Advertisement

ಮರ ಮಾರಾಟ ಮಾಡಿ ಮಗನ ಸ್ಮಾರಕ ನಿರ್ಮಿಸುವ ಸ್ಥಿತಿ ಬಂದಿದೆ

09:50 AM Feb 17, 2020 | sudhir |

ಕುಣಿಗಲ್‌: ಐಎಎಸ್‌ ಅಧಿಕಾರಿಯಾಗಿ ನಾಡಿಗೆ ಪ್ರಾಮಾಣಿಕ ಸೇವೆ ಸಲ್ಲಿಸಿ, ಬಡ ಜನರಿಗೆ ಆಶ್ರಯವಾಗಿದ್ದ ನನ್ನ ಮಗ ಡಿ.ಕೆ.ರವಿಯ ಸಮಾಧಿ ಹಾಗೂ ಸ್ಮಾರಕವನ್ನು ಮರ ಮಾರಾಟ ಮಾಡಿ ನಿರ್ಮಿಸುವ ಸ್ಥಿತಿ ಬಂದಿದೆ ಎಂದು ಡಿ.ಕೆ.ರವಿ ತಾಯಿ ಗೌರಮ್ಮ ಕಣ್ಣೀರಿಟ್ಟಿದ್ದಾರೆ.

Advertisement

ಶನಿವಾರ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದ ಡಿ.ಕೆ.ರವಿ ಅವರ ಸಮಾಧಿ ಬಳಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ಮಗ ತೀರಿಕೊಂಡು ಐದು ವರ್ಷ ಕಳೆದಿದೆ. ಅವನ ಸಮಾಧಿ ನಿರ್ಮಾಣ ಆಗಿಲ್ಲ. ನನ್ನ ಕೈಯಲ್ಲಿ ಬಿಡಿಗಾಸೂ ಇಲ್ಲ. ಹೊಲದಲ್ಲಿ ಬೆಳೆದಿರುವ ಮರಗಳನ್ನು ಮಾರಿ 1.10 ಲಕ್ಷ ರೂ.ಇಟ್ಟುಕೊಂಡಿದ್ದೇನೆ. ಗೋರಿ ಹಾಗೂ ಸ್ಮಾರಕ ನಿರ್ಮಾಣಕ್ಕೆ ಈ ಹಣ ಸಾಕಾಗುವುದಿಲ್ಲ. ತಾವು ಅಲ್ಪ, ಸ್ವಲ್ಪ ಹಣ ಕೊಡುತ್ತೇವೆ ಎಂದು ಕೋಲಾರ ಜಿಲ್ಲೆಯ ಜನ ಹೇಳಿದ್ದಾರೆ. ಇದರ ನಿರ್ಮಾಣದ ವೆಚ್ಚಕ್ಕೆ ಸುಮಾರು 15 ರಿಂದ 20 ಲಕ್ಷ ರೂ.ತಗುಲಲಿದ್ದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ವೈಯಕ್ತಿಕವಾಗಿ ಎರಡು ಲಕ್ಷ ಹಾಗೂ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‌ ಒಂದು ಲಕ್ಷ ರೂ.ನೀಡಿದ್ದಾರೆ.

ನನ್ನ ದೊಡ್ಡ ಮಗ ರಮೇಶ ಅಪಘಾತದಲ್ಲಿ ಕೈ ಕಾಲು ಮುರಿದುಕೊಂಡು ಹಾಸಿಗೆ ಹಿಡಿದಿದ್ದಾನೆ. ಮೃತ ಡಿ.ಕೆ.ರವಿ ಅವರಿಗೆ ಸರ್ಕಾರದಿಂದ ಬರುವ ಎಲ್ಲಾ ಹಣವನ್ನು ನಿಮಗೆ ಕೊಡುತ್ತೇವೆ ಎಂದು ನನ್ನ ಸೋಸೆ ಡಿ.ಕೆ.ರವಿ ಹೆಂಡತಿ ಕುಸುಮಾ ಹೇಳಿದ್ದರು. ಆದರೆ, ಒಂದು ನಯಾ ಪೈಸೆ ನಮಗೆ ಕೊಡಲಿಲ್ಲ. ಮಗನ ಹಣವನ್ನೆಲ್ಲಾ ಆಕೆಯೇ ಇಟ್ಟುಕೊಂಡಿದ್ದಾಳೆ. ಫೆ 20ರಂದು ಸ್ಮಾರಕಕ್ಕೆ ಚಾಲನೆ ನೀಡಲಾಗುವುದು. ಸ್ಮಾರಕಕ್ಕೆ ಸಹಾಯ ಮಾಡುವವರು ಕುಣಿಗಲ್‌ ತಾಲೂಕು ಹುಲಿಯೂರುದುರ್ಗ ಎಸ್‌ಬಿಐ ಶಾಖೆಯ ಖಾತೆ ನಂಬರ್‌: 54034196402, ಐಎಫ್ಎಸ್‌ಸಿ ಕೋಡ್‌. ಎಸ್‌ಬಿಐಎನ್‌0040160ಗೆ ಜಮಾ ಮಾಡಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next