Advertisement

ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತ ನೀಡಲು ಕಾಂಗ್ರೆಸ್‌ ಸದಾ ಸಿದ್ಧ: ಡಿಕೆಶಿ

08:33 PM Apr 27, 2021 | Team Udayavani |

ಬೆಂಗಳೂರು: ಕೊರೊನಾ ಕಾರಣಕ್ಕೆ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತ ನೀಡಲು ಕಾಂಗ್ರೆಸ್‌ ಸಿದ್ಧವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

Advertisement

ಹಿರಿಯ ಕಾಂಗ್ರೆಸ್‌ ನಾಯಕರ ವಿಡಿಯೋ ಸಂವಾದದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಭೆಯಲ್ಲಿ ಅನೇಕ ನಾಯಕರ ಜತೆ ಸಲಹೆ ತೆಗೆದುಕೊಂಡಿದ್ದು, ಕೆಪಿಸಿಸಿ, ಮಹಿಳಾ ಕಾಂಗ್ರೆಸ್‌, ಯುವ ಕಾಂಗ್ರೆಸ್‌ ಸೇರಿ ಎಲ್ಲರೂ ಒಟ್ಟಾಗಿ ಕಾಯಕ್ರಮ ರೂಪಿಸುತ್ತೇವೆ. ಕೋವಿಡ್‌ ಸೆಂಟರ್‌ ಆರಂಭಿಸಿದ್ದೇವೆ. ದಿನದ 24 ಗಂಟೆ ವೈದ್ಯರ ಸಲಹೆ ನೀಡಲು, ಜನರಿಗೆ ಸಹಾಯ ಮಾಡಲು ಯತ್ನಿಸುತ್ತೇವೆ. ಖಾಸಗಿ ಆಸ್ಪತ್ರೆಗೆ ಔಷಧ ಪೂರೈಕೆ ಲೋಪದ ಬಗ್ಗೆ ಚರ್ಚಿಸುತ್ತೇನೆ. ಕಾಂಗ್ರೆಸ್‌ ಪಕ್ಷದಿಂದ ಹೆಚ್ಚಿನ ಜನರಿಗೆ ಸಹಾಯ ಮಾಡಲು ಕಾರ್ಯಕ್ರಮ ರೂಪಿಸುತ್ತೇವೆ ಎಂದರು.

ಈಗ ಹೋರಾಟ ಮುಖ್ಯವಲ್ಲ. ಜನರ ಬದುಕಿನಲ್ಲಿ ಸಂಕಷ್ಟದಲ್ಲಿ ಅವರ ಜತೆಗೆ ನಿಂತು ಅವರ ಆರೋಗ್ಯಕಾಪಾಡಿ, ಜೀವ ಉಳಿಸಲು ಪ್ರಯತ್ನಿಸುತ್ತೇವೆ. ಲಾಕ್‌ ಡೌನ್‌ ಹೇರಿರುವುದಕ್ಕೆ ಆರ್ಥಿಕ ನೆರವಿನ ಪ್ಯಾಕೇಜ್‌ ನೀಡಬೇಕು ಎಂದು ಆಗ್ರಹಿಸಿದ್ದೇವೆ. 2 ಕೆ.ಜಿ ಅಕ್ಕಿ ಮಾಡಿರುವುದು ರಾಜ್ಯದ ದುರಂತ. ಇದು ನಾಚಿಕೆಗೇಡಿನ ವಿಚಾರ. ಇವರು ಕೈಯಿಂದ ಕೊಡುತ್ತಿದ್ದಾರಾ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.

ಇದನ್ನೂ ಓದಿ :50 ಶವಗಳ ಸಾಮೂಹಿಕ ಅಂತ್ಯ ಸಂಸ್ಕಾರ: ದುರಂತ ಘಟನೆಗೆ ಸಾಕ್ಷಿಯಾದ ದೆಹಲಿ

ವಿಡಿಯೋ ಸಂವಾದದಲ್ಲಿ ನಮ್ಮ ರಾಜ್ಯದ ಉಸ್ತುವಾರಿ ಸುರ್ಜೆವಾಲ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಕೋವಿಡ್‌ ಪರಿಸ್ಥಿತಿಯಲ್ಲಿ ಹೇಗೆ ಜವಾಬ್ದಾರಿ ವಹಿಸಬೇಕು ಎಂಬುದರ ಬಗ್ಗೆ ಸಲಹೆ ಕೊಟ್ಟಿದ್ದಾರೆ. ಆಸ್ಪತ್ರೆಯಲ್ಲಿರುವ ರೋಗಿಗಳಿಂದ, ಜನ ಸಾಮಾನ್ಯರು ಹಾಗೂ ಕೊರೋನಾದಿಂದ ಸತ್ತವರ ಅಂತ್ಯಸಂಸ್ಕಾರಕ್ಕೆ ಹೇಗೆ ನೆರವಾಗಬೇಕು ಎಂಬುದನ್ನು ತಿಳಿಸಿದರು. ಮನಮೋಹನ್‌ ಸಿಂಗ್‌ ಅವರು ಕೊಟ್ಟ ಸಲಹೆ ಮೇರೆಗೆ ಸರ್ಕಾರ ಕೈಗೊಂಡ ತೀರ್ಮಾನ, ಸೋನಿಯಾ ಗಾಂಧಿ ಅವರು ಮಾಧ್ಯಮದ ಮೂಲಕ ಕೊಟ್ಟ ಸಂದೇಶಗಳನ್ನು ಕೊಟ್ಟಿದ್ದಾರೆ, ಕಾರ್ಯಕಾರಿ ಸಮಿತಿ ಸಭೆ ತೀರ್ಮಾನದ ಬಗ್ಗೆ ತಿಳಿಸಿದ್ದಾರೆ.

Advertisement

ಸರ್ಕಾರ ಔಷಧ ತಡೆಹಿಡಿದಿದೆ: ಡಿಕೆಶಿ
ವಿಡಿಯೋ ಸಂವಾದದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್‌,ನೀವು ಕೊಟ್ಟ ಎಲ್ಲ ಸಲಹೆಗಳನ್ನು ನಾವು ಪಾಲಿಸುತ್ತೇವೆ ಎಂದು ಸುರ್ಜೆವಾಲಾ ಅವರಿಗೆ ಭರವಸೆ ನೀಡಿದೆ. ಇದೇ ವೇಳೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಎಲ್ಲ ನಾವು ಆರ್ಡರ್‌ ಮಾಡಿರುವ ಔಷಧಗಳನ್ನು ತಡೆಹಿಡಿದಿದೆ. ಇದಕ್ಕೆ 15 ದಿನಗಳ ಕಾಲಾವಕಾಶ ತೆಗೆದುಕೊಳ್ಳಬಹುದು. ಈ ವಿಚಾರವಾಗಿ ನಾನು ಎಂ.ಬಿ ಪಾಟೀಲರ ಜತೆ ಸಭೆ ನಡೆಸಿದೆ. ನಮ್ಮ ನಾಯಕರ ವೈದ್ಯಕೀಯ ಸಂಸ್ಥೆಗಳಿಗೆ ರೆಮಿಡಿಸಿವಿರ್‌ ಪೂರೈಕೆಯಾಗುತ್ತಿಲ್ಲ. ಈ ವಿಚಾರವಾಗಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಆರೋಗ್ಯ ಇಲಾಖೆ ಕಾರ್ಯದರ್ಶಿಗಳ ಜತೆ ಚರ್ಚಿಸಿದ್ದು, ಔಷಧಿ ಪೂರೈಕೆ ಮಾಡದೆ ಚಿಕಿತ್ಸೆ ನೀವುದುದಾದರೂ ಹೇಗೆ ಎಂದು ಕೇಳಲಾಗಿದೆ. ಆ ಸಮಯದಲ್ಲಿ ವೈದ್ಯಕೀಯ ಸಂಸ್ಥೆಗಳನ್ನು ನಡೆಸುತ್ತಿರುವ ನಮ್ಮ ನಾಯಕರಾದ ಪರಮೇಶರ್‌ ಹಾಗೂ ಇತತರು, ಶಾಸಕಾಂಗ ಪಕ್ಷದ ನಾಯಕರು ಹಾಗೂ ಇತರ ಹಿರಿಯ ನಾಯಕರ ಜತೆ ಕೂತು ಈ ಬಗ್ಗೆ ಚರ್ಚೆ ಮಾಡುತ್ತೇವೆ. ಈ ಸಭೆಯಲ್ಲಿ ಭಾಗವಹಿಸಿದ ಎಲ್ಲ ನಾಯಕರಿಗೂ ನಾನು ಧನ್ಯವಾದ ತಿಳಿಸುತ್ತೇನೆ. ಇದೇ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್‌ ಮುಖಂಡ ಎಸ್‌. ಬಿ ಸಿದ್ನಾಳ್‌ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next