Advertisement
ನಗರದ ಇಂದಿರಾ ಸ್ಮಾರಕ ಭವನದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪುತ್ಥಳಿ ಮುಂಭಾಗದಲ್ಲಿ ಅಖೀಲ ಕರ್ನಾಟಕ ಡಿ.ಕೆ. ಶಿವಕುಮಾರ ಅಭಿಮಾನಿಗಳ ಸಂಘ ಮತ್ತು ವಾರ್ಡ್ ಸಂಖ್ಯೆ 53ರ ಬುದ್ಧ ನಗರದಲ್ಲಿ ಡಿ.ಕೆ. ಶಿವಕುಮಾರ ಅಭಿಮಾನಿ ಬಳಗದವರು ಜಮಾವಣೆಗೊಂಡು ರಮೇಶ ಜಾರಕಿಹೊಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ರಸ್ತೆಯಲ್ಲಿ ರಮೇಶ ಜಾರಕಿಹೊಳಿ ಭಾವಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಪ್ರತಿಭಟನೆಯಲ್ಲಿ ಡಿ.ಕೆ.ಶಿವಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ.ಎಸ್. ಅಂಗಡಿ, ಮುಖಂಡರಾದ ಗೋಪಿಕೃಷ್ಣ, ಧರ್ಮರಾಜ ಪಾಟೀಲ ಕಲ್ಲಹಿಪ್ಪರಗಾ,ಶಾಮ ನಾಟೀಕಾರ, ಶರಣು ತೇಗನೂರ, ಓಂಕಾರ ವಠಾರ ಕೆರಿಭೋಸಗಾ, ಅನಿಲ ಉಪಾಸಿ, ಪ್ರಜ್ಞಾನಂದ, ಕಲಾವತಿ ಸಂಗಮೇಶ, ರಾಣಪ್ಪ ಕೆರಿಭೋಸಗಾ,ನೂರಜಾ ಬೇಗಂ, ರಾಣಪ್ಪ ಕೆರಿಭೋಸಗಾ, ಗೌತಮ, ಅವಿನಾಶ ಧುತ್ರಗಿ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು. ಬಿಜೆಪಿ ಮುಖಂಡ ರಮೇಶ ಜಾರಕಿಹೊಳಿ ನಡೆಸಿದ ಕೃತ್ಯವನ್ನು ಕರ್ನಾಟಕ ರಾಜ್ಯ ಮಾತ್ರವಲ್ಲದೇ ಇಡೀ ದೇಶದ ಜನತೆಯೇ ನೋಡಿದ್ದಾರೆ. ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿಯೂ ಅವರ ವಿಡಿಯೋ ವೈರಲ್ ಆಗಿದೆ. ಆದರೆ, ರಮೇಶ ಜಾರಕಿಹೊಳಿ ತಮ್ಮಷ್ಟಕ್ಕೆ ತಾವೇ ನಿರಪರಾಧಿ ಎಂದು ಘೋಷಿಸಿಕೊಳ್ಳುತ್ತಿದ್ದಾರೆ.
ಅವರು ಅಪರಾಧಿ ಯೋ ಅಥವಾ ನಿರಪರಾಧಿಯೋ ಎನ್ನುವುದನ್ನು ನ್ಯಾಯಾಲಯ ತೀರ್ಮಾನ ಮಾಡಲಿದೆ. ಅದೆಲ್ಲವನ್ನು ಬಿಟ್ಟು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬಗ್ಗೆ ಹಗುರವಾಗಿ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ.
ಜಗದೇವ ಗುತ್ತೇದಾರ,ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿಡಿ ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ರಾಜೀನಾಮೆ ಕೊಟ್ಟು ಸರ್ಕಾರದಿಂದ ಹೊರ ಬಂದಿದ್ದಾರೆ. ಆಗ ಹೊಸದೊಂದು ನಾಟಕವಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮೇಲೆ ಆರೋಪ ಮಾಡುತ್ತಿದ್ದಾರೆ. ಈಗಾಗಲೇ ಸಂತ್ರಸ್ತ ಯುವತಿಯೇ ನನಗೆ ರಮೇಶ ಜಾರಕಿಹೊಳಿ ಅನ್ಯಾಯ ಮಾಡಿದ್ದಾರೆ ಎಂದು ದೂರು ಕೊಟ್ಟಿದ್ದಾರೆ. ಅದರ ಆಧಾರದ ಮೇಲೆ ರಮೇಶ ಜಾರಕಿಹೊಳಿ ಕೇಸ್ ದಾಖಲಾಗಿದೆ. ಮೊದಲು ರಮೇಶ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿಗಳು ಜೈಲಿಗೆ ಹಾಕಬೇಕು.
ಅಲ್ಲಮಪ್ರಭು ಪಾಟೀಲ್, ಮಾಜಿ ಎಂಎಲ್‌ಸಿ ಯುವತಿ ಬಿಜೆಪಿ ಮುಖಂಡ ರಮೇಶ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯುತ್ತೇನೆ ಎಂದು ಹೇಳಿದ್ದಾಳೆ. ಆದರೆ, ರಮೇಶ ಜಾರಕಿಹೊಳಿ ಯುವತಿ ತಂದೆ-ತಾಯಿಗೆ ಆಮಿಷವೊಡ್ಡಿ ಮಾಧ್ಯಮಗಳ ಮುಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ವಿರುದ್ಧ ಹೇಳಿಕೆ ಕೊಡಿಸಿ ಕುತಂತ್ರ ರಾಜಕಾರಣ ಮಾಡಿದ್ದಾರೆ. ರಮೇಶ ಜಾರಕಿಹೊಳಿ ಅವರನ್ನು ತಕ್ಷಣವೇ ಬಂಧಿಸಬೇಕು. ರಾಜ್ಯದಿಂದಲೇ ಅವರನ್ನು ಗಡಿಪಾರು ಮಾಡಬೇಕು.
ತಿಪ್ಪಣ್ಣಪ್ಪ ಕಮಕನೂರ, ಮಾಜಿ ಎಂಎಲ್‌ಸಿ