ಬೆಂಗಳೂರು/ಬೀದರ: ಜಂಟಿಯಾಗಿ ಪ್ರಜಾಧ್ವನಿ ಯಾತ್ರೆಯ ಮೊದಲ ಹಂತ ಮುಗಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರದಿಂದ 2ನೇ ಹಂತದಲ್ಲಿ ಪ್ರತ್ಯೇಕವಾಗಿ ಯಾತ್ರೆ ಕೈಗೊಳ್ಳುವರು.
ಸಿದ್ದರಾಮಯ್ಯ ಅವರು ಬೀದರ್ ಜಿಲ್ಲೆ ಬಸವಕಲ್ಯಾಣದ ಅನುಭವ ಮಂಟಪದಿಂದ ಯಾತ್ರೆ ಆರಂಭಿಸುವರು. ಇವರೊಂದಿಗೆ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೇರಿದಂತೆ 35 ಮಂದಿ ಮುಖಂಡರಿರುವರು. ಮತ್ತೂಂದೆಡೆ ಡಿ.ಕೆ.ಶಿವಕುಮಾರ್, ಮುಳಬಾಗಿಲಿನ ಕೂಡುಮಲೆ ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಯಾತ್ರೆ ಆರಂಭಿಸುವರು. ಡಾ| ಜಿ. ಪರಮೇಶ್ವರ್, ಬಿ.ಕೆ. ಹರಿಪ್ರಸಾದ್, ವೀರಪ್ಪ ಮೊಲಿ, ದಿನೇಶ್ ಗುಂಡೂರಾವ್ ಸೇರಿ 54 ಮಂದಿ ಮುಖಂಡರಿರುವರು.
ಇಂದಿನಿಂದ 2ನೇ ಹಂತ :
1.ಸಿದ್ದು ನೇತೃತ್ವದ ಯಾತ್ರೆ :
- ಫೆ.3ರಿಂದ ಫೆ.18: ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆಯ ಕೊಪ್ಪಳ, ಹುಬ್ಬಳ್ಳಿ ಜಿಲ್ಲೆಯ 112 ಕ್ಷೇತ್ರಗಳು
- ಡಿ.ಕೆ. ಶಿ. ನೇತೃತ್ವದ ಯಾತ್ರೆ
- ಫೆ.3ರಿಂದ ಫೆ.9: ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಶಿವಮೊಗ್ಗ, ಮೈಸೂರು ಹಾಗೂ ಕರಾವಳಿ ಜಿಲ್ಲೆಗಳ 112 ಕ್ಷೇತ್ರಗಳು.
Related Articles
ಹಾಲಿ ಶಾಸಕರಿಗೆ ಟಿಕೆಟ್ ಖಾತ್ರಿ :
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕರ ಪೈಕಿ 66 ಮಂದಿಗೆ ಬಹುತೇಕ ಟಿಕೆಟ್ ಸಿಗಲಿದೆ. ಗುರುವಾರ ನಡೆದ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಮಿತಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.