Advertisement
ಶಿವಮೊಗ್ಗದಲ್ಲಿ ನಡೆಯುತ್ತಿರುವ ಜನಾಕ್ರೋಶ ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ಇಂದು ಶಿವಮೊಗ್ಗದಲ್ಲಿ ನಡೆಯುತ್ತಿರುವ ಸಭೆ ರಾಜ್ಯ ರಾಜಕಾರಣದ ಬದಲಾವಣೆಯ ಸಭೆ.ಇದು ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆಗಾಗಿ ನಡೆಯುವ ಸಭೆ ಎಂದಿದ್ದಾರೆ.
Related Articles
Advertisement
ಕಾನೂನು ಚೌಕಟ್ಟಿನಲ್ಲಿ ಪೊಲೀಸರು ಕೆಲಸಮಾಡಬೇಕು. ಆದರೆ ಇಂದು ಪೊಲೀಸರು ಕಾನೂನು ಚೌಕಟ್ಟಿಗೆ ವಿರುದ್ಧವಾಗಿ ಕೆಲಸ ಮಾಡಿದ್ದಾರೆ ಎಂದು ಗುಡುಗಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನುಡಿದಂತೆ ನಡೆಯಲು ಆಗಲಿಲ್ಲ. ಕರೋನಾ ಸಂದರ್ಭದಲ್ಲಿಯೂ ಸರ್ಕಾರಗಳು ಬಡವರಪರ ಬರಲಿಲ್ಲ. ಬಿಜೆಪಿ ಸರಕಾರ ಹಾಸಿಗೆ ದಿಂಬು ಔಷದಿಯಲ್ಲಿ ನಾಲ್ಕು ಸಾವಿರ ಕೋಟಿ ರೂಪಾಯಿ ನುಂಗಿ ನೀರು ಕುಡಿದಿದ್ದಾರೆ ಎಂದರು.
ಮಾತು ಮುಂದುವರೆಸಿ ಯಾವನೋ ತಗಡು ಕಂಪ್ಲೇಟ್ ಕೊಟ್ಟ ಎಂದಾಕ್ಷಣ ಸಾಗರ ಪೊಲೀಸರು ಸೋನಿಯಾ ಗಾಂದಿ ಮೇಲೆ ಎಫ್ ಐ ಆರ್ ದಾಖಲಿಸಿದ್ದರು. ಯಾವುದನ್ನೂ ನಾವು ಮರೆತಿಲ್ಲ. ಸೋನಿಯಾ ಗಾಂಧಿ ಮೇಲೆ ಪ್ರಕರಣ ದಾಖಲಿಸಿದವರಿಗೆ ಸಂಗಮೇಶ್ ಮೇಲೆ ಪ್ರಕರಣ ದಾಖಲಿಸುವುದು ಕಷ್ಟವಲ್ಲ ಬಿಡಿ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ : ‘ಬಾಂಬೆ ಬೇಗಮ್ಸ್’ ಪ್ರಸಾರ ರದ್ದುಗೊಳಿಸುವಂತೆ ನೆಟ್ ಫ್ಲಿಕ್ಸ್ ಗೆ NCPCR ನೋಟಿಸ್
ರೈತರಿಗೆ ಭೂಮಿ ನೀಡುವವರು ಕಾಂಗ್ರೆಸ್ಸಿಗರು, ರೈತರ ಭೂಮಿ ಕಿತ್ತುಕೊಂಡು ಮಾರುವವರು ಬಿಜೆಪಿಯವರು. ಇದೇ ಕಾಂಗ್ರೆಸ್ ಹಾಗೂ ಬಿಜೆಪಿಗೆ ಇರುವ ವ್ಯತ್ಯಾಸ. ಕಾಂಗ್ರೆಸ್ಸಿನದು ರಾಷ್ಟ್ರೀಕರಣ ನೀತಿ. ಬಿಜೆಪಿಯದ್ದು ಖಾಸಗಿಕರಣ ನೀತಿ. ರಾಜ್ಯದಲ್ಲಿ ಬಿಜೆಪಿಯ ಅಂತ್ಯ ಶಿವಮೊಗ್ಗದಿಂದಲೇ ಆರಂಭಗೊಳ್ಳಬೇಕು. ಇದಕ್ಕಾಗಿಯೇ ಶಿವಮೊಗ್ಗದಿಂದಲೇ ಹೋರಾಟ ಆರಂಭಿಸಿದ್ದೇವೆ ಎಂದು ಸರಕಾರದ ವಿರುದ್ಧ ಹರಿಹಾಯ್ದರು.