Advertisement
ನಗರದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಮೀಸಲಾತಿಯಿಂದ ಯಾರಿಗೆ ಅನುಕೂಲ, ಯಾರಿಗೆ ಅನನುಕೂಲ, ಎಲ್ಲಿಂದ ತೆಗೆದು ಎಲ್ಲಿ ಹಾಕುತ್ತಾರೆ ಎಂಬುದರ ಬಗ್ಗೆ ಸರಕಾರದಲ್ಲಿ ಸ್ಪಷ್ಟತೆ ಇಲ್ಲ. ಮೀಸಲಾತಿ ವಿಷಯದಲ್ಲಿ ಕಾನೂನು ತೊಡಕು ಸೃಷ್ಟಿಸಿದ್ದೇ ಸರಕಾರದ ಹೆಚ್ಚುಗಾರಿಕೆ ಎಂದರು.
ಒಕ್ಕಲಿಗ ಸಮುದಾಯಕ್ಕೆ ಶೇ.12 ಮೀಸಲು ಕೊಡಬೇಕಿತ್ತು. ಪಂಚಮಸಾಲಿ ಸಮುದಾಯದ 2ಎ ಬೇಡಿಕೆ ಈಡೇರಿಸಬೇಕಿತ್ತು. ಪರಿಶಿಷ್ಟರ ಮೀಸಲಾತಿ ಹೆಚ್ಚಿಸಿದ್ದಾಗಿ ಹೇಳುವ ಸರಕಾರ ಸಂಸತ್‌ನಲ್ಲಿ ಮಂಡಿಸಿ ಒಂದನೇ ಅನುಚ್ಛೇದದಲ್ಲಿ ಸೇರಿಸಬೇಕಿತ್ತು. ಆದರೆ ಈವರೆಗೆ ಕೇಂದ್ರಕ್ಕೆ ಸೂಕ್ತ ರೀತಿಯ ದಾಖಲೆ-ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ ಎಂದರು. ಬಿಜೆಪಿ ಮನೆಗೆ ಹೋಗುವ ಸಮಯ ಹತ್ತಿರದಲ್ಲಿದೆ
ಐದು ವರ್ಷದಲ್ಲಿ ಏನೂ ಮಾಡದ ಬಿಜೆಪಿ ಸರಕಾರ ಹಾಗೂ ಅದರ ನಾಯಕರು ಮನೆಗೆ ಹೋಗುವ ಸಮಯ ಹತ್ತಿರವಾಗಿದೆ. ಅಮಿತ್ ಶಾ ಚುನಾವಣೆ ಸಂದರ್ಭ ಆಶ್ವಾಸನೆ ಕೊಡಲು ಬರುತ್ತಿದ್ದಾರಷ್ಟೆ. 2018ರಲ್ಲಿ ನೀಡಿದ್ದ 600 ಭರವಸೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 50ನ್ನು ಮಾತ್ರ ಈಡೇರಿಸಿದೆ. 2013ರಲ್ಲಿ ಕಾಂಗ್ರೆಸ್ ಅ ಧಿಕಾರಕ್ಕೆ ಬಂದಾಗ 169 ಭರವಸೆ ನೀಡಿದ್ದು, 165ನ್ನು ಈಡೇರಿಸಲಾಗಿದೆ ಎಂದರು.
Related Articles
ಪಂಚಮಸಾಲಿ ಹಾಗೂ ಇತರ ಮೀಸಲಾತಿ ವಿಷಯದಲ್ಲಿ ದೊಡ್ಡದಾಗಿ ಮಾತನಾಡುತ್ತಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೀಸಲಾತಿ ಗೊಂದಲ ಸೃಷ್ಟಿಸಿ ಮಹಾಮೋಸ ಮಾಡಿರುವ ಸರಕಾರದ ನಡೆ ಹಾಗೂ ಶೇ. ನೂರರಷುr ಮೀಸಲಾತಿ ಕಲ್ಪಿಸುವುದು ಅಸಾಧ್ಯ ಎಂದಿರುವ ಸಚಿವ ಮುರುಗೇಶ ನಿರಾಣಿ ಮಾತಿಗೆ ಮೌನ ವಹಿಸಿರುವುದು ಯಾಕೆ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
Advertisement
ನಗರದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೀಸಲಾತಿ ವಿಷಯದಲ್ಲಿ ಬಿಜೆಪಿ ಬಾಯಿ ಮುಚ್ಚಿಸಿದೆ. ಮಾತೆತ್ತಿದರೆ ಪಕ್ಷದಿಂದ ಕಿತ್ತು ಹಾಕುತ್ತೇವೆಂದು ಯತ್ನಾಳ್ ಬಾಯಿ ಮುಚ್ಚಿಸಲಾಗಿದೆ. ಆದಕಾರಣ ಮೀಸಲಾತಿ ವಿಚಾರದಲ್ಲಿ ಅವರು ಉಸಿರೇ ಇಲ್ಲದಂತಾಗಿದ್ದಾರೆ ಎಂದು ಕುಟುಕಿದರು.