Advertisement
ನಗರದ ಟಿಳಕವಾಡಿಯಲ್ಲಿರುವ ವೀರಸೌಧಕ್ಕೆ ಶುಕ್ರವಾರ ಭೇಟಿ ನೀಡಿ ಗಾಂಧೀಜಿ ಪ್ರತಿಮೆಗೆ ನಮನ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಹುಲ್ ಗಾಂಧಿ ದೇಶದ ಏಕತೆ, ಸಮಗ್ರತೆ, ಶಾಂತಿಗಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡುತ್ತಿದ್ದಾರೆ. ನಾವು ಮುಂದಿನ ಎರಡೂ¾ರು ತಿಂಗಳ ಕಾಲ ಈ ಸಂದೇಶವನ್ನು ಜನರಿಗೆ ತಿಳಿಸಲಿದ್ದು, ಸಮಾಜದಲ್ಲಿ ನೆಮ್ಮದಿ, ಶಾಂತಿ ಮೂಡಿಸಲು ಹಾಗೂ ಸುಭದ್ರ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ವಾಗ್ಧಾನದೊಂದಿಗೆ ಜ.11ರಂದು ವೀರಸೌಧದಿಂದ ಯಾತ್ರೆ ಹೊರಟಿದ್ದೇವೆ ಎಂದರು.
ಬೆಳಗಾವಿ ಅಧಿವೇಶನದಿಂದ ಉತ್ತರ ಕರ್ನಾಟಕ ಜನರಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಸಮಯ ಸಹಿತ ಎಲ್ಲವೂ ವ್ಯರ್ಥವಾಯಿತು. ಉತ್ತರ ಕರ್ನಾಟಕ ಭಾಗದ ಸಮಸ್ಯೆ, ಭ್ರಷ್ಟಾಚಾರ ವಿಚಾರ, ಮತ ಕಳ್ಳತನ ವಿಚಾರವಾಗಿ ಚರ್ಚೆಗೆ ಅವಕಾಶ ನೀಡಲಿಲ್ಲ. ಕೃಷ್ಣಾ, ಮಹಾದಾಯಿ ನೀರಾವರಿ ಯೋಜನೆ ವಿಚಾರವಾಗಿ ನಾವು ಹೋರಾಟ ಆರಂಭಿಸುತ್ತಿದ್ದೇವೆ ಎಂದು ಈಗ ತರಾತುರಿಯಲ್ಲಿ ಕಳಸಾ-ಬಂಡೂರಿ ಯೋಜನೆ ಡಿಪಿಆರ್‌ಗೆ ಒಪ್ಪಿಗೆ ನೀಡಿದ್ದಾರೆ ಎಂದರು.