನ್ನು ಆಡುತ್ತಿದ್ದೀರಿ ಇಂದು ಬೆಂಗಳೂರು ಮೈಸೂರು ರೈತರು ಏನಾದ್ರೂ ಅನ್ಯಾಯ ಆಗಿದೆ ಅಂದ್ರೆ ಅದು ನಿಮ್ಮಿಂದ ಅಂತ ಮರೆಯಬಾರದು. ತಮಿಳುನಾಡು ಹೊಸೂರು ಉದ್ದಾರ ಆಗಲು ನೀವು ಕಾರಣ. ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಕಡೆ ಜನರು ಹೋಗುತ್ತಿದ್ದಾರೆ ಅಂದ್ರೆ ಅದಕ್ಕೆ ನೀವು ಕಾರಣ. ಅದೇ ರಸ್ತೆಯನ್ನ‌ನೀವು ಸಂಪೂರ್ಣಗೊಳಿಸಿದ್ರೆ ನಿಮ್ಮ ಆಸ್ತಿ ಮೌಲ್ಯ 4, 5, 10 ಕೋಟಿ ಆಗುತ್ತಿತ್ತು. ನೀವು ಮಾಡಿರುವ ಮೊದಲನೇ ಅನ್ಯಯ ಅದು.
ಅದನ್ನ‌ ನೀವು ಮರೆಯಬೇಡಿ ಎಂದು ಪರೋಕ್ಷವಾಗಿ ಗುಡುಗಿದರು.

ಸೈನ್‌ ಮಾಡುವಾಗ ಯಾರಾದ್ರೂ ಏನಾದ್ರೂ ಹೇಳಿದ್ರಾ ನಿಮಗೆ?. ನೀವು ಮುಖ್ಯಮಂತ್ರಿಯಾಗಿದ್ದಾಗ ಒಂದು ದಿನ‌ಸಭೆ ಕರೆದಿದ್ರಾ?. ಟಿವಿ ನಲ್ಲಿ ಪ್ರಚಾರ ಕೊಡುತ್ತಾರೆ ಅಂತ ಕಥೆ ಹೇಳುತ್ತಿರಾ? ನಾನು ಅದು ಮಾಡಿದ್ದೀನಿ, ಇದು ಮಾಡಿದ್ದೀನಿ ಅಂತೀರಲ್ಲ. ನೀವು ಏನು ಮಾಡಿದ್ದೀರ? ನಾನು ಪ್ರತಿ ದಿನ ಟಿವಿಯಲ್ಲಿ ಪ್ರಚಾರ ಪಡೆಯಲು ಇಷ್ಟವಿಲ್ಲ. ನನಗೆ ಈ ಜಿಲ್ಲೆಯ ಜನ ಮುಖ್ಯ. ಜಿಲ್ಲೆಯ ಜನರು ಕಷ್ಟದಲ್ಲಿದ್ದಾರೆ. ಇವರಿಗೆ ನೀರಾವರಿ ಯೋಜನೆ, ಕುಡಿಯುವ ನೀರು, ರಸ್ತೆ ಸೇರಿದಂತೆ ಉತ್ತಮ‌ ವ್ಯವಸ್ಥೆ ಮಾಡಿಕೊಡಬೇಕು. ಈ‌ ನಿಟ್ಟಿನಲ್ಲಿ ನಮ್ಮ‌ ಸರ್ಕಾರ ಕೆಲಸ ಮಾಡುತ್ತಿದೆ.
ಮಾತನಾಡಿದ್ರೆ ಕಮಿಷನ್ ಅಂತೀರ. ನಾವು ಯಾರಿಗೂ ಇನ್ನೂ ಬಿಲ್ ಕೊಟ್ಟಿಲ್ಲ. ನಾವು ಆರೋಪ ಮಾಡಿದ್ದರಿಂದ ತನಿಖೆ ನಡೆಯುತ್ತಿದೆ ಎಂದರು.

ಏನು ರಾಮನಗರ ಉದ್ದಾರ ಮಾಡಿದ್ದೀರ ಹೇಳಿ. ದೂಂತೂರು ವಿಶ್ವನಾಥ್, ಹೆಚ್.ಸಿ ಬಾಲಕೃಷ್ಣ ನಿಮ್ಮ ಜೊತೆ ಇದ್ರೂ. ಅವರು ಏನು ಉದ್ದಾರ ಆಗಿದ್ದಾರೆ ಹೇಳಿ. ಇಲ್ಲಿ ನಿಮ್ಮ‌ ಬದಲಾವಣೆ ಆಗಿರ ಬೇಕು ಅಷ್ಟೇ. ರೈತರ ಬದಲಾವಣೆ ಏನು ಆಗಿಲ್ಲ ಎಂದು ಗುಡುಗಿದರು.

ಕಳೆದ ಮೂರು ತಿಂಗಳ‌ಹಿಂದೆ ಅಷ್ಟೇ ಚುನಾವಣೆ ಎದುರಿಸಿದ್ದೇವೆ. 5 ಗ್ಯಾರಂಟಿಗಳನ್ನ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸರ್ಕಾರ ಘೋಷಣೆ ಮಾಡಿದೆ. ಸರ್ಕಾರ ಭರವಸೆ ನೀಡಿದಂತೆ 5 ಯೋಜನೆಗಳನ್ನ ಅನುಷ್ಠಾನ ಮಾಡಿದೆ. ಕೆಲವರು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಅವರಿಗೆ ಯಾಕೆ‌ ಹೊಟ್ಟೆ ನೋವು. ಯಾಕೆ ಬಾಯಿ ಬಡಿದುಕೊಳ್ಳುತ್ತಿದ್ದಾರೋ ಅಂತ ಗೊತ್ತಾಗುತ್ತಾ ಇಲ್ಲ.

Advertisement

ನಾವು ಒಂದು ಜಾತಿ ಬಗ್ಗೆ ಮಾತನಾಡುತ್ತಿಲ್ಲ. ಮಹಿಳೆಯರು ರಾಜ್ಯ ಸುತ್ತಲು ಬಸ್ ಹತ್ತಿ ಹೋಗುತ್ತಿದ್ದಾರೆ. ಯಾರು ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಹಾಗೂ ಪಕ್ಷೇತರಕ್ಕೆ ಮತ ಹಾಕಿದ್ದಾರೆ ಅಂತ ಗೊತ್ತಿಲ್ಲ. ರಾಜ್ಯದ ಮಹಿಳೆಯರು ಸರಕಾರಿ ಬಸ್ ನಲ್ಲಿ‌ಉಚಿತವಾಗಿ ಓಡಾಡುವ ವ್ಯವಸ್ಥೆ ಮಾಡಿದ್ದೇವೆ. ನೀಮಗೆ ಯಾಕ್ರೀ ಹೊಟ್ಟೆ ನೋವು ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ: Heavy Rain: ಹಿಮಾಚಲ ಪ್ರದೇಶದಾದ್ಯಂತ ಭಾರಿ ಮಳೆಗೆ 74 ಮಂದಿ ಸಾವು, 10,000 ಕೋಟಿ ನಷ್ಟ

Advertisement

Udayavani is now on Telegram. Click here to join our channel and stay updated with the latest news.

Next