Advertisement

Mysore ದಸರಾ ಗೆ ರೀ ಲುಕ್ ಕೊಡಬೇಕು… ಸಿಎಂ ಜೊತೆ ಚರ್ಚೆ ಮಾಡುತ್ತೇನೆ: ಡಿಕೆಶಿ

01:04 PM Oct 25, 2023 | Team Udayavani |

ಮೈಸೂರು: ಮೈಸೂರು ದಸರಾಗೆ ರೀ ಲುಕ್ ಕೊಡಬೇಕಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ, ಅಲ್ಲದೆ ಈ ವಿಚಾರವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.

Advertisement

ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಮೈಸೂರು ದಸರಾ ಗೆ ರೀ ಲುಕ್ ಕೊಡಬೇಕಾಗಿದೆ ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ ಅವರು ಹಿಂದೆ ಬಂಗಾರಪ್ಪ, ಕೃಷ್ಣ ಮಂತ್ರಿ ಮಂಡಲದಲ್ಲಿ ದಸರಾ ನೋಡಿದ್ದೇ. ಆ ಕಾಲದಲ್ಲಿ ಟಾರ್ಚ್ ಲೈಟ್ ಪರೇಡ್ ತುಂಬಾ ಚೆನ್ನಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡುವ ರೀತಿ ಕಾರ್ಯಕ್ರಮಗಳು ನಡೆದಿದೆ ಎಂದರು.

ಈ ಬಾರಿ ದಸರಾಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರು ಹಾಗಾಗಿ ಮುಂದಿನ ದಿನಗಳಲ್ಲಿ ದಸರಾ ಥೀಮ್ ಚೇಂಚ್ ಆಗಬೇಕು. ಆದರೆ ಹಿಂದಿನ ಪರಂಪರೆ ಉಳಿಸಿಕೊಂಡು ಬಂದಿದ್ದೇವೆ‌ ಎಂದ ಅವರು ಸ್ತಬ್ಧ ಚಿತ್ರ ಕಾಂಪಿಟೇಷನ್ ಗೆ ಪ್ರತಿ ಜಿಲ್ಲೆಯಲ್ಲೂ ಸ್ಪರ್ಧೆ ನಡೆಯಬೇಕು. 400 ವರ್ಷಗಳ ಇತಿಹಾಸ ಇದೆ, ಇತಿಹಾಸ ಉಳಿಸಿಕೊಂಡು ನ್ಯೂ ಲುಕ್ ಕೊಡಬೇಕಾಗಿದೆ.

ಹೊಸ ರೀತಿ ಹಾಗೂ ಟೂರಿಸಂಗೆ ಹೆಚ್ಚು ಒತ್ತು ಕೊಡಬೇಕು. ಮೈಸೂರಿಗೆ ಬರುವ ಗೆಸ್ಟ್ ಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಏಕೆಂದರೆ ದುಡ್ಡು ಕೊಟ್ಟು ಬಂದಿರುತ್ತಾರೆ ಅವರಿಗೆಲ್ಲಾ ಪ್ರತ್ಯೇಕವಾದ ವ್ಯವಸ್ಥೆ ಮಾಡಬೇಕು. ದಸರಾವನ್ನ ಮೈಸೂರಿಗೆ ಮಾತ್ರ ಸೀಮಿತವಾಗಲು ಬಿಡಲು ಸಾಧ್ಯವಿಲ್ಲ ರಾಜ್ಯಮಟ್ಟದ ಅಧಿಕಾರಿಗಳನ್ನ ದಸರಾಗೆ ಬಳಸಿಕೊಳ್ಳಬೇಕು. ಈ ಬಾರಿ ಮೈಸೂರು ಅಧಿಕಾರಿಗಳು ಕಷ್ಟ ಪಟ್ಟು ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಬೆಂಗಳೂರು ನಮ್ಮದು ಬೆಂಗಳೂರು ನಮ್ಮದು ಮೂರು ಬಾರಿ ಉಚ್ಚರಿಸಿದ ಡಿಸಿಎಂ ಡಿಕೆ ಶಿವಕುಮಾರ್.

Advertisement

ವಿದ್ಯಾವಂತಿಕೆ ಇಲ್ಲದೆ ಇದ್ದರೂ ಪ್ರಜ್ನಾವಂತಿಕೆ ಬೇಕು. ಬೇಸಿಕ್ ಕಾಮನ್ ಸೆನ್ಸ್ ಬೇಕು. ಕುಮಾರಸ್ವಾಮಿ ಅವರ ತಂದೆ ಬಳಿ ರಾಮನಗರದ ಇತಿಹಾಸ ಕೇಳಿ ತಿಳಿಯಲಿ. ಚುಂಚನಗಿರಿ ಶ್ರೀ, ಶಿವಕುಮಾರ ಸ್ವಾಮಿಜಿ, ಕೆಂಪೇಗೌಡ್ರು ಹುಟ್ಟಿದ್ದು ರಾಮನಗರದಲ್ಲಿ. ನಾವೆಲ್ಲ ಬೆಂಗಳೂರಿನವರು ನಾವು ಮೂಲತಃ ಬೆಂಗಳೂರಿನವರು. ಮಂಡ್ಯ ಯೂನಿವರ್ಸಿಟಿ ಆದ್ರು ಮೈಸೂರು ಯೂನಿವರ್ಸಿಟಿ ಬಹಳ ಮುಖ್ಯ. ಇದು ಅದೇ ರೀತಿ ಎಂದರು.

ಮಾಗಡಿ, ರಾಮನಗರ, ಚನ್ನಪಟ್ಟಣ ದ ಜನ ಆಸ್ತಿ ಮಾರುತ್ತಿದ್ದಾರೆ, ಆಸ್ತಿ ಮಾರಿಕೊಳ್ಳಬೇಡಿ, ಉಳಿಸಿ ಕೊಳ್ಳಿ ಅಂತಾ ಹೇಳಿದ್ದೇನೆ. ನಾನು ಕನಕಪುರ ಎಂಟ್ರಿಯಾದ ಮೇಲೆ ಭೂಮಿ ಬೆಲೆ ಏನಾಯ್ತು ಅಂತಾ ಜನರಿಗೆ ಗೊತ್ತಿದೆ. ಇಡೀ ರಾಮನಗರ ಜಿಲ್ಲೆ ಬೆಂಗಳೂರು, ಮಾಗಡಿ, ರಾಮನಗರ, ಚನ್ನಪಟ್ಟಣ ಎಲ್ಲವೂ ಬೆಂಗಳೂರಿನದು. ಈ ವಿಚಾರದಲ್ಲಿ ಏನೂ ಅರ್ಜೆಂಟ್ ಇಲ್ಲ. ಕುಮಾರಸ್ವಾಮಿ ಮಾತಾಡುವುದಕ್ಕೆ ತಲೆ ಕೆಡಿಸಿ ಕೊಳ್ಳಲ್ಲ, ನಾನು ಏನೂ ಮಾಡ್ತಿನೋ ಅದು ಮುಖ್ಯ. ನಮ್ಮ ಸರಕಾರ ಏನೂ ಮಾಡುತ್ತೋ ಅದು ಮುಖ್ಯ ಅಷ್ಟೆ ಎಂದರು.

ಇಲ್ಲಿ ಯಾರು ಯಾರದನ್ನು ಕಿತ್ತಿ ಕೊಂಡು ಹೋಗಲ್ಲ, ರಾಮನಗರ ಮಾಡಿದ್ದ ಕ್ರೆಡಿಟ್ ಕುಮಾರಸ್ವಾಮಿ ಯೆ ಇಟ್ಟು ಕೊಳ್ಳಲಿ, ಇನ್ನೊಬ್ಬ ತಲೆ ಕೆಟ್ಟ ಬಿಜೆಪಿ ಎಂಎಲ್ಸಿ ಏನೇನೋ ಮಾತಾಡ್ತಾನೆ. ವೈ ಆರ್ ಯು ಸೋ ಅರ್ಜೆಂಟ್ ವಿಜಯದಶಮಿ ದಿನ ನಾನು ಶುಭ ಮುಹೂರ್ತದಲ್ಲಿ, ಶುಭ ಘಳಿಗೆಯಲ್ಲಿ ಈ ಮಾತು ಹೇಳಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: Israel War: ಯಾರೂ ಕೂಡಾ ಕಾನೂನಿಗಿಂತ ಮಿಗಿಲಲ್ಲ: ಇಸ್ರೇಲ್‌ ವಿರುದ್ಧ ವಿಶ್ವಸಂಸ್ಥೆ ಕಿಡಿ

Advertisement

Udayavani is now on Telegram. Click here to join our channel and stay updated with the latest news.

Next