ಬೆಂಗಳೂರು: ಶೇ.40ರಷ್ಟು ಪರ್ಸೆಂಟೇಜ್ ಆರೋಪ ಹೊರಿಸಿ ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿ ತನಿಖೆ ನಡೆಸಲು ಸದನ ಸಮಿತಿ ರಚಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು,ಲೋಕೋಪಯೋಗಿ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಕಾರ್ಪೊರೇಷನ್ ಕಾಮಗಾರಿಗಳಲ್ಲಿ ಶೇ. 40 ರಷ್ಟು ಕಮಿಷನ್ ಆರೋಪದ ತನಿಖೆಗೆ ಜಂಟಿ ಸದನ ಸಮಿತಿ ರಚಿ ಸಲಿ. ಕಾಂಗ್ರೆಸ್ ಅವಧಿಯದ್ದೂ ತನಿಖೆ ನಡೆಯಲಿ ಎಂದು ಸವಾಲು ಹಾಕಿ ದರು. ಕಳೆದ 10 ವರ್ಷಗಳ ಅವಧಿಯ ತನಿಖೆ ಮಾಡಿಸಲಿ ಎಂದರು.
ಇದನ್ನೂ ಓದಿ: ಹೊಸ ರೂಪಾಂತರಿಯಿಂದ ಆತಂಕ : ಹಲವು ದೇಶಗಳಲ್ಲಿ ಕಟ್ಟೆಚ್ಚರ, ವಿಮಾನಯಾನಕ್ಕೆ ನಿಷೇಧ
ಸು.ಕೋ. ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಲಿ ರಾಕೇಶ್ ಸಿಂಗ್ ಅವರು ಜಲಸಂಪ ನ್ಮೂಲ ಇಲಾಖೆ ಕಾರ್ಯದರ್ಶಿಗಳು. ಅವರೇನು ತನಿಖೆ ಮಾಡಲು ಸಾಧ್ಯ? ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಆಗಲಿ ಇಲ್ಲವೇ ಸದನ ಸಮಿತಿಯಿಂದ ತನಿಖೆ ಮಾಡಿಸಲಿ ಎಂದು ಅವರು ಡಿಕೆಶಿ ಹೇಳಿದರು.
ನಾವು ಈಗಾಗಲೇ ರಾಜ್ಯಪಾಲರಿಗೆ ದೂರು ಕೊಟ್ಟಿದ್ದೇವೆ. ಇನ್ನು ನಾವು ಸುಮ್ಮನಿರುವುದಿಲ್ಲ. ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.