Advertisement
ಎಂ.ಬಿ. ಪಾಟೀಲ್- ಸಚಿವ ಡಾ| ಸಿ.ಎನ್. ಅಶ್ವತ್ಥ ನಾರಾಯಣ ಭೇಟಿ ವಿಚಾರದಲ್ಲಿ ಶುರುವಾದ ಪ್ರತಿಕ್ರಿಯೆಗಳು ಈಗ “ಅವಕಾಶ ನೀಡಿದವರು ಮತ್ತು ಅವಕಾಶವಾದಿಗಳ’ ಕೆಸರೆರಚಾಟಕ್ಕೆ ಬಂದು ನಿಂತಿದೆ.
Related Articles
Advertisement
ಇದಕ್ಕೆ ಪೂರಕವಾಗಿ ಬುಧವಾರ ತಮ್ಮನ್ನು ಟ್ರೋಲ್ ಮಾಡಲು “ಕಚೇರಿ’ಯು ಕಾಂಗ್ರೆಸ್ ಹಿರಿಯ ನಾಯಕರು, ಕಾರ್ಯಕರ್ತರಿಗೆ ಈ ಸಂದೇಶಗಳನ್ನು ಕಳುಹಿಸಿದೆ. ನನ್ನನ್ನು ಟ್ರೋಲ್ ಮಾಡಲು ನೀವು ತೊಂದರೆ ತೆಗೆದುಕೊಳ್ಳಬೇಡಿ. ನಾನೇ ಮಾಡುತ್ತೇನೆ’ ಎಂದು ಹೇಳಿ ಎಲ್ಲ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಟ್ವಿಟರ್ ಖಾತೆಯಲ್ಲಿ ರಮ್ಯಾ ಹಂಚಿಕೊಂಡಿದ್ದರು. ಗುರುವಾರ ಆ “ಕಚೇರಿ’ ಎಂದರೆ ಯಾರು ಎಂಬುದನ್ನೂ ಸ್ಪಷ್ಟಪಡಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ (ಕಚೇರಿ) ಎಂದು ಹೇಳಿದ್ದಾರೆ.
“ಇಷ್ಟೇ ಅಲ್ಲ, ಈ ಹಿಂದೆ ಸುದ್ದಿ ವಾಹಿನಿಗಳಲ್ಲಿ ನಾನು 8 ಕೋಟಿ ಹಣದೊಂದಿಗೆ ಪರಾರಿಯಾಗಿದ್ದೇನೆ ಎಂದು ಸುದ್ದಿ ಬಿತ್ತರಿಸಿದ್ದರು. ಅಂದು ಮೌನವಾಗಿದ್ದದ್ದೇ ನಾನು ಮಾಡಿದ ತಪ್ಪು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ತಮ್ಮ ಮುಂದಿನ ಕರ್ನಾಟಕ ಭೇಟಿ ವೇಳೆ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಮನವಿ ಮಾಡುತ್ತೇನೆ. ಇಂತಹ ಆರೋಪಗಳನ್ನು ಹೊತ್ತು ಜೀವನಪೂರ್ತಿ ಇರಲಾರೆ. ದಯವಿಟ್ಟು ಈ ಬಗ್ಗೆ ಸ್ಪಷ್ಟನೆ ನೀಡಿ’ ಎಂದು ವೇಣುಗೋಪಾಲ್ ಅವರಿಗೆ ಮನವಿ ಮಾಡಿದ್ದಾರೆ.
ರಂಪಾಟ ಬೇಡ; ಪಕ್ಷದ ವೇದಿಕೆಯಲ್ಲಿ ಚರ್ಚೆ :
ಈ ಮಾತಿನ ಯುದ್ಧಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿರುವ ಕೆಪಿಸಿಸಿ ಅದ್ಯಕ್ಷ ಡಿ.ಕೆ. ಶಿವಕುಮಾರ್, “ಎಂ.ಬಿ. ಪಾಟೀಲ್ ಅವರು ನಮ್ಮ ಪಕ್ಷದ ಹಿರಿಯ ನಾಯಕರು ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿದ್ದಾರೆ. ರಮ್ಯಾ ಅವರು ಪಕ್ಷದ ಮಾಜಿ ಸಂಸದೆ. ಇಬ್ಬರೂ ನಮಗೆ ಬೇಕಾದವರು. ಅನಗತ್ಯ ರಂಪಾಟ ಬೇಡ. ಯಾರಿಗೆ ಯಾವ ವಿಚಾರವಾಗಿ ನೋವಾಗಿದೆಯೋ ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಬಹಿರಂಗವಾಗಿ ಚರ್ಚೆ ಮಾಡಲು ಸಿದ್ಧವಿಲ್ಲ’ ಎಂದು ಹೇಳಿದರು.
“ನನಗೆ ಯಾವುದೇ ವಿಚಾರ ತಿಳಿದಿಲ್ಲ. ಎಲ್ಲಿ ಏನು ಅಪಾರ್ಥವಾಗಿದೆಯೋ ಗೊತ್ತಿಲ್ಲ. ಮಾಧ್ಯಮಗಳು ನಮ್ಮ ಮನೆಗೆ ಬಂದು ಅಶ್ವತ್ಥ್ ನಾರಾಯಣ ಅವರು ಎಂ.ಬಿ. ಪಾಟೀಲ್ ಅವರ ಮನೆಗೆ ಹೋಗಿದ್ದಾರೆ ಎಂದು ಪ್ರಶ್ನೆ ಕೇಳಿದರು. ನಾನು ರಕ್ಷಣೆಗೆ ಹೋಗಿರಬಹುದು ಎಂದು ಹೇಳಿದ್ದೇನೆ. ಇದರ ಹೊರತಾಗಿ ಬೇರೇನೂ ವಿಚಾರವಿಲ್ಲ’ ಎಂದು ಸಮಜಾಯಿಷಿ ನೀಡಿದರು.