Advertisement
ಹುಬ್ಬಳ್ಳಿ ತಾಲೂಕು ಚನ್ನಾಪುರ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕುಂದಗೋಳದಲ್ಲಿ ಮೈತ್ರಿ ಅಭ್ಯರ್ಥಿ ಸೋಲು ಖಚಿತ. ಹೀಗಾಗಿ ಕುಮಾರಸ್ವಾಮಿ ಹಾಗೂ ದೇವೇಗೌಡರಂತೆ ಅಳುವ ಮೂಲಕ ಜನರನ್ನು ವಂಚಿಸಲು ಡಿ.ಕೆ. ಶಿವಕುಮಾರ ಮುಂದಾಗಿದ್ದಾರೆ. ಈ ಕ್ಷೇತ್ರದ ಜನರು ತುಂಬಾ ಬುದ್ಧಿವಂತರು. ಇವರ ನಾಟಕ ನಡೆಯಲ್ಲ. ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಚುನಾವಣೆ ಮಾಡಲು ಕಾರ್ಯಕರ್ತರಿಲ್ಲದಂತಾಗಿದೆ. ಹೀಗಾಗಿ ಬೆಂಗಳೂರಿನಿಂದ 87 ಜನ ಬಂದಿದ್ದಾರೆ. ವೇಣುಗೋಪಾಲ ಈ ಪಟ್ಟಿಯನ್ನು ಹಿಡಿದು ಕೊಂಡು ಓಡಾಡುತ್ತಿದ್ದಾರೆ ವಿನಃ ಒಬ್ಬರೂ ಕ್ಷೇತ್ರಕ್ಕೆ ಬಂದಿಲ್ಲ. ಬಿಜೆಪಿ ಕಾರ್ಯಕರ್ತರ ಆರ್ಭಟಕ್ಕೆ ಕೆಲವರು ವಾಪಸ್ ಹೋಗಿದ್ದಾರೆ. ಕಾಂಗ್ರೆಸ್‌ನಿಂದ ಯಾರೇ ಬಂದರೂ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದರು.
Related Articles
ಡಿಕೆಶಿ ಗಂಟಿಗೆ ಮಾರು ಹೋಗಬೇಡಿ:
ಬುಡರಸಿಂಗಿಯಲ್ಲಿ ಮಾತನಾಡಿದ ಸಂಸದ ಪ್ರಹ್ಲಾದ ಜೋಶಿ, ಈ ಚುನಾವಣೆಯನ್ನು ಇಡೀ ದೇಶವೇ ನೋಡುತ್ತಿದೆ. ಮೈತ್ರಿ ಸರ್ಕಾರ ಕಿತ್ತೂಗೆಯಲು ಸಿದ್ದರಾಮಯ್ಯ ತುದಿಗಾಲಲ್ಲಿ ನಿಂತಿದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಕ್ಷೇತ್ರದ ಜನತೆ ಡಿಕೆಶಿ ಗಂಟಿಗೆ ಮಾರು ಹೋಗಬಾರದು. ದುಡ್ಡು ಹಂಚಿ ಹೋಗುವ ಡಿಕೆಶಿ ಮತ್ತೇ ನಿಮ್ಮ ಕೈಗೆ ಸಿಗಲ್ಲ ಎಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ತೇಜಸ್ವಿನಿ ಅನಂತಕುಮಾರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಚಿಂಚೋಳಿ ಹಾಗೂ ಕುಂದಗೋಳ ಕ್ಷೇತ್ರದ ಜನರಿಗೆ ಅವಕಾಶ ಒದಗಿ ಬಂದಿದ್ದು, ಕ್ಷೇತ್ರದ ಜನರು ಬಿಜೆಪಿಗೆ ಆಶೀರ್ವಾದ ಮಾಡಬೇಕು ಎಂದರು.
ದೇವಸ್ಥಾನದ ಕಟ್ಟೆ ಮೇಲೆ ಪ್ರಚಾರ:
ಬುಡರಸಿಂಗಿ ಗ್ರಾಮದ ಶ್ರೀ ಸಿದ್ದರಾಮೇಶ್ವರ ದೇವಸ್ಥಾನಕ್ಕೆ ಬಿಜೆಪಿ ನಾಯಕರು ಭೇಟಿ ಕೊಟ್ಟು ದರ್ಶನ ಪಡೆದರು. ಅದಾಗಲೆ ಕಾರ್ಯಕರ್ತರೊಂದಿಗೆ ಮಾತನಾಡುತ್ತಿದ್ದ ನಾಯಕರು ಮಾಧ್ಯಮದವರನ್ನು ಕಂಡೊಡನೆ ದೇವಸ್ಥಾನ ಹೊರಗೆ ಬಂದರು. ಅದೇ ದೇವಸ್ಥಾನ ಕಟ್ಟೆ ಮೇಲೆ ನಿಂತು, ಸಂಸದ ಪ್ರಹ್ಲಾದ ಜೋಶಿ, ಕೆ.ಎಸ್.ಈಶ್ವರಪ್ಪ, ತೇಜಸ್ವಿನಿ ಅನಂತಕುಮಾರ ಪ್ರಚಾರ ಭಾಷಣ ನಡೆಸಿದರು. ತೆರೆದ ವಾಹನದಲ್ಲಿ ನಿಂತು ಮಾತನಾಡಬೇಕಿತ್ತು. ಆದರೆ ದೇವಸ್ಥಾನ ಕಟ್ಟೆ ಮೇಲೆ ನಿಂತು ಮಾತನಾಡುತ್ತಿರುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆಯಲ್ಲವೇ ಎಂದು ಪಕ್ಷದ ಕಾರ್ಯಕರ್ತರು ಪರಸ್ಪರ ಆಡಿಕೊಳ್ಳುತ್ತಿರುವುದು ಕಂಡು ಬಂತು.
Advertisement