Advertisement
1910 ಶಾಲೆ ಆರಂಭಐದು ವರ್ಷಗಳಿಂದ ಸರಕಾರದ ಶಿಕ್ಷಕರೇ ಇಲ್ಲ!
5 ವರ್ಷಗಳಿಂದ ಈ ಶಾಲೆಯಲ್ಲಿ ಸರಕಾರಿ ಅನುದಾನಿತ ಶಿಕ್ಷಕರೇ ಇಲ್ಲ. ಆಡಳಿತ ಮಂಡಳಿಯೇ ನಾಲ್ವರು ಶಿಕ್ಷಕರನ್ನು ನೇಮಿಸಿಕೊಂಡು ಗೌರವಧನ ನೀಡಿ ಶಾಲೆಯನ್ನು ನಡೆಸುವ ಸ್ಥಿತಿ ನಿರ್ಮಾಣವಾಗಿದೆ.
Related Articles
ವಿಶಾಲ ತರಗತಿ ಕೋಣೆಗಳು, ಕುಡಿಯುವ ನೀರು, ಶೌಚಾಲಯ, “ಕಲ್ಯಾಣಿ ಹೆಗ್ಗಡ್ತಿ ರಂಗಮಂದಿರ’, ವಿಶಾಲ ಆಟದ ಬಯಲು, ಉತ್ತಮ ನಿರ್ವಹಣೆಯ ಉದ್ಯಾನವನ, ಆಟೋಟಗಳ ಪರಿಕರಗಳು, ಕಂಪ್ಯೂಟರ್ ಲ್ಯಾಬ್ ಇವೆ. ಯಕ್ಷಗಾನ, ಕರಾಟೆ, ಸಂಗೀತ, ನೃತ್ಯ ತರಗತಿಗಳು ನಡೆಯುತ್ತಿವೆ. ಹಳೆವಿದ್ಯಾರ್ಥಿ ಸಂಘದವರು ಪ್ರತಿವರ್ಷ ಎಲ್ಲ ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಲೇಖನ ಸಾಮಗ್ರಿಗಳನ್ನು ಉದಾರವಾಗಿ ನೀಡುತ್ತಿದ್ದಾರೆ. ಹತ್ತಿರದ (ದಡ್ಡು, ಶುಂಠಿಲಪದವು)ಕನ್ನಡ ಶಾಲೆಗಳೆಲ್ಲ ಮುಚ್ಚುತ್ತಿರುವ ಈ ಹೊತ್ತಿನಲ್ಲಿ ತಮ್ಮ ಹಿರಿಯರು ಕಟ್ಟಿ ಬೆಳೆಸಿದ ಈ ಶಾಲೆಯನ್ನು ಊರವರು, ಹಳೆವಿದ್ಯಾರ್ಥಿಗಳ ಸಹಕಾರದೊಂದಿಗೆ ಇನ್ನಷ್ಟು ಉನ್ನತಿಗೇರಿಸುವ ಹಂಬಲವನ್ನು ಶಾಲಾಡಳಿತ ನಿರ್ದೇಶಕ ಯದುನಾರಾಯಣ ಶೆಟ್ಟಿ ಅವರು ಹೊಂದಿದ್ದಾರೆ.
Advertisement
ಹೆಮ್ಮೆಯ ಹಳೆವಿದ್ಯಾರ್ಥಿಗಳುಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಮೋಹನದಾಸ ಹೆಗ್ಡೆ, ಮಾಜಿ ಸೈನಿಕ ಜೋನ್ ಕೊರೆಯಾ ಅರಿಯಾಳ, ಉದ್ಯಮಿ ಪ್ರೇಮದಾಸ ಶೆಟ್ಟಿ ಮುಂಬಯಿ, ಎಸಿಸಿಎ (ಯು.ಕೆ.) ಜಯರಾಮ ಸುವರ್ಣ ಹೊಸಬೆಟ್ಟು, ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ, ಕೃಷಿಕ ಕೃಷ್ಣ ರೈ, ಡಾ| ಚಿನ್ಮಯಾನಂದ ರೈ ಅಮೆರಿಕ, ಕೃಷಿ, ಹೈನುಗಾರಿಕೆಯಲ್ಲಿ ಹೆಸರಾದ ಮುಚ್ಚಾರು ವಿದ್ಯಾಧರ ಹೆಗ್ಡೆ, ಸಾಫ್ಟ್‌ವೇರ್ ಎಂಜಿನಿಯರ್, “ಆತ್ಮಿಕ’ ಕಿರುಚಿತ್ರಕ್ಕೆ ಪಂಚ ಪ್ರಶಸ್ತಿಗಳಿಸಿದ ವಿವೇಕ ಪ್ರಭು,ಮಹರಷ್ಟ್ರದ ವಿದ್ಯುನ್‌ಮಂಡಲದ ಅಧಿಕಾರಿ ಕೆ.ಎಸ್.ರಾವ್ ಅಂಬುಜಾಕ್ಷ ಭಟ್ ಗೋವಾ, ಪತ್ರಕರ್ತ ಕಿರಣ್ ಮಂಜನಬೈಲ್, ಚಿತ್ರ ನಟಿ ಆರಾಧನಾ ಭಟ್ ಈ ಶಾಲೆಯ ಸಾಧಕ ವಿದ್ಯಾರ್ಥಿಗಳು. ಪ್ರಶಸ್ತಿ ಪುರಸ್ಕೃತರು
ಮುಖ್ಯಶಿಕ್ಷಕರಾಗಿದ್ದ ನಾಟಕಕಾರ ಪುಟ್ಟಣ್ಣ ಪೂಜಾರಿ, ಸ್ಕೌಟ್ಸ್‌ನ ಕಬ್ಬಿನಾಲೆ ಶ್ರೀನಿವಾಸ ಭಟ್ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು. ಶೀನಪ್ಪ ಶೆಟ್ಟಿ, ಯು. ರಾಮಚಂದ್ರ ಭಟ್, ಡೆನಿಸ್ ಎಸ್. ಪಿಂಟೋ, ಎನ್. ರಘುರಾಮ ಶೆಟ್ಟಿ, ಜಗನ್ನಾಥ ಶೆಟ್ಟಿ, ಹವ್ಯಾಸಿ ಯಕ್ಷಗಾನ ಕಲಾವಿದ ಶ್ಯಾಮಸುಂದರ ರಾವ್ ಇವರೆಲ್ಲ ಮುಖ್ಯಶಿಕ್ಷಕರು. ರಂಗ ವಿನ್ಯಾಸಕಾರ ಸಿಲ್ವೆಸ್ಟರ್ ರೋಡ್ರಿಗಸ್, ಚಂದಯ್ಯ ಪೂಜಾರಿ, ಕರುಣಾಕರ ಶೆಟ್ಟಿ, ಸ್ಟೆಲ್ಲಾ, ನಿರ್ಮಲಾ, ನಾಗೇಶ ರಾವ್ ಇವರೆಲ್ಲ ವಿವಿಧ ಕಾರಣಗಳಿಗಾಗಿ ಉಲ್ಲೇಖನೀಯರು. ಈ ಗ್ರಾಮೀಣ ಶಾಲೆಯಲ್ಲಿ ಇಲಾಖೆಯ ಶಿಕ್ಷಕರಿಲ್ಲದಿದ್ದರೂ ಆಡಳಿತ ಮಂಡಳಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಪ್ರೋತ್ಸಾಹದೊಂದಿಗೆ ಉತ್ತಮ ರೀತಿಯಲ್ಲಿ ಈ ಶಾಲೆ ನಡೆಯುತ್ತಿದೆ. ಇಲಾಖೆ ಈ ಬಗ್ಗೆ ಗಮನಹರಿಸಬೇಕಾಗಿದೆ
-ಸೌಮ್ಯಾ, ಪ್ರಭಾರ ಮುಖ್ಯೋಪಾಧ್ಯಾಯಿನಿ ಈ ಶಾಲೆಯಲ್ಲಿ ಇಳಿಮುಖವಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗುವಂತೆ ಪ್ರಯತ್ನಿಸಲಾಗುತ್ತಿದೆ ಹಳೆವಿದ್ಯಾರ್ಥಿಗಳನ್ನೆಲ್ಲ ಸಂಪರ್ಕಿಸಿ ಒಂದು ಉತ್ತಮ ಮಾದರಿ ಶಾಲೆಯನ್ನಾಗಿ ಈ ವಿದ್ಯಾಕೇಂದ್ರವನ್ನು ಬೆಳೆಸುವ ಇರಾದೆ ಇದೆ.
– ಬಿ. ಆರ್. ಪ್ರಸಾದ್, ಹಳೆ ವಿದ್ಯಾರ್ಥಿ. - ಧನಂಜಯ ಮೂಡುಬಿದಿರೆ