Advertisement
ರವಿವಾರ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಬಸವೇಶ್ವರ ಸಮುದಾಯ ಭವನದಲ್ಲಿ ತೇರದಾಳ ವಿಧಾನಸಭಾ ಕ್ಷೇತ್ರದ ನೇಕಾರ ಸಮಸ್ಯೆ ಆಲಿಸಲು ಹಾಗು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ರಾಜ್ಯದ ಅನೇಕ ಕಡೆಗಳಲ್ಲಿ ನೇಕಾರಿಕೆ ಉದ್ದಿಮೆಯಿದೆ. ಮಹತ್ವದ್ದಾಗಿ ದೊಡ್ಡ ಬಳ್ಳಾಪುರ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ಎಲ್ಲೆಡೆ ನೇಕಾರರ ಸಮಸ್ಯೆಗಳನ್ನು ಆಲಿಸಿ ಅವರ ಧ್ವನಿಯಾಗಿ ವಿಧಾನಸೌಧದಲ್ಲಿ ನಿಲ್ಲುತ್ತೇನೆ. ಸಾಕಷ್ಟು ಸಮಸ್ಯೆಗಳನ್ನು ಹೊತ್ತು ನಿಂತಿರುವ ಜವಳಿ ಕ್ಷೇತ್ರಕ್ಕೆ ಹೊಸ ಭಾಷ್ಯ ಬರೆಯುವಲ್ಲಿ ಈ ಸಂವಾದ ಕಾರಣವಾಗಲಿದ್ದು, ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಇಂತಹ ಮಹತ್ವದ ಸಂವಾದ ಕಾರ್ಯಕ್ರಮ ಜರುಗಿರುವದು ಸಮಾಧಾನ ತರುತ್ತಿದೆ ಅಲ್ಲದೆ ಇವೆಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುವ ವಿಶ್ವಾಸವಿದೆ ಎಂದು ಡಿ.ಕೆ. ಶಿವಕುಮಾರ ಹೇಳಿದರು.
Related Articles
Advertisement
ರಾಜೀನಾಮೆ ನೀಡಲಿ: ಕಾಂಗ್ರೆಸ್ ಮುಖಂಡ ಎಂ.ಡಿ. ಲಕ್ಷ್ಮೀನಾರಾಯಣ ಮಾತನಾಡಿ, ನೇಕಾರರಿಗೆ ಯಾವದೇ ಸಮಸ್ಯೆಯಿಲ್ಲವೆಂದು ಹೇಳುತ್ತಿರುವ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ನೇಕಾರಿಕೆಯ ಅರಿವೇ ಇಲ್ಲ. ಜವಳಿ ಮಂತ್ರಿಗಳಂತು ಯಾವದೇ ಸಂಬಂಧವಿಲ್ಲದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತೇರದಾಳ ಶಾಸಕರ ಬೇಜವಾಬ್ದಾರಿತನದಿಂದ ನೇಕಾರಿಕೆ ಉದ್ಯಮ ಸಂಪೂರ್ಣ ನೆಲಕಚ್ಚುವಲ್ಲಿ ಕಾರಣವಾಗಿದೆ. ಈ ಮೂವರೂ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ನೇಕಾರರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸರಣಿ ಆತ್ಮಹತ್ಯೆಗೀಡಾಗುತ್ತಿರುವ ನೇಕಾರ ಸಮುದಾಯಕ್ಕೆ ಸಾಂತ್ವನ ಹಾಗು ಧೈರ್ಯ ತುಂಬಲು ಸರ್ಕಾರ ವಿಫಲಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೈ ಮರೆತ ಜನ : ನೇಕಾರರ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಿಕೆಶಿ ಅವರನ್ನು ನೋಡಲು ಆಗಮಿಸಿದ್ದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ರು. ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಇಲ್ಲದೆ ಕೊರೊನಾ ನಿರ್ಲಕ್ಷಿಸಿ ಮೈಮರೆತಿದ್ದು ಕಂಡುಬAತು. ಇದು ಸಾಮಾನ್ಯರಿಗೆ ಒಂದು ನಿಯಮ, ರಾಜಕಾರಣಿಗಳಿಗೆ ಮತ್ತೊಂದು ನಿಯಮವೇ ಎನ್ನುವಂತಾಯಿತು.
ವಿಧಾನಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ, ಶಾಸಕ ಆನಂದ ನ್ಯಾಮಗೌಡ, ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಡಾ. ಪದ್ಮಜೀತ ನಾಡಗೌಡ ಪಾಟೀಲ, ಡಾ. ಎ.ಆರ್. ಬೆಳಗಲಿ, ಶಂಕರ ಸೊರಗಾಂವಿ, ನೀಲಕಂಠ ಮುತ್ತೂರ, ರಾಜೇಂದ್ರ ಭದ್ರನ್ನವರ, ನೀಲಕಂಠ ಮುತ್ತೂರ, ಶಂಕರ ಜಾಲಿಗಿಡದ, ಬಸವರಾಜ ಯೆಂಡಿಗೇರಿ, ಬ್ರೀಜಮೋಹನ ಡಾಗಾ, ಸತ್ಯಪ್ಪ ಮಗದುಮ, ಮಲ್ಲಪ್ಪ ಸಿಂಗಾಡಿ, ಚಿದಾನಂದ ಗಾಳಿ, ಶ್ರೀಶೈಲ ಮೇಣಿ, ಶ್ರೀನಿವಾಸ ಬಳ್ಳಾರಿ, ಡಿ. ಎಲ್. ಹರೀಷ, ರವೀಂದ್ರ ಕಲಬುರ್ಗಿ, ಕೆ.ಪಿ.ಸಿ.ಸಿ.ರಾಜ್ಯ ಮಹಿಳಾ ಅಧ್ಯಕ್ಷರು ಪುಷ್ಪಾ ಅಮರನಾಥ, ಪ್ರವೀಣ ನಾಡಗೌಡ, ಅಶೋಕ ಆಳಗೊಂಡ, ಕಾಶಿನಾಥ ಹುಡೇದ, ರಂಗನಗೌಡ ಪಾಟೀಲ, ಈಶ್ವರ ಚಮಕೇರಿ, ಮೊಹಮ್ಮದ ಝಾರೆ, ಮೀನಾಕ್ಷೀ ನೆಲಗಡೆ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಸೇರಿದಂತೆ ಅನೇಕರಿದ್ದರು.