Advertisement

ದ.ಕ. ಗಲಭೆಯನ್ನು ಎನ್‌ಐಎಗೆ ವಹಿಸಲ್ಲ: ಸಿಎಂ

03:45 AM Jul 12, 2017 | Team Udayavani |

ಕಲಬುರಗಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಗಲಭೆ ಹಾಗೂ ಆರೆಸ್ಸೆಸ್‌ ಮುಖಂಡ ಶರತ್‌ ಹತ್ಯೆ ಪ್ರಕರಣವನ್ನು
ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸುವ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಶರತ್‌ ಮಡಿವಾಳ ಹತ್ಯೆ ಹಾಗೂ ಗಲಭೆ ಪ್ರಕರಣದ ತನಿಖೆ ನಡೆಸುವಂತೆ ರಾಜ್ಯದ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸ್ಥಳಕ್ಕೆ ಹೋಗಿ ವರದಿ ಸಲ್ಲಿಸುವಂತೆ
ತಾಕೀತು ಮಾಡಲಾಗಿದೆ. ಎಲ್ಲವನ್ನೂ ರಾಜ್ಯದ ಪೊಲೀಸರೇ ಸಮರ್ಥವಾಗಿ ನಿರ್ವಹಿಸುತ್ತಾರೆ ಎಂದು ಹೇಳಿದರು.

Advertisement

ಬಿಜೆಪಿಯವರು ಸುಮ್ಮನಿದ್ದರೆ ಎಲ್ಲವೂ ಶಾಂತವಿರುತ್ತದೆ. ಅದನ್ನು ಬಿಟ್ಟು ಸರ್ಕಾರ ಹಾಗೂ ತಮ್ಮ ಮೇಲೆ ಗೂಬೆ
ಕೂರಿಸುತ್ತಿರುವುದು ಕುರಿ-ತೋಳ ಕಥೆ ಹೇಳಿದಂತೆ. ರಮಾನಾಥ್‌ ರೈ, ಯು.ಟಿ. ಖಾದರ್‌ ರಾಜೀನಾಮೆಗೆ ಒತ್ತಾಯಿ
ಸುತ್ತಿರುವುದರಲ್ಲಿ ಯಾವುದೇ ಅರ್ಥವಿಲ್ಲ. ರೈ ಹಿರಿಯರು. 6 ಸಲ ಶಾಸಕರಾಗಿದ್ದಾರೆ. ಬಿಜೆಪಿಯವರು ಸುಮ್ಮನೆ ಗೂಬೆ
ಕೂರಿಸುತ್ತಿದ್ದಾರೆ ಎಂದರು. ಗಲಭೆ ಮಾಡಲು ಜನ ಕೇರಳದಿಂದ ಬಂದಿದ್ದಾರೆ ಎನ್ನುವ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ, ಗಲಭೆ ಮಾಡೋರು ಇಲ್ಲೇ ಇರುವಾಗ ಕೇರಳದಿಂದ ಏಕೆ ಬರ್ತಾರೆ ಎಂದು ಪ್ರಶ್ನಿಸಿದರು.

ನಿಷೇಧಾಜ್ಞೆ ಉಲ್ಲಂಘನೆ, ಗಲಭೆ ಸೃಷ್ಟಿಗೆ ಕಾರಣರಾದವರು ಹಾಗೂ ತಪ್ಪೆಸಗಿದ ಎಲ್ಲರ ಮೇಲೂ ದೂರು ದಾಖಲಿಸುವಂತೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next