Advertisement
ಕಲಬುರಗಿ, ಧಾರವಾಡ, ಬೆಳಗಾವಿ, ಬೀದರ್, ರಾಯಚೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಪಡೆಯುವ ನಿಟ್ಟಿನಲ್ಲಿ ಗುಪ್ತ ಕಾರ್ಯಾಚರಣೆ ಆರಂಭಿಸಿದ್ದಾರೆ. ವೈಯಕ್ತಿಕವಾಗಿ ತಮ್ಮ ಜತೆ ಉತ್ತಮ ಸಂಬಂಧ ಹೊಂದಿರುವ ಆ ಭಾಗದ ಜೆಡಿಎಸ್ ನಾಯಕರನ್ನು ಸಂಪರ್ಕಿಸಿ ಮನ ವೊಲಿಕೆಗೆ ಮುಂದಾಗಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಧಾರವಾಡದಲ್ಲಿ ಕೋನರೆಡ್ಡಿ, ರಾಯಚೂರಿನಲ್ಲಿ ವೆಂಕಟರಾವ್ ನಾಡಗೌಡ, ಬೀದರ್‌ನಲ್ಲಿ ಬಂಡೆಪ್ಪ ಕಾಶೆಂಪುರ್ ಅವರನ್ನು ಸಂಪರ್ಕಿಸಿ ಬೆಂಬಲ ಕೋರಲಾಗಿದೆ. ಕಲಬುರಗಿ, ಬೆಳಗಾವಿಯ ಜಿಲ್ಲಾ ನಾಯಕರ ಸಂಪರ್ಕದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರೊಬ್ಬರಿದ್ದಾರೆ ಎನ್ನಲಾಗಿದೆ.
Related Articles
Advertisement
ಇದನ್ನೂ ಓದಿ:ಆನ್ ಲೈನ್ ಗೇಮಿಂಗ್ ಕಂಪನಿ ಬ್ಯಾಂಕ್ ಖಾತೆ ಜಪ್ತಿ ಆದೇಶಕ್ಕೆ ಹೈಕೋರ್ಟ್ ತಡೆ
ಆದರೆ ಎಚ್.ಡಿ. ಕುಮಾರಸ್ವಾಮಿ ಯವರ ಹೇಳಿಕೆ ಬಳಿಕ ಜೆಡಿಎಸ್ ಸ್ಥಳೀಯ ನಾಯಕರಿಗೆ ಬೇಡಿಕೆ ಕುದುರಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ನಾಯಕರೂ ಸಂಪರ್ಕ ಮಾಡುತ್ತಿದ್ದಾರೆ ಎನ್ನಲಾಗಿದೆ.
ಅರ್ಧಮನಸ್ಸುವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜತೆ ಬಹಿರಂಗವಾಗಿ ಸೀಟು ಹೊಂದಾಣಿಕೆಗೆ ಜೆಡಿಎಸ್ ಮುಕ್ತ ಮನಸ್ಸು ಹೊಂದಿತ್ತು. ಯಡಿಯೂರಪ್ಪ ದೂರವಾಣಿ ಮೂಲಕ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿದ್ದರು. ಅನಂತರ ಜೆಡಿಎಸ್ ಸ್ಪರ್ಧೆ ಮಾಡದ ಕಡೆ ಬೆಂಬಲ ಪಡೆಯುತ್ತೇವೆ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಆದರೆ ಪಕ್ಷದ ಮಟ್ಟದಲ್ಲಿ ಆ ಕುರಿತು ಹೆಚ್ಚು ಆಸಕ್ತಿ ತಾಳಲಿಲ್ಲ ಎನ್ನಲಾಗಿದೆ. ಕೋಲಾರ, ಮಂಡ್ಯ ಮತ್ತು ಬೆಂಗ ಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸದೆ ಜೆಡಿಎಸ್‌ಗೆ ಬೆಂಬಲ ನೀಡುವುದು. ಜೆಡಿಎಸ್ 18 ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲ ನೀಡುವುದು. ಆ ಮೂಲಕ ಅಧಿಕೃತವಾಗಿಯೇ ಮೈತ್ರಿ ಮಾಡಿಕೊಳ್ಳೋಣ ಎಂಬ ಪ್ರಸ್ತಾವನೆ ನೀಡಲಾಗಿತ್ತು. ಕೋಲಾರದಲ್ಲಿ ಕೊನೆ ದಿನದವರೆಗೂ ಇಬ್ಬರು ಸಚಿವರು ಮೈತ್ರಿ ಮಾಡಿಕೊಳ್ಳೋಣ, ಬಿಜೆಪಿ ಅಭ್ಯರ್ಥಿ ಹಾಕುವುದಿಲ್ಲ ಎಂದೇ ಕುಮಾರಸ್ವಾಮಿ ಜತೆ ಸಂಪರ್ಕದಲ್ಲಿದ್ದರು. ಆದರೆ ಬಿಜೆಪಿಯ ಕೆಲವು ನಾಯಕರಿಗೆ ಇದು ಇಷ್ಟ ಇರಲಿಲ್ಲ. ಮೈತ್ರಿ ಆದರೆ ಪಕ್ಷದಲ್ಲಿ ಬಿಎಸ್‌ವೈ ಮೇಲುಗೈ ಆಗಬಹುದು ಎಂಬ ಕಾರಣಕ್ಕೆ ತಪ್ಪಿಸಿದರು ಎಂಬ ಮಾತುಗಳು ಕೇಳಿಬರುತ್ತಿವೆ. ಕೆಪಿಸಿಸಿ ಅಧ್ಯಕ್ಷನಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಜೆಡಿಎಸ್ ಅಷ್ಟೇ ಅಲ್ಲ ಸಿಪಿಎಂ, ರೈತ ಸಂಘ ಎಲ್ಲರ ಮತವನ್ನೂ ಕೇಳುತ್ತೇನೆ. ಮತದಾರರಿಗೆ ಮುಕ್ತ ಮತದಾನದ ಅವಕಾಶವಿದ್ದು, ಯಾರು ಯಾರಿಗೆ ಬೇಕಾದರೂ ಮತ ಹಾಕಬಹುದು.
– ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ