Advertisement
ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಜೈಲಿಗೆ ಹೋಗಿ, ವಾಪಸ್ ಬರುವಾಗ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಡಿಕೆಶಿ ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಶಿವಕುಮಾರ್ ಪಕ್ಷ ನಿಷ್ಠೆಗೆ ಸೂಕ್ತ ಸ್ಥಾನಮಾನ ನೀಡುವುದಾಗಿ ಸೋನಿಯಾ ಭರವಸೆ ನೀಡಿದ್ದರು ಎನ್ನಲಾಗಿದೆ.
ಹೈಕಮಾಂಡ್ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ರನ್ನಾಗಿ ನೇಮಿಸಲು ಒಲವು ವ್ಯಕ್ತಪಡಿಸಿದೆ ಎನ್ನುವ ಮಾಹಿತಿ ಬಂದ ತತ್‌ಕ್ಷಣ ಸಿದ್ದರಾಮಯ್ಯ ಬಣ ಸಕ್ರಿಯ ವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ತನ್ನ ಆಪ್ತರ ಹೆಸರುಗಳನ್ನು ಮುಂಚೂಣಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
Related Articles
ಶಿವಕುಮಾರ್ ಅವರ ವಿರುದ್ಧ ಅಕ್ರಮ ಹಣ ವರ್ಗಾ ವಣೆ ಆರೋಪ ಇದ್ದು, ಈಗಾಗಲೇ ಜೈಲು ವಾಸ ಮಾಡಿ ಬಂದಿದ್ದಾರೆ. ಅಲ್ಲದೆ ಸಿಬಿಐ ಕೂಡ ಅಕ್ರಮ ಹಣ ಹಾಗೂ ಆಸ್ತಿ ಸಂಪಾದನೆ ಕುರಿತು ತನಿಖೆ ನಡೆಸುವ ಸಾಧ್ಯತೆ ಇದೆ. ಒಂದು ವೇಳೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಬಿಜೆಪಿಯವರು ರಾಜಕೀಯ ದ್ವೇಷದಿಂದ ಸಿಬಿಐ ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಂಡು ಅವರನ್ನು ಜೈಲಿಗೆ ಕಳುಹಿಸುವ ಪ್ರಸಂಗ ಉಂಟಾದರೆ ಪಕ್ಷದ ಅಧ್ಯಕ್ಷರೇ ಜೈಲಿಗೆ ಹೋಗಿದ್ದಾರೆ ಎನ್ನುವ ಆರೋಪ ಎದುರಿಸಬೇಕಾಗುತ್ತದೆ. ಆಗ ಪಕ್ಷ ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಬಹಿರಂಗವಾಗಿ ಹೋರಾಟ ಮಾಡಲು ಕಷ್ಟವಾದೀತು ಎನ್ನುವ ಆಕ್ಷೇಪ ವನ್ನು ಹೈಕಮಾಂಡ್ ಮುಂದೆ ಸಿದ್ದು ಬಣ ವ್ಯಕ್ತಪಡಿಸಿದೆ ಎನ್ನಲಾಗುತ್ತಿದೆ.
Advertisement