ಶಿವಮೊಗ್ಗ: ಟಿಕೆಟ್ ಫೈಟ್ ಇಲ್ಲದೇ ಈ ಬಾರಿ ತೀರಾ ನೀರಸ ಎನಿಸಿದ್ದ ಶಿವಮೊಗ್ಗ ಲೋಕಸಭಾ ಚುನಾವಣೆ, ಮೈತ್ರಿ ಅಭ್ಯರ್ಥಿ ಪರ ಡಿ.ಕೆ. ಶಿವಕುಮಾರ್ ಪ್ರಚಾರಕ್ಕೆ ಬರ್ತಾರೆ ಅಂದ ಕೂಡಲೇ ಗರಿಗೆದರಿದೆ. ಅವರು ಬರ್ತಾರಾ, ಬರಲ್ವ ಎಂಬಬಗ್ಗೆ ಬಿಸಿ ಚರ್ಚೆ ಶುರುವಾಗಿದೆ. ಮೈತ್ರಿ ಪಕ್ಷದವರು, “ಡಿಕೆಶಿ ಬಂದೇ ಬರ್ತಾರೆ. ಬರದೇ ಹೋದರೆ ನಾವು ಬಿಡುವುದಿಲ್ಲ’ಎನ್ನುತ್ತಿದ್ದಾರೆ. ಇತ್ತ ಬಿಜೆಪಿ ನಾಯಕರು “ನೂರು ಜನ ಶಿವಕುಮಾರರರು ಬಂದ್ರು, ಗೆಲುವು ನಮ್ಮದೇ’ ಎನ್ನುತ್ತಿದ್ದಾರೆ. ಬಳ್ಳಾರಿ ಕೋಟೆ ಛಿದ್ರ ಮಾಡಿದಂತೆ ಶಿವಮೊಗ್ಗದಲ್ಲೂ ಮಾಡ್ತಾರಾ? ಡಿಕೆಶಿ ಬರ್ತಾರಾ ಅನ್ನೋದೆ ಜಿಜ್ಞಾಸೆಯಾಗಿ ಉಳಿದಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, 8ರ ಪೈಕಿ 7ರಲ್ಲಿ ಬಿಜೆಪಿ ಶಾಸಕರೇ ಇದ್ದಾರೆ. ಸಂಘ ಪರಿವಾರ ಆರಂಭದಿಂದಲೂ ಭದ್ರ ಬುನಾದಿ ಹಾಕಿಕೊಂಡು ಬಂದಿರುವುದರಿಂದ ಬಿಜೆಪಿ ತನ್ನ ಸಾರ್ಮರ್ಥ್ಯ ವೃದಿಟಛಿಸಿಕೊಂಡಿದೆ. ಕಳೆದ ಎರಡೂ¾ರು ಚುನಾವಣೆಗಳಲ್ಲಿ ಇದು ಸಾಬೀತಾಗಿದೆ. ಬಳ್ಳಾರಿಯಲ್ಲಿದ್ದಂತಹ ಅನುಕೂಲಕರ ವಾತಾವರಣ ಶಿವಮೊಗ್ಗದಲ್ಲಿ ಇಲ್ಲ. ಇದನ್ನು ಡಿ.ಕೆ.ಶಿವಕುಮಾರ್ ಹೇಗೆ ಭೇದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಉಪ ಚುನಾವಣೆಯು ಬಿಜೆಪಿ ಕೋಟೆ ಯನ್ನು ಭೇದಿ ಸಬಹುದೆಂಬ ವಿಶ್ವಾಸವನ್ನು ಮೈತ್ರಿಕೂಟದಲ್ಲಿ ಮೂಡಿಸಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ 3.62 ಲಕ್ಷ ಮತಗಳ ಲೀಡ್ ಪಡೆದಿದ್ದ ಬಿಜೆಪಿ, 2018ರ ಉಪ ಚುನಾವಣೆಯಲ್ಲಿ ಕೇವಲ 52 ಸಾವಿರ ಮತ ಮುನ್ನಡೆಗೆ ತೃಪ್ತಿಪಟ್ಟುಕೊಂಡಿತ್ತು. ಇದೇ ಜೆಡಿಎಸ್ -ಕಾಂಗ್ರೆಸ್ ಮೈತ್ರಿಕೂಟದ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಆದರೆ, ಉಪಚುನಾವಣೆ ಯಲ್ಲಿದ್ದ ವಾತಾವರಣ ಈಗ ಕಾಣುತ್ತಿಲ್ಲ.
ಉಪಚುನಾವಣೆಯಲ್ಲಿ 3 ಲೋಕಸಭಾ ಕ್ಷೇತ್ರಗಳಲ್ಲಿ ಮಾತ್ರ ಚುನಾವಣೆ ಇತ್ತು. ಕಾಂಗ್ರೆಸ್ -ಜೆಡಿಎಸ್ ಮುಖಂಡರು, ಸಚಿವರು ಚುನಾವಣೆಗಾಗಿ ಓಡಾಡಿದ್ದರು. ಖುದ್ದು ಸಿಎಂ ಎಚ್.ಡಿ. ಕುಮಾರಸ್ವಾಮಿ ನಾಲ್ಕು ದಿನ ಕ್ಷೇತ್ರದಲ್ಲೇ ಉಳಿದು ಪ್ರಚಾರ ಮಾಡಿದ್ದರು. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಸೇರಿ 10ಕ್ಕೂ ಹೆಚ್ಚು ಸಚಿವರು, ಶಾಸಕರು ಬಿರುಸಿನ ಪ್ರಚಾರ ನಡೆಸಿದ್ದರು. ಬಿಜೆಪಿ ಸಹ ನಲವತ್ತಕ್ಕೂ ಹೆಚ್ಚು ಮುಖಂಡರು, ಶಾಸಕರನ್ನೂ ಕರೆಸಿಕೊಂಡು ಕ್ಷೇತ್ರದ ಮೂಲೆ ಮೂಲೆಯಲ್ಲೂ ಪ್ರಚಾರ ನಡೆಸಿತ್ತು. ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನವರು ಸ್ವಂತ ಕ್ಷೇತ್ರಕ್ಕೆ ಹೆಚ್ಚಿನ ಸಮಯ ಮೀಸಲಿಟ್ಟು ಬೂತ್‌ಮಟ್ಟದ ಪ್ರಚಾರವನ್ನೂ ನಡೆಸಿದ್ದರು. ಈ ಚುನಾವಣೆಯಲ್ಲಿ ಎಲ್ಲೂ ಮೋದಿ ಹವಾ, ಹಿಂದುತ್ವ ಅಜೆಂಡಾ ಕಾಣಲಿಲ್ಲ. ಆದರೆ, ಈಗಿನ ಸಾರ್ವತ್ರಿಕ ಚುನಾವಣೆಯಲ್ಲಿ ರಾಷ್ಟ್ರೀಯ ವಿಷಯಗಳು ಸ್ಥಳೀಯ ಸಮಸ್ಯೆಗಳನ್ನು ಮುಚ್ಚಿ ಹಾಕಿವೆ.
ಬಿಎಸ್‌ವೈ ಪರಮಾಪ್ತ
ಸಚಿವ ಡಿ.ಕೆ.ಶಿವಕುಮಾರ್ ಮತ್ತು ಯಡಿಯೂರಪ್ಪ ಅವರ ನಡುವೆ ಉತ್ತಮ ಬಾಂಧವ್ಯ ಇದ್ದು ಶಿವಮೊಗ್ಗದಲ್ಲಿ ಅವರು ಅಖಾಡಕ್ಕೆ ಇಳಿಯುತ್ತಾರಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ದೋಸ್ತಿ ಮುಖಂಡರ ಒತ್ತಡಕ್ಕೆ ಮಣಿದು ಶಿವಮೊಗ್ಗ ಉಸ್ತುವಾರಿಗೆ ಒಪ್ಪಿಗೆ ಸೂಚಿಸಿದ್ದರೂ ಅವರು ಅಖಾಡಕ್ಕೆ ಇಳಿಯುವುದು ಅನುಮಾನ ಎನ್ನಲಾಗುತ್ತಿದೆ. ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ ಅವರು ಮಾತ್ರ “ಬಂಗಾರಪ್ಪಜೀ ಶಿಷ್ಯ, ಬಂದೇ ಬರುತ್ತಾರೆ’ ಎನ್ನುತ್ತಿದ್ದಾರೆ.
ಶರತ್ ಭದ್ರಾವತಿ