Advertisement

ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪ ಸರಿಯಲ್ಲ

06:00 AM Sep 05, 2018 | |

ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಸಚಿವ ಡಿ.ಕೆ.ಶಿವಕುಮಾರ ಹಸ್ತಕ್ಷೇಪ ಮಾಡುವುದು ತಪ್ಪು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಪುನರಚ್ಚರಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಸಮಸ್ಯೆ ಇದ್ದಾಗ ನಾವು ಕರೆದರೆ ಮಾತ್ರ ಡಿ.ಕೆ.ಶಿವಕುಮಾರ ಅಥವಾ ಬೇರೆ ಯಾರೇ ಆಗಲಿ ಬರಬೇಕು. ಅದನ್ನು ಬಿಟ್ಟು ಅನಗತ್ಯವಾಗಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಅದೇ
ರೀತಿ, ನಾವೂ ಬೆಂಗಳೂರಿನಲ್ಲಿ ಹಸ್ತಕ್ಷೇಪ ಮಾಡುವುದು ತಪ್ಪು ಎಂದು ಹೇಳಿದರು. “ಶೋಪೀಸ್‌ ಗಳ ಮಾತು ಕೇಳಿದರೆ ಪಕ್ಷ ಹಾಳಾಗುತ್ತದೆಯೇ ಹೊರತು ಅದರಿಂದ ಯಾವುದೇ ಪ್ರಯೋಜನವಿಲ್ಲ. ಇದನ್ನು ನಾಯಕರು ತಿಳಿದುಕೊಂಡರೆ ಒಳ್ಳೆಯದು. ನಾವು ಮಾಡುವ ಚರ್ಚೆಗಳೇ ಭಿನ್ನಮತ ಎಂದರೆ ಅದಕ್ಕೆ ನಾನು ಏನೂ ಮಾಡಲು ಸಾಧ್ಯವಿಲ್ಲ’ ಎಂದು ಮಾರ್ಮಿಕವಾಗಿ ಹೇಳಿದರು. ಈಗಾಗಲೇ ಸಮಸ್ಯೆ ಇತ್ಯರ್ಥವಾಗಿದೆ.  

Advertisement

ರಾಜಕೀಯದಲ್ಲಿ ವಾಗ್ವಾದ ಸಹಜ. ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ವಿಚಾರವಾಗಿ ಸ್ಥಳೀಯ ಶಾಸಕರು ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸುತ್ತಾರೆ ಎಂದು ಹೇಳಿದರು. ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಜೊತೆಗೆ ಯಾವುದೇ ಚುನಾವಣೆ ವಿಷಯ ಮಾತನಾಡಿಲ್ಲ. ಆದರೆ, ಸಹೋದರ ಸತೀಶ ಜಾರಕಿಹೊಳಿಯವರು ಪಿಎಲ್‌ಡಿ ಬ್ಯಾಂಕ್‌ ಸಂಬಂಧ ನನ್ನ ಜತೆ ಚರ್ಚಿಸಿದ್ದಾರೆ. ಆರಂಭದಲ್ಲಿ ಇದ್ದ ಸಮಸ್ಯೆಗಳು ಈಗ ಬಗೆಹರಿದಿವೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next