Advertisement

ಜಲವಿವಾದ ಬಗೆಹರಿಯುವ ಬಗ್ಗೆ ಸಿಎಂ ಭರವಸೆ ಕೊಟ್ಟಿದ್ದಾರೆ: ಡಿಕೆಶಿ

08:25 PM Mar 18, 2022 | Team Udayavani |

ಬೆಂಗಳೂರು: ಮೇಕೆದಾಟು, ಕೃಷ್ಣ ಯೋಜನೆಗೆ ಈಗಾಗಲೇ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಯಾವುದೇ ಕೆಳ ರಾಜ್ಯಗಳ ಪರ್ಮಿಷನ್ ಬೇಡ ಎಂದು ತೀರ್ಪು ಬಂದಿದೆ. 177 ಟಿಎಂಸಿ ನೀರಿಗೆ ಯಾವುದೇ ಪರ್ಮಿಷನ್ ಬೇಕಾಗಿಲ್ಲ‌. ಇದನ್ನು ಸಿಎಂ ಕೂಡ ಯಾವುದೇ ಅಡೆ ತಡೆಯಿಲ್ಲದೆ ಒಪ್ಪಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.

Advertisement

ಸರ್ವ ಪಕ್ಷ ಸಭೆಯ ಬಳಿಕ ಮಾತಾನಾಡಿದ ಮಾಧ್ಯಮದವರೊಂದಿಗೆ ಅವರು, ನಾವು ಮೇಕೆದಾಟು ಹೋರಾಟ ಮಾಡಿದ್ವಿ, ಅದರ ಹಿನ್ನೆಲೆ ಇಂದು ಸರ್ವಪಕ್ಷ ಸಭೆ ಕರೆದಿದ್ದಾರೆ. ಸಭೆಯಲ್ಲಿ ನಮ್ಮ ನಿಲುವನ್ನು ಹೇಳಿದ್ದೇವೆ. ಸಿಎಂ ಕೇಂದ್ರದ ಮೇಲೆ ಒತ್ತಡ ತರುತ್ತೇವೆ ಅಂತ ಹೇಳಿದ್ದಾರೆ.  ಒಂದು ವೇಳೆ ಅದು ಆಗಲಿಲ್ಲ ಅಂದರೆ ನಿಯೋಗ ಕರೆದುಕೊಂಡು ಹೋಗುತ್ತೇವೆ ಅಂತ ಹೇಳಿದ್ದಾರೆ ಎಂದರು.

ಇದನ್ನೂ ಓದಿ: ಅಧಿವೇಶನದ ಬಳಿಕ ಕೇಂದ್ರ ಸಚಿವರ ಜತೆ ಜಲವಿವಾದಗಳ ಬಗ್ಗೆ ಚರ್ಚೆ ಮಾಡುತ್ತೇನೆ: ಸಿಎಂ ಬೊಮ್ಮಾಯಿ

ಕೃಷ್ಣ ಯೋಜನೆ ನ್ಯಾಷನಲ್ ಪ್ರಾಜೆಕ್ಟ್ ಆಗಬೇಕೆಂದು ಅಂತ ಹೇಳಿದ್ದೇವೆ.  2013 ರಲ್ಲಿ ಏನು ತೀರ್ಪು ಬಂದಿತ್ತೋ, ಅದು ನೋಟಿಫಿಕೇಷನ್ ಆಗಿಲ್ಲ‌. ಅದು ನೋಟಿಫಿಕೇಷನ್ ಆಗಬೇಕೆಂದು ಒತ್ತಾಯ ಮಾಡಿದ್ದೇವೆ ಎಂದರು.

ಸರ್ವ ಪಕ್ಷದ ಸಭೆಯ ಬಳಿಕ ಮಾತಾನಾಡಿದ ಮಾಜಿ ಸಚಿವ ಎಂ ಬಿ ಪಾಟೀಲ್,  9 ವರ್ಷ ಆಯಿತು. ಒಂದು ಗೆಜೆಟ್ ನೋಟಿಫಿಕೇಶನ್ ಕೃಷ್ಣದ ವಿಚಾರದಲ್ಲಿ ಆಗಿಲ್ಲ ಯಾವುದೇ ನೀರಾವರಿ ನ್ಯಾಷನಲ್ ಪ್ರಾಜೆಕ್ಟ್‌ ತಗೊಬೇಕು ಅಂದರೆ ಎರಡು ಲಕ್ಷ ಎಕರೆ ಬೇಕು  ಈ ವಿಚಾರದಲ್ಲಿ ಮಾತಾಡಿದ್ದೇವೆ  ಎಂದರು.

Advertisement

ಬಿಳಿಗುಂಡ್ಲುನಿಂದ ತಮಿಳುನಾಡಿಗೆ ನೀಡುವ ನೀರಿನ ವಿಚಾರದಲ್ಲಿ ಯಾವುದೇ ತೊಂದರೆ ಇಲ್ಲ.  ಮಹಾದಾಯಿ ವಿಚಾರದಲ್ಲಿ ಎನ್ವಿರಾನ್ಮೆಂಟ್ ಕ್ಲಿಯರೆನ್ಸ್ ತೆಗೆದುಕೊಳ್ಳಬೇಕು  ಎನ್ವಿರಾನ್ಮೆಂಟಲ್ ಸ್ಟಡಿ ಮಾಡದೆ ನದಿ ಜೋಡಣೆ ವಿಚಾರದಲ್ಲಿ ಬಜೆಟ್ ನಲ್ಲಿ ಹಣ ಇಟ್ಟಿದ್ದಾರೆ ಇದು ತಪ್ಪು ಎಂದು ಹೇಳಿದ್ದೇವೆ ನದಿ ಜೋಡಣೆಯಲ್ಲಿ ಕೇರ್ ಫುಲ್ ಹೆಜ್ಜೆ ಇಡಬೇಕು ಎಲ್ಲರ ಅಭಿಪ್ರಾಯ ತೆಗೆದುಕೊಂಡು ಮುಂದೆ ಹೋಗಬೇಕು ಎಂದು ಹೇಳಿದ್ದೇವೆ  ನಾವುಗಳು ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದೇವೆ  ಎಲ್ಲಾ ನಮ್ಮ ಮನವಿ ಆಲಿಸಿ ಮುಂದೆ ಹೆಜ್ಜೆ ಇಡುತ್ತೇವೆ ಎಂದು ಹೇಳಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next