ಹೈದರಾಬಾದ್: ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಸದ್ಯದ ಪರಿಸ್ಥಿತಿಯಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಆರಂಭಿಕ ಮುನ್ನಡೆಯನ್ನು ಸಾಧಿಸಿದ್ದು, ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿಯೂ ತೆಲಂಗಾಣದಲ್ಲಿ ಪೈಪೋಟಿಯನ್ನು ನೀಡಿದ್ದು ಸದ್ಯ ಜಿದ್ದಾ ಜಿದ್ದಿನಲ್ಲಿದೆ.
ಇದರ ನಡುವೆ ಪಕ್ಷದಲ್ಲಿ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆ ಇರುವ ನಿಟ್ಟಿನಲ್ಲಿ ಪಕ್ಷದ ಅಭ್ಯರ್ಥಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಟ್ರಬಲ್ ಶೂಟರ್ ಡಿಕೆ ಶಿವ ಕುಮಾರ್ ಹಾಗೂ ಮೂವರು ಸಚಿವರ ತಂಡ ಹೈದರಾಬಾದ್ ಗೆ ತೆರಳಿದೆ.
ಚುನಾವಣಾ ಫಲಿತಾಂಶ ಕ್ಪಣ ಕ್ಷಣಕ್ಕೂ ಕುತೂಹಲ ಘಟಕ್ಕೆ ತೆರಳುತ್ತಿದ್ದು ಈ ಹಿನ್ನೆಲೆ ಹೈದರಾಬಾದ್ ಕಾಂಗ್ರೆಸ್ ವಾರ್ ರೂಮ್ನಲ್ಲಿ ಡಿಕೆ ಶಿವಕುಮಾರ್ ಮತ್ತು ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯುತ್ತಿದೆ ಎನ್ನಲಾಗಿದೆ. ತೆಲಂಗಾಣದಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳನ್ನು ತಕ್ಷಣದಿಂದಲೇ ಹೈದರಾಬಾದ್ ಗೆ ಬರುವಂತೆ ಸೂಚನೆ ನೀಡಿದ್ದು ಗೆದ್ದ ಎಲ್ಲಾ ಅಭ್ಯರ್ಥಿಗಳನ್ನು ಕುದುರೆ ವ್ಯಾಪಾರದಿಂದ ರಕ್ಷಿಸಲು ಕರ್ನಾಟಕಕ್ಕೆ ಕರೆತರುವ ಕುರಿತು ಸಭೆಯನ್ನೂ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಈಗಾಗಲೇ ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ತಂಗಿರುವ ಡಿಕೆ ಶಿವ ಕುಮಾರ್ ತಂಡ ಹೋಟೆಲ್ ನ ಹೊರಗೆ ತಮ್ಮ ಅಭ್ಯರ್ಥಿಗಳನ್ನು ಕರೆದೊಯ್ಯಲು ಬಸ್ಸುಗಳನ್ನು ಸಿದ್ದ ಪಡಿಸಿದ್ದು ಹೋಟೆಲ್ ನ ಹೊರಗಡೆ ಬಸ್ಸುಗಳನ್ನು ನಿಲ್ಲಿಸಲಾಗಿದೆ.
ಇದನ್ನೂ ಓದಿ: Tamil Nadu: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್, ಓರ್ವ ಮೃತ್ಯು, 20ಮಂದಿಗೆ ಗಾಯ