Advertisement

ಯಾವುದಕ್ಕೂ ಹೆದರಲ್ಲ ಎಂದ ಡಿಕೆಶಿ

06:00 AM Sep 10, 2018 | Team Udayavani |

ಬೆಂಗಳೂರು: ಆದಾಯ ತೆರಿಗೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಭಾವಿ ಸಚಿವ ಡಿ ಕೆ ಶಿವಕುಮಾರ್‌ ಬಂಧನ ಸಾಧ್ಯತೆಗಳ ಕುರಿತು ಎದ್ದಿರುವ ಗುಲ್ಲು ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದ್ದು,”ನಾನು ಯಾವು ದಕ್ಕೂ ಹೆದರುವುದಿಲ್ಲ’ಎಂದು ಅವರೇ ಸ್ಪಷ್ಟವಾಗಿ ಹೇಳಿದ್ದಾರೆ.

Advertisement

ಈ ನಡುವೆ, ಭಾನುವಾರ ಶಿವಕುಮಾರ್‌ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು.ಪ್ರಸಕ್ತ ರಾಜಕೀಯ ವಿದ್ಯಮಾನಗಳು ಸೇರಿದಂತೆ ಹಲವು ವಿಚಾರಗಳನ್ನು  ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು. 

ಈ ಸಂದರ್ಭದಲ್ಲಿ ಧೈರ್ಯವಾಗಿರಿ ಎಂದು ಶ್ರೀಗಳು ಹೇಳಿದರು ಎನ್ನಲಾಗಿದೆ. ನಂತರ ನೇರವಾಗಿ ಡಿ.ಕೆ.ಶಿವಕುಮಾರ್‌ ದೆಹಲಿಗೆ ತೆರಳಿದರು. ಕೊಡಗು ಜಿಲ್ಲಾ ಪ್ರವಾಹಕ್ಕೆ ಸಂಬಂಧಿಸಿದಂತೆ  ಸೋಮವಾರ ಪ್ರಧಾನಿ ಮೋದಿ ಅವ ರನ್ನು ಭೇಟಿ ಮಾಡುವ ನಿಯೋಗದಲ್ಲಿ ಸಚಿವ ಶಿವಕುಮಾರ್‌ ಭಾಗವಹಿಸಲಿದ್ದಾರೆ.

ಇದಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಯಾವುದೇ ತನಿಖೆ ಎದುರಿಸಲು ಸಿದ್ಧನಿದ್ದೇನೆ. ನನಗೆ ಯಾವುದೇ ನೋಟಿಸ್‌ ಬಂದಿಲ್ಲ.  ಆದಾಯ ತೆರಿಗೆ ಇಲಾಖೆಯವರು ವಿಚಾರಣೆಗೆ ಕರೆದಿದ್ರು ಹೋಗಿದ್ದೆ, ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಬಳಿ ಅಕ್ರಮ ಆಸ್ತಿ ಇಲ್ಲ ಎಂದು ಹೇಳಿದರು.  ಮಾಧ್ಯಮಗಳಲ್ಲಿ ಡಿಕೆಶಿ ಇವತ್ತು ಅರೆಸ್ಟ್‌ ಆಗ್ತಾರೆ, ನಾಳೆ ಅರೆಸ್ಟ್‌ ಆಗ್ತಾರೆ ಎಂದು ಸುದ್ದಿ ಬರುತ್ತಿದೆ.  ನಾನು ಯಾವುದಕ್ಕೂ ಹೆದರುವುದಿಲ್ಲ ಎಂದು ತಿಳಿಸಿದರು.

ಬಿಜೆಪಿಯವರು ನಮ್ಮ ಶಾಸಕರಿಗೆ ಆಮಿಷ ಒಡ್ಡಿದ್ದಾರೆ. ರಾಜಕೀಯದಲ್ಲಿ ಇದು ಕಾಮನ್‌ಗೆàಮ್‌. ಆಡೋಕ್ಕೆ ನಂಗೂ ಬರುತ್ತೆ, ಯಾರ ಶಕ್ತಿ ಹೆಚ್ಚಿರುತ್ತದೆ ರಾಜಕೀಯದಲ್ಲಿ ಅವರಿಗೆ ಟಾರ್ಗೆಟ್‌ ಮಾಡ್ತಾರೆ.  ಆಪ್ತ ಗೆಳೆಯರು ಮಾಹಿತಿ ನೀಡಿದ್ದಾರೆ. ನನ್ನ ಹಿಂದೆ ಬಿಜೆಪಿ ಬಿದ್ದಿದೆ ಎಂದು ಮಾರ್ಮಿಕವಾಗಿ ನುಡಿದರು.

Advertisement

ಕೊಡಗು ನಿಯೋಗದ ಜತೆ ನಾನು ದೆಹಲಿಗೆ ಹೋಗುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಇಡೀ ಪ್ರಕರಣದ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ಗೆ ತಿಳಿಸಿಲ್ಲ ಎಂದು ಹೇಳಿದರು.

ನಾನು ಯಾವುದೇ ತಪ್ಪು ಮಾಡಿಲ್ಲ, ನಾನು ಕ್ರಿಮಿನಲ್‌ ಅಲ್ಲ. ನಂಗು ಕಾನೂನು ಗೊತ್ತಿದೆ. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ.80 ಜನ ವಕೀಲರ ಜತೆ ಚರ್ಚೆ ಮಾಡುತ್ತಿದ್ದೇನೆ. ಇಡಿ ಪ್ರಕರಣದ ಹಿಂದೆ ಕೆಲ ನಾಯಕರ ಕೈವಾಡ ಇದೆ. ನಾನು ಕಾನೂನು ಕೈಗೆತ್ತಿಕೊಳ್ಳುವುದಿಲ್ಲ. ಸಮಯ ಬಂದಾಗ ಎಲ್ಲವೂ ಗೊತ್ತಾಗಲಿದೆ. ನಾನು ಕಿವಿಯಲ್ಲಿ ಹೂ ಇಟ್ಟುಕೊಂಡು ಬೆಂಗಳೂರಿಗೆ ಬಂದಿಲ್ಲ, ರಾಜಕಾರಣ ಮಾಡಲು ಬಂದಿದ್ದೇನೆ.
– ಡಿ.ಕೆ.ಶಿವಕುಮಾರ್‌, ಸಚಿವ

ಯಡಿಯೂರಪ್ಪ ಅವರ ಮೇಲೆ ನಮಗೆ ಗೌರವ ಇದೆ. ನಮಗೆ ಸಿಕ್ಕ ಪತ್ರ ಎಲ್ಲಿಂದ ಬಂದಿದೆ ಅಂತ ಅವರೇ ಹುಡಕಬೇಕು. ಯಡಿಯೂರಪ್ಪ ತಿರಸ್ಕರಿಸಿದ್ದಾರೆ ಆದರೆ ಯಾರು ಮಿಸ್‌ ಯೂಸ್‌ ಮಾಡಿದ್ದಾರೆ ಅನ್ನೋದರ ಬಗ್ಗೆ ತನಿಖೆಯಾಗಬೇಕು. ಯಡಿಯೂರಪ್ಪ ಅವರೇ ತನಿಖಾ ಸಂಸ್ಥೆಗೆ ಪತ್ರ ಬರೆಯಲಿ. ಸರ್ಕಾರ ರಚನೆ ಮಾಡೋಕೆ ಬಿಜೆಪಿ ತುದಿಗಾಲಲ್ಲಿ ನಿಂತಿದೆ. ನಮ್ಮನ್ನು ಅರೆಸ್ಟ್‌ ಮಾಡಿಸುತ್ತೇವೆ ಎಂದು ಆ ಪಕ್ಷದ ನಾಯಕರು ಹೇಳಿಕೊಂಡು ಬರುತ್ತಿದ್ದಾರೆ.
– ಡಿ.ಕೆ.ಸುರೇಶ್‌, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next