ಚಿಕ್ಕಮಗಳೂರು: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶೃಂಗೇರಿಗೆ ಆಗಮಿಸಿ ಶಕ್ತಿ ದೇವತೆ ಮೊರೆ ಹೋಗಿದ್ದಾರೆ.
ಟಿಕೆಟ್ ಕಗ್ಗಂಟಿನ ನಡುವೆ ಶಾರಾದಾಂಬೆ ದೇವಾಲಯಕ್ಕೆ ಭೇಟಿ ನೀಡಿದ್ದು, ಶಾರಾದಾಂಬೆ ದರ್ಶನ ಪಡೆದಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾರನ್ನೇ ಆದರೂ ನಾವು ಎದುರಿಸಲೇಬೇಕು, ಹೋರಾಡಲೇಬೇಕು. ಇದು ರಾಜಕಾರಣ, ಯಾರು ಬೇಕಾದರೂ ನಿಲ್ಲಬಹುದು ಎಂದು ತಮ್ಮ ಎದುರು ಆರ್.ಅಶೋಕ್ ಸ್ಪರ್ಧೆ ಸಂಬಂಧ ಪ್ರತಿಕ್ರಿಯಿಸಿದರು.
ಇದನ್ನೂ ಓದಿ:ರಾಮನವಮಿ ಧ್ವಜಕ್ಕೆ ಮಾಂಸ ಕಟ್ಟಿ ಅಪವಿತ್ರ: ಎರಡು ಗುಂಪುಗಳ ನಡುವೆ ಘರ್ಷಣೆ; Sec 144 ಜಾರಿ
ಆರ್.ಅಶೋಕ್ ನನ್ನ ವಿರುದ್ದ ಸ್ಪರ್ಧೆ ಮಾಡುವುದಾದರೇ ಅವರಿಗೆ ಸ್ವಾಗತ ಹೇಳಿ, ಹೋರಾಡುತ್ತೇನೆ ಎಂದರು.
ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಗೆ ಆಶೀರ್ವಾದ ಪೀಠ ಇದು, ಹಸ್ತ ಕೊಟ್ಟಂತಹ ಪೀಠ ಇದಾಗಿದ್ದು, ಶಾರದಾಂಬೆ ದರ್ಶನಕ್ಕಷ್ಟೇ ಬಂದಿದ್ದೇನೆ ರಾಜಕಾರಣ ಇಲ್ಲ ಎಂದರು. ಮೂರನೇ ಪಟ್ಟಿ ಚರ್ಚೆ ಆಗುತ್ತಿದೆ, ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.