Advertisement
ಒಟ್ಟು 297 ಮಾದರಿಗಳನ್ನು ಪರೀಕ್ಷೆಗಾಗಿ ಮಂಗಳವಾರ ಕಳುಹಿಸಲಾಗಿದ್ದು, 536 ವರದಿಗಳು ಬರಲು ಬಾಕಿ ಇವೆ. 46 ಮಂದಿಯನ್ನು ಹೊಸದಾಗಿ ತಪಾಸಣೆ ಗೊಳಪಡಿಸಲಾಗಿದ್ದು, 9 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆಗಾಗಿ ಐವರು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಎನ್‌ಐಟಿಕೆಯಲ್ಲಿ ಒಟ್ಟು 59 ಮಂದಿ ಕ್ವಾರಂಟೈನ್‌ನಲ್ಲಿದ್ದು, 40 ಮಂದಿ ಇಎಸ್‌ಐ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. ಇವರಲ್ಲಿ 8 ಮಂದಿ ಹೊಸದಾಗಿ ದಾಖಲಾದವರು.
ಕೋವಿಡ್ 19 ದೃಢಪಟ್ಟಿರುವ ಬಂಟ್ವಾಳ ಕಸಬಾದ 67 ವರ್ಷದ ವೃದ್ಧೆಗೆ ವೆನಾÉಕ್ ಕೋವಿಡ್-19 ಆಸ್ಪತ್ರೆಯಲ್ಲಿ ಐಸಿಯುನಲ್ಲಿ ವೆಂಟಿಲೇಟರ್ ಅಳವಡಿಕೆಯೊಂದಿಗೆ ಚಿಕಿತ್ಸೆ ಮುಂದುವರಿದಿದೆ. ಅವರ ಆರೋಗ್ಯ ಯಥಾಸ್ಥಿತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ. ಉಳಿದ ರೋಗಿಗಳ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.