ಕುಣಿಗಲ್ : ಪಿಎಸ್‌ಐ ಹಗಣದ ಪಿತಮಹಾ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಹಾಗೂ ಅವರ ಪಕ್ಷ ಬಿಜೆಪಿಯ ಕಾರ್ಯಕರ್ತರದಾಗಿದೆ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದರು.
ಭಾನುವಾರ ತಾಲೂಕಿನ ಹುಲಿಯೂರುದುರ್ಗದಲ್ಲಿ ಮಾತಾನಾಡಿದರು.
ಪಿಎಸ್‌ಐ ಹಗರಣದಲ್ಲಿ ಕಾಂಗ್ರೆಸ್‌ನ ಶೇ. 70 ರಷ್ಟು ನಾಯಕರು ಜೈಲಿಗೆ ಹೊಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀಲ್‌ಕುಮಾರ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ನಳೀಲ್‌ಕುಮಾರ್ ಅವರು ನಮ್ಮನ್ನು ಜೈಲಿಗೆ ಕಳಿಸುವುದು ಇರಲಿ, ಅವರ ಪಕ್ಷದ ಮುಖಂಡರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ, ಯಾರನ್ನು ಬೇಕಾದರೂ ಜೈಲಿಗೆ ಕಳಿಸಲಿ ನಮಗೇನು ಸಮಸ್ಯೆಯಿಲ್ಲ, ಇದನ್ನು ಏನಾದರೂ ಮಾಡಿ ಕಾಂಗ್ರೆಸ್ ಪಕ್ಷದ ಕಡೆ ತಿರುಗಿಸಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಸಚಿವ ಅಶ್ವತ್‌ನಾರಾಯಣ್ ಅವರ ಹೆಸರು ಹೊರಗಡೆ ಬಂದಿದೆ, ಗೃಹ ಸಚಿವರ ಕಚೇರಿಯಲ್ಲಿ ಹಗರಣ ನೆಡೆದಿದೆ, ಅನೇಕ ಸಚಿವರು ಇದರಲ್ಲಿ ಭಾಗಿಯಾಗಿದ್ದಾರೆ. ಇದನ್ನು ಯಾರು ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದರು,
ಬಿಜೆಪಿಯ ಆಮಿಷಕ್ಕೆ ಸೇರ್ಪಡೆ : ಕಾಂಗ್ರೆಸ್‌ನ ಕೆಲ ನಾಯಕರು ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂಬ ಮಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಮೋದ್ ಮದ್ವರಾಜ್, ಕೆ.ಬಿ.ಕೃಷ್ಣಮೂರ್ತಿ ಮೊದಲಾದ ನಾಯಕರುಗಳಿಗೆ ಬಿಜೆಪಿ ಸೇರುವಂತೆ ಆ ಪಕ್ಷದ ನಾಯಕರು ಆಸೆ ಆಮಿಷ ಒಡ್ಡಿದರು, ಈ ವಿಚಾರ ನಮಗೆ ತಿಳಿದಿತ್ತು. ಬಿಜೆಪಿಯವರು ಏನೋ ಕೊಡುತ್ತಾರೆ ಎಂದು ನಮ್ಮ ಪಕ್ಷ ಬಿಟ್ಟಿ ಹೋಗಿದ್ದಾರೆ. ಈ ಬಗ್ಗೆ ನಮಗೆ ಈ ಬಗ್ಗೆ ಚಿಂತೆ ಇಲ್ಲ, ನಾನು ಇರಲಿ ಇಲ್ಲದಿರಲ್ಲಿ ಕಾಂಗ್ರೆಸ್ ಪಕ್ಷ ಇರುತ್ತದೆ. ಪಕ್ಷಕ್ಕೆ ಬೇಕಾದಷ್ಟು ಜನ ಬರುವರು ಇದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.