Advertisement
ಚಿತ್ರದಲ್ಲಿ ಪಾತ್ರದ ಹೆಸರುಗಳು ಬದಲಾಗಿದೆಯಷ್ಟೇ. ಆದರೆ, ಡಿ.ಕೆ.ರವಿ ನಡೆದುಬಂದ ಹಾದಿ, ಅವರ ಕೆಲಸದ ಹಿನ್ನೆಲೆ, ಆ ನಂತರದ ಘಟನೆಗಳು …. ಹೀಗೆ ಎಲ್ಲವನ್ನು ಯಥಾವತ್ತಾಗಿ “ಸ್ಫೂರ್ತಿ’ ಪಡೆದು “ಚಂಬಲ್’ ಮಾಡಿದ್ದಾರೆ ಜೇಕಬ್ ವರ್ಗಿಸ್. ಹಾಗಾಗಿ, ಇದನ್ನು ನೀವು “ನೈಜ ಘಟನೆಯಿಂದ ಪ್ರೇರೇಪಿತ ಸಿನಿಮಾ’ ಎನ್ನಲಡ್ಡಿಯಿಲ್ಲ. ನಾಯಕನ ಹಿನ್ನೆಲೆ ಆರಂಭವಾಗೋದೇ ಕೋಲಾರದಿಂದ.
Related Articles
Advertisement
ಚಿತ್ರದ ಕ್ಲೈಮ್ಯಾಕ್ಸ್ ವಿಚಾರದಲ್ಲಿ ನಿರ್ದೇಶಕರು ಹೇಗೆ ಯೋಚಿಸಿರಬಹುದು ಎಂದು. ಜೇಕಬ್, ತಮ್ಮದೇ ಒಂದು ಯೋಚನೆ ಹಾಗೂ ಲೆಕ್ಕಾಚಾರದ ಮೂಲಕ ಕ್ಲೈಮ್ಯಾಕ್ಸ್ ಕಟ್ಟಿಕೊಟ್ಟಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ನಡೆಯುವ ಗೇಮ್ ಪ್ಲ್ರಾನ್‌ಗಳು, ಅದರ ಹಿಂದಿರುವ ಅಂಶಗಳು ಚಿತ್ರದ ಜೀವಾಳ. ನಿರ್ದೇಶಕ ಜೇಕಬ್ ಈ ಹಿಂದೆ “ಪೃಥ್ವಿ’ಯಲ್ಲಿ ಬಳ್ಳಾರಿಯ ಮೈನಿಂಗ್ ಮಾಫಿಯಾದ ಬಗ್ಗೆ ಹೇಳಿದ್ದರು.
ಈ ಬಾರಿ ನೈಜ ಘಟನೆ ಪ್ರೇರೇಪಿತ ಸಿನಿಮಾ ಮೂಲಕ ದಕ್ಷ ಅಧಿಕಾರಿಗಳು ಹೇಗೆ ಉಸಿರುಕಟ್ಟುವ ವಾತಾವಾರಣದಲ್ಲಿ ಕೆಲಸ ಮಾಡಬೇಕಾಗುತ್ತದೆ, ಕಾನೂನು ಪಾಲಿಸುತ್ತಾ ಭ್ರಷ್ಟರ ಮಟ್ಟ ಹಾಕಲು ಮುಂದಾದರೆ ಅವರ ಕಥೆ ಏನಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳಿದ್ದಾರೆ. ನೀವು ನೀನಾಸಂ ಸತೀಶ್ ಅವರ ಈ ಹಿಂದಿನ ಸಿನಿಮಾಗಳನ್ನು ನೋಡಿದ್ದರೆ ಆ ಇಮೇಜ್ ಅನ್ನು ಪಕ್ಕಕ್ಕೆ ಸರಿಸಿ “ಚಂಬಲ್’ ನೋಡಬೇಕು.
ಆ ಮಟ್ಟಿನ ಬದಲಾವಣೆ ಈ ಪಾತ್ರದಲ್ಲಿದೆ. ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾವನ್ನು ಇಷ್ಟಪಡುವವರಿಗೆ, ಅತಿಯಾದ ಥ್ರಿಲ್, ಟ್ವಿಸ್ಟ್ ಬೇಕು ಎಂದು ಬಯಸುವವರಿಗೆ “ಚಂಬಲ್’ ಹೆಚ್ಚು ರುಚಿ ಕೊಡಲಾರದು. ಅದು ಬಿಟ್ಟು, ಒಂದು ಬೇರೆ ಜಾನರ್ ಸಿನಿಮಾ ನೋಡಬೇಕು, ತಣ್ಣಗೆ ಆ ಸಿನಿಮಾ ನಮ್ಮನ್ನು ತಟ್ಟಬೇಕು ಎಂದುಕೊಂಡವರಿಗೆ “ಚಂಬಲ್’ ಇಷ್ಟವಾಗಬಹುದು. ಮೊದಲೇ ಹೇಳಿದಂತೆ ಇಲ್ಲಿ ನಿರ್ದೇಶಕರು ಯಾವ ಪಾತ್ರವನ್ನು ಅತಿಯಾಗಿ ದುಡಿಸಿಕೊಳ್ಳಲು ಹೋಗಿಲ್ಲ.
ಒಂದು ಗಂಭೀರ ವಿಷಯಕ್ಕೆ ಎಷ್ಟು ಮಾನ್ಯತೆ ಕೊಟ್ಟು ಹೇಳಬೇಕೋ, ಅದನ್ನು ಜೇಕಬ್ ನೀಟಾಗಿ ಮಾಡಿದ್ದಾರೆ. ಹೊಸ ಗೆಟಪ್‌ನಲ್ಲಿ, ಗಂಭೀರ ಪಾತ್ರದಲ್ಲಿ ಸತೀಶ್ ಅವರನ್ನು ನೋಡಬೇಕು ಎಂದು ಬಯಸುವವರು “ಚಂಬಲ್’ ನೋಡಬಹುದು. ಈ ಹಿಂದೆ ತಾವು “ಬ್ರಾಂಡ್’ ಆಗಿದ್ದ ಪಾತ್ರಗಳನ್ನು ಪಕ್ಕಕ್ಕೆ ಸರಿಸಿ ಸತೀಶ್, “ಚಂಬಲ್’ನಲ್ಲಿ ಹೊಸ ರೀತಿ ಕಾಣಿಸಿಕೊಂಡಿದ್ದಾರೆ.
ಜಿಲ್ಲಾಧಿಕಾರಿ ಸುಭಾಶ್ ಆಗಿ, ಆ ಪಾತ್ರವನ್ನು ತುಂಬಾ ಗಂಭೀರವಾಗಿ ಮತ್ತು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಾಯಕಿ ಸೋನು ಗೌಡ ಅವರಿಗೆ ಇಲ್ಲಿ ಹೆಚ್ಚಿನ ಅವಕಾಶವಿಲ್ಲ. ಇದ್ದಷ್ಟು ಹೊತ್ತು ಇಷ್ಟವಾಗುತ್ತಾರೆ. ಉಳಿದಂತೆ ಅಚ್ಯುತ್ ಕುಮಾರ್, ಸತ್ಯ, ರೋಜರ್ ನಾರಾಯಣ್, ಪವನ್ ಸೇರಿದಂತೆ ಇತರರು ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ ಕಥೆಯ ಗಂಭೀರತೆಯನ್ನು ಹೆಚ್ಚಿಸಿದೆ.
ಚಿತ್ರ: ಚಂಬಲ್ನಿರ್ಮಾಣ: ಜೇಕಬ್ ಫಿಲಂಸ್
ನಿರ್ದೇಶನ: ಜೇಕಬ್ ವರ್ಗಿಸ್
ತಾರಾಗಣ: ಸತೀಶ್ ನೀನಾಸಂ, ಸೋನು ಗೌಡ, ಸತ್ಯ, ಅಚ್ಯುತ್‌ಕುಮಾರ್, ರೋಜರ್ ನಾರಾಯಣ್, ಪವನ್ ಮತ್ತಿತರರು. * ರವಿಪ್ರಕಾಶ್ ರೈ