Advertisement

ಒಕ್ಕಲಿಗ ಮತ ಬ್ಯಾಂಕ್‌ ಸೆಳೆಯಲು ಡಿಕೆಶಿ ತಂತ್ರ

01:45 AM Dec 20, 2021 | Team Udayavani |

ಬೆಂಗಳೂರು: ವಿಧಾನಪರಿಷತ್‌ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದ ಕ್ಷೇತ್ರಗಳು ಕೈವಶವಾಗಿರುವ ಹಿನ್ನೆಲೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಮತ ಬ್ಯಾಂಕ್‌ ಕಾಂಗ್ರೆಸ್‌ ಪರ ಗಟ್ಟಿಗೊಳಿಸುವತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಈಗಿನಿಂದಲೇ ಚಿತ್ತ ಹರಿಸಿದ್ದಾರೆ.

Advertisement

ಪರಿಷತ್‌ ಚುನಾವಣೆಯಲ್ಲಿ ಒಕ್ಕಲಿಗ ಸಮು ದಾಯ ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿರುವುದು ಡಿ.ಕೆ. ಶಿವಕುಮಾರ್‌ಗೆ ಧೈರ್ಯ ನೀಡಿದಂತಿದೆ.

ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ ಮತ್ತು ಮೈಸೂರು ಜೆಡಿಎಸ್‌ ಭದ್ರಕೋಟೆ ಎಂದೇ ಬಿಂಬಿತವಾಗಿತ್ತು. ಆದರೆ ಪರಿಷತ್‌ ಚುನಾವಣೆ ಫಲಿತಾಂಶ ಒಕ್ಕಲಿಗ ಸಮುದಾಯವು ಕಾಂಗ್ರೆಸ್‌ ಅದರಲ್ಲೂ ಡಿ.ಕೆ. ಶಿವಕುಮಾರ್‌ ನಾಯಕತ್ವದ ಬಗ್ಗೆ ವಿಶ್ವಾಸ ತೋರಿರುವ ಸೂಚನೆ ಇದೆ. ಇದು ಸಮುದಾಯ ಮುಂದಿನ ದಿನಗಳಲ್ಲಿ ಇವರ ಬೆನ್ನಿಗೆ ನಿಲ್ಲಲಿದೆ ಎಂಬುದರ ಮುನ್ಸೂಚನೆ ಎಂದು ಕಾಂಗ್ರೆಸ್‌ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಇದನ್ನೂ ಓದಿ:ಪ್ರಾಥಮಿಕ ಶಾಲೆಗಳಲ್ಲಿ “ಸಂತೋಷ ಪಠ್ಯಕ್ರಮ”; ಉತ್ತರ ಪ್ರದೇಶ ಸರ್ಕಾರದ ವಿಶೇಷ ಕ್ರಮ

ಈಗಿನಿಂದಲೇ ಕಾರ್ಯತಂತ್ರ
“ಒಕ್ಕಲಿಗ ಬೆಲ್ಟ್’ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ-ಟಿಕೆಟ್‌ ನೀಡಿಕೆಯಲ್ಲಿ ಕೈಗೊಂಡ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಡಿಕೆಶಿ ಮುಂದಿನ ವಿಧಾನಸಭೆ ಚುನಾವಣೆಗೆ ಸಜ್ಜಾಗಲು ಈಗಿನಿಂದಲೇ ತಂತ್ರ ರೂಪಿಸುತ್ತಿದ್ದಾರೆ. ಮುಖ್ಯ ವಾಗಿ ಒಕ್ಕಲಿಗ ಪ್ರಾಬಲ್ಯವುಳ್ಳ ಜಿಲ್ಲೆಗಳಲ್ಲಿ ಆ ಸಮುದಾಯವನ್ನು ತಮ್ಮತ್ತ ಸೆಳೆಯಲು ಕಾರ್ಯ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

Advertisement

ಒಟ್ಟಾಗಿ ಹೋದರೆ ಗಟ್ಟಿ
ಡಿ.ಕೆ.ಶಿ. ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಪ್ರತೀ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡುತ್ತಿದ್ದಾರೆ. ಸಿದ್ದರಾಮಯ್ಯ, ಮಲ್ಲಿ ಕಾರ್ಜುನ ಖರ್ಗೆ, ಡಾ| ಪರಮೇಶ್ವರ್‌, ಕೆ.ಎಚ್‌. ಮುನಿಯಪ್ಪ, ಎಂ.ಬಿ. ಪಾಟೀಲ್‌ ಮತ್ತಿತರ ಹಿರಿಯ ನಾಯಕರ ಜತೆ ಸಮನ್ವಯ ದಿಂದ ಮುನ್ನಡೆಯು ತ್ತಿದ್ದಾರೆ. ಮುಂದಿನ ಮುಖ್ಯ  ಮಂತ್ರಿ ವಿಚಾರ ಬಂದಾಗಲೂ ಹೈಕಮಾಂಡ್‌ ಮಧ್ಯ ಪ್ರವೇಶ ಮಾಡಿಸಿ ತಣ್ಣ ಗಾಗಿ ಸಿದರು. ಸಿದ್ದರಾಮಯ್ಯ -ಡಿ.ಕೆ. ಶಿವ ಕುಮಾರ್‌ ಜೋಡಿ ಒಟ್ಟಾಗಿ ಹೋದರೆ, ಹಿರಿಯ ನಾಯಕರು ಸಾಥ್‌ ನೀಡಿದರೆ ಪಕ್ಷ ಗಟ್ಟಿ ಯಾಗು ವುದರಲ್ಲಿ ಅನುಮಾನವಿಲ್ಲ ಎಂದು ಪಕ್ಷದ ನಾಯಕರು ಹೇಳುತ್ತಾರೆ.

-ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next